ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಕುಂಚಿಟಿಗ-ಒಕ್ಕಲಿಗ ಸಮಾಜದ ಯುವಕರು ಶಿಕ್ಷಣದಿಂದ ವಂಚಿತರಾಗುತ್ತಿದ್ದು ಇದು ಆತಂಕದ ವಿಷಯವಾಗಿದೆ, ಸಮಾಜದ ಯುವಕರು ಶಿಕ್ಷಣಕ್ಕೆ ಒತ್ತು ನೀಡಬೇಕು ಎಂದು ರಾಜ್ಯ ಒಕ್ಕಲಿಗ ಸಂಘದ ನಿರ್ದೇಶಕ, ಬಿಬಿಎಂಪಿ ಡೆಪ್ಯೂಟಿ ಕಮಿಷನರ್ ಜೆ. ರಾಜು ಬೇತೂರು ಪಾಳ್ಯ ಕಿವಿ ಮಾತು ಹೇಳಿದರು.
ಹಿರಿಯೂರು ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಕ್ಯಾಲೆಂಡರ್ ಬಿಡುಗಡೆ ಹಾಗೂ ಚುನಾಯಿತ ಪ್ರತಿನಿಧಿಗಳಿಗೆ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿದರು. ಸ್ಪರ್ಧಾತ್ಮಕ ಯುವಗದಲ್ಲಿ ಯುವಕ-ಯುವತಿಯರು ಶ್ರಮವಹಿಸಿ ಓದಬೇಕು. ಶಿಕ್ಷಣ ಪಡೆಯುವುದರಿಂದಲೇ ಸಮ ಸಮಾಜದ ನಿರ್ಮಾಣ ಮಾಡಲು ಸಾಧ್ಯ ಎಂದು ಜೆ ರಾಜು ಹೇಳಿದರು.
ರಾಜ್ಯ ಒಕ್ಕಲಿಗ ಸಂಘದ 2025ರ ಕ್ಯಾಲೆಂಡರ್ ಬಿಡುಗಡೆಯನ್ನು ಇದೇ ವೇಳೆ ಜೆ ರಾಜು ಮಾಡಿದರು.
ಹಾಗೆ ಪಿಎಲ್‌ಡಿ ಬ್ಯಾಂಕಿನ ನಿರ್ದೇಶಕರಾಗಿ ಆಯ್ಕೆಯಾಗಿರುವ ಎಸ್.ಜೆ ಹನುಮಂತರಾಯ ಮತ್ತು ಶಿವಣ್ಣ ಚಿಲ್ಲಳ್ಳಿ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.
ತಾಲ್ಲೂಕು ಒಕ್ಕಲಿಗ ಸಂಘದ ಅಧ್ಯಕ್ಷ ರಾಮಚಂದ್ರಪ್ಪ, ಕಾರ್ಯದರ್ಶಿ ಏಕಾಂತಪ್ಪ, ಕೆ.ಟಿ ರುದ್ರಮುನಿ, ಪರಮೇನಹಳ್ಳಿ ಭೈರೇಶ್ ಪಟೇಲ್, ತಿಮ್ಮನಹಳ್ಳಿ ರಾಜು ಸೇರಿದಂತೆ ಜೆ ರಾಜು ಅಭಿಮಾನಿ ಬಳಗದ ಪದಾಧಿಕಾರಿಗಳು, ಸಮಾಜದ ಮುಖಂಡರು ಹಾಜರಿದ್ದರು.