ತಾಲೂಕು ಆಡಳಿತ ವತಿಯಿಂದ ಜಗದ್ಗುರು ರೇಣುಕಾಚಾರ್ಯ ಜಯಂತಿ ಆಚರಣೆ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಮಾನವ ಯಾವ ರೀತಿ ದೈವತ್ವವನ್ನು ಪಡೆಯಬೇಕು ಎಂಬ ಸಿದ್ಧಾಂತವನ್ನು ಲೋಕಕ್ಕೆ ನೀಡಿದವರು ಜಗದ್ಗುರು ರೇಣುಕಾಚಾರ್ಯರು ಎಂದು ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ರವಿಕುಮಾರ್ ಹೇಳಿದರು.

 ಅವರು ತಾಲ್ಲೂಕು ಆಡಳಿತ ವತಿಯಿಂದ ತಾಲ್ಲೂಕು  ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಶ್ರೀ ಜಗದ್ಗುರು ರೇಣುಕಾಚಾರ್ಯರ ಜಯಂತಿಯಲ್ಲಿ ಭಾಗವಹಿಸಿ ಮಾತನಾಡಿ ಜಗತ್ತಿಗೆ ಆಧ್ಯಾತ್ಮಿಕ ಸಮಾಜ ಸುಧಾರಣೆ ವಚನ ಸಾಹಿತ್ಯ ಕೊಡುಗೆಯನ್ನು ನೀಡಿದವರು ರೇಣುಕಾಚಾರ್ಯರು ಅವರ ತತ್ವ ಆದರ್ಶಗಳನ್ನ ಇಂದಿನ ಜನಾಂಗ ಪಾಲಿಸಬೇಕಾಗಿದೆ ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ವೀರಶೈವ ಮಹಾಸಭಾದ ಜಿಲ್ಲಾ ನಿರ್ದೇಶಕರಾದ ಲತಾ ಆರಾಧ್ಯ ಅವರು ಮಾತಾಡಿ ವೀರಶೈವ ಧರ್ಮವನ್ನು ಸ್ಥಾಪಿಸಿ  ಇಷ್ಟಲಿಂಗ ಪೂಜಾ ತತ್ವವನ್ನು ಹೇಳಿಕೊಟ್ಟವರು ಶ್ರೀ ರೇಣುಕಾಚಾರ್ಯರು ಎಂದರು, ಕಾರ್ಯಕ್ರಮದಲ್ಲಿ ತಾಲೂಕು ವೀರಶೈವ ಲಿಂಗಾಯಿತ  ಸಮಾಜದ ಅಧ್ಯಕ್ಷರಾದ ಸೋಮ ರುದ್ರ  ಶರ್ಮ, ಕಾರ್ಯದರ್ಶಿ ಪುಟ್ಟ  ಬಸವರಾಜು , ಸಹ ಕಾರ್ಯದರ್ಶಿ ವಿ ಸಿ ಜ್ಯೋತಿ ಕುಮಾರ್, ಗ್ರೇಡ್ 2 ತಹಸಿಲ್ದಾರ್ ಪ್ರಕಾಶ್, ವೀರಶೈವ ಮಹಾಸಭಾ ತಾಲೂಕ ಅಧ್ಯಕ್ಷ ಸುಜಯ್, ಜಿಲ್ಲಾ ಯುವ ಘಟಕದ ನಾಗಸಂದ್ರದ ಲೋಕೇಶ್, ನೌಕರರ ಸಂಘದ ಅಧ್ಯಕ್ಷ ಎಂಎಸ್ ರಾಜಶೇಖರ್, ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ನಿರ್ದೇಶಕರಾದ ಸುಂದರೇಶ್, ಮೋಹನ್ ಕುಮಾರ್ ಪ್ರಭಾಕರ್, ಹಾಗೂ ಎಲ್ಲ ಸಮಾಜದ ಮುಖಂಡರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

 

Share This Article
error: Content is protected !!
";