ಜಾತಿ ಹಾಗೂ ಉಪಜಾತಿ ಕಾಲಂನಲ್ಲಿ ರೆಡ್ಡಿ ಎಂದು ಬರೆಸಿ-ಜಗದೀಶ್ ರೆಡ್ಡಿ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ರಾಜ್ಯದಲ್ಲಿ ಸೆ.
22ರಿಂದ ಪ್ರಾರಂಭವಾಗುವ ಸಾಮಾಜಿಕ, ಶೈಕ್ಷಣಿಕ ಗಣತಿ ವೇಳೆ ಸಮಾಜದ ಬಂದುಗಳು ಜಾತಿ ಹಾಗೂ ಉಪಜಾತಿ ಕಾಲಂ ನಲ್ಲಿ ರೆಡ್ಡಿ ಎಂದು ನಮೂದಿಸಬೇಕೆಂದು ನಗರಸಭೆ ಮಾಜಿ ಅಧ್ಯಕ್ಷ ಹಾಗೂ ವೇಮನ ರೆಡ್ಡಿ ಸಂಘದ ತಾಲೂಕು ಅಧ್ಯಕ್ಷ ಜಗದೀಶ್ ರೆಡ್ಡಿ ಹೇಳಿದರು.

ನಗರದ ಪ್ರವಾಸಿ ಮಂದಿರದಲ್ಲಿ ತಾಲೂಕು ವೇಮನ ರೆಡ್ಡಿ ಸಂಘದಿಂದ ನಡೆದ ಸುದ್ದಿ ಗೋಷ್ಠಿಯಲ್ಲಿ ಜಗದೀಶ್ ರೆಡ್ಡಿ ಮಾತನಾಡಿ ಕಳೆದ ಜನಗಣತಿ ವೇಳೆ ನಮ್ಮ ರೆಡ್ಡಿ ಸಮಾಜದ ಜನಸಂಖ್ಯೆ ಅತಿ ಕಡಿಮೆ ಎಂಬಂತೆ ಬಿಂಬಿಸಲಾಗಿತ್ತು. ಕಾರಣ ನಮ್ಮ ರೆಡ್ಡಿ ಸಮಾಜದಲ್ಲಿ ಹಲವಾರು ಉಪ ಪಂಗಡಗಳಿದ್ದು ಅದನ್ನು ಪರಿಗಣಿಸಿ ಜೊತೆಗೆ ಗಣತಿದಾರರ ಮಾಹಿತಿ ಕೊರತೆಯಿಂದಾಗಿ ರೆಡ್ಡಿ ಸಮಾಜವನ್ನು ಅಲ್ಪ ಸಂಖ್ಯಾತರಲ್ಲಿ ಅಲ್ಪ ಸಂಖ್ಯಾತರಂತೆ ಬಿಂಬಿಸಲಾಗಿತ್ತು.

- Advertisement - 

ಇದರಿಂದ ನಮ್ಮ ಸಮಾಜಕ್ಕೆ ಸಿಗಬೇಕಿದ್ದ ರಾಜಕೀಯ ಸ್ಥಾನಮಾನ, ಸರ್ಕಾರದ ಸವಲತ್ತುಗಳು ಮರೀಚಿಕೆ ಯಾಗಿವೆ. ಒಂದು ಅಂದಾಜಿನ ಪ್ರಕಾರ ರಾಜ್ಯದಲ್ಲಿ ರೆಡ್ಡಿ ಸಮಾಜದ ಜನಸಂಖ್ಯೆ ನಲವತ್ತು ಲಕ್ಷಕ್ಕೂ ಹೆಚ್ಚಿದೆ. ಒಳ ಪಂಗಡ ಗಳಿಂದಾಗಿ ಇದು ಮರೆಯಾಗಿದೆ. ಹೀಗಾಗಿ ಶೈಕ್ಷಣಿಕ ಗಣತಿದಾರರು ಬಂದಾಗ ಸಮಾಜದ ಬಂದುಗಳು ಒಳ ಪಂಗಡಗಳನ್ನು ಬಿಟ್ಟು ರೆಡ್ಡಿ ಎಂದೇ ಜಾತಿ ಹಾಗೂ ಉಪಜಾತಿ ಕಾಲಂ ನಲ್ಲಿ ಬರೆಸಬೇಕೆಂದು ಸಮಾಜದ ಬಂದುಗಳಿಗೆ ಕರೆ ಕೊಟ್ಟರು.

ತಾಲೂಕು ಪ್ರದಾನ ಕಾರ್ಯದರ್ಶಿ ಹನುಮಂತ ರೆಡ್ಡಿ ಮಾತನಾಡಿ ರೆಡ್ಡಿ ಸಮಾಜ ರಾಜ್ಯದಲ್ಲಿ ಆಳ್ವಿಕೆ ಮಾಡಿದಂತ ಸಮಾಜ ರೆಡ್ಡಿ ಲಿಂಗಾಯ್ತ, ರೆಡ್ಡಿ ಯಾದವ, ರೆಡ್ಡಿ ಕುರುಬ ಸೇರಿದಂತೆ ಹತ್ತಾರು ಒಳ ಪಂಗಡ ಗಳಿಂದಾಗಿ ರೆಡ್ಡಿ ಸಮಾಜ ತೀರಾ ಅಲ್ಪ ಸಂಖ್ಯಾತರಂತೆ ಬಿಂಬಿತರಾಗಿದ್ದೇವೆ. ಇದರಿಂದ ಎಲ್ಲಾ ರೀತಿಯಿಂದಲೂ ನಮ್ಮ ಸಮಾಜ ಹಿಂದುಳಿಯುವಂತಾಗಿದೆ. ಆದ್ದರಿಂದ ಗಣತಿ ಸಮಯದಲ್ಲಿ ಸಮಾಜದ ಬಂದುಗಳು ಕಡ್ಡಾಯವಾಗಿ ಎರಡು ಕಾಲಂ ಗಳಲ್ಲಿ ರೆಡ್ಡಿ ಎಂದು ಬರೆಸಬೇಕೆಂದು ಹೇಳಿದರು.     

- Advertisement - 

ಸುದ್ದಿ ಗೋಷ್ಠಿಯಲ್ಲಿ ಸಂಘದ ತಾಲೂಕು ಗೌರವಾಧ್ಯಕ್ಷ ಜೈ ಶಂಕರ್, ಉಪಾಧ್ಯಕ್ಷ ಶಿವಾರೆಡ್ಡಿ, ಸಂಘಟನಾ ಕಾರ್ಯದರ್ಶಿ ರಾಮಾಂಜಿನಪ್ಪ, ನಿರ್ದೇಶಕರಾದ ರಾಮಚಂದ್ರ ರೆಡ್ಡಿ, ಸಂಗಪ್ಪ, ಶ್ರೀನಿವಾಸ್ ಮುಂತಾದವರು ಹಾಜರಿದ್ದರು.

 

 

 

Share This Article
error: Content is protected !!
";