ಚಂದ್ರವಳ್ಳಿ ನ್ಯೂಸ್, ದಾವಣಗೆರೆ :
ರಾಷ್ಟ್ರೀಯ ಮಾರ್ಷಲ್ ಆರ್ಟ್ಸ್ ಮೋಯ್ ಥೈ ಕಿಕ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ದಾವಣಗೆರೆಯ ಕ್ರೀಡಾಪಟು ಜಗದೀಶ್ ಚಿನ್ನದ ಪದಕ ಗೆದ್ದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.
ನಗರದ ಹಳೇ ಕುಂದುವಾಡದ ಶಿವಪ್ಪ, ಗಂಗಮ್ಮ ದಂಪತಿಯ ಪುತ್ರ ಜಗದೀಶ್ ಅವರು ಅಸ್ಸಾಂ ರಾಜ್ಯದ ಗುವಾಹಟಿಯಲ್ಲಿ ನಡೆದ ರಾಷ್ಟ್ರೀಯ ಮಾರ್ಷಲ್ ಆರ್ಟ್ಸ್ ಮೋಯ್ ಥೈ ಕಿಕ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ರಾಜ್ಯ ಪ್ರತಿನಿಧಿಸಿ ಚಿನ್ನದ ಪದಕ ಗೆದ್ದು ತಂದಿದ್ದಾರೆ.
ಈ ಮೂಲಕ ಇಂಡೋನೇಷ್ಯಾದಲ್ಲಿ ಫೆ. 25 ಕ್ಕೆ ಜರುಗುವ ಅಂತಾರಾಷ್ಟ್ರೀಯ ಮಟ್ಟದ ಕಿಕ್ ಬಾಕ್ಸಿಂಗ್ ಸ್ಪರ್ಧೆಗೆ ಜಗದೀಶ್ ಅವರು ಆಯ್ಕೆ ಆಗಿದ್ದು ಭಾರತ ದೇಶ ಪ್ರತಿನಿಧಿಸಲಿದ್ದಾರೆ.
ದಾವಣಗೆರೆಯ ಜಗದೀಶ್‌ಕಿಕ್ ಬಾಕ್ಸಿಂಗ್ ಪಟು. ಇವರು ಕಿಕ್ ಬಾಕ್ಸಿಂಗ್ ಕ್ರೀಡೆಯನ್ನು ಉಸಿರಾಗಿಸಿಕೊಂಡಿದ್ದಾರೆ. ಮನೆಯಲ್ಲಿ ಕಿತ್ತು ತಿನ್ನುವ ಬಡತನ ಇದ್ದು ಕಷ್ಟದಲ್ಲೇ ಅರಳಿದ ಪ್ರತಿಭೆ ಜಗದೀಶ್ ಸಾಕಷ್ಟು ಪರಿಶ್ರಮ ಪಟ್ಟು ಸಾಧನೆ ಮಾಡಿದ್ದಾರೆ.
ರಾಷ್ಟ್ರೀಯ ಮಾರ್ಷಲ್ ಆರ್ಟ್ಸ್ನ ಮೋಯ್ ಥೈ ಕಿಕ್ ಬಾಕ್ಸಿಂಗ್ ಫೈನಲ್ ಸ್ಪರ್ಧೆಯಲ್ಲಿ 58 ಕೆಜಿ ವಿಭಾಗದಲ್ಲಿ ಕಿಕ್ ಬಾಕ್ಸರ್ ಜಗದೀಶ್ ಮೇಘಾಲಯ ರಾಜ್ಯದ ಕಿಕ್ ಬಾಕ್ಸರ್ ಪಟುವನ್ನು ಮಣಿಸಿ ಗೆದ್ದು ಬೀಗಿದ್ದಾರೆ.

ಈ ಮೂಲಕ ಇಂಡೋನೇಷ್ಯಾದಲ್ಲಿ ಜರಗುವ ಅಂತಾರಾಷ್ಟ್ರೀಯ ಮಟ್ಟದ ಮೋಯ್ ಥೈ ಕಿಕ್ ಬಾಕ್ಸಿಂಗ್ ಸ್ಪರ್ಧೆಗೆ ಆಯ್ಕೆಗೊಂಡಿದ್ದಾರೆ. ಇವರಿಗೆ ಈಗಲ್ ಫಿಟ್ನೆಸ್ನ ವೆಂಕಿ ಸೆನ್ಸೈ ಎಂಬುವವರು ತರಬೇತಿ ನೀಡಿದ್ದಾರೆ.

