ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ :
ದೇಶದ ಕೋಟ್ಯಾಂತರ ಜನರ ಇಂದಿಗೂ ಶಿಲ್ಪಕಲೆಯನ್ನು ಆರಾಧಿಸಿ, ಗೌರವಿಸುತ್ತಾರೆ ಎಂದರೆ ಅದಕ್ಕೆಲ್ಲಾ ಮೂಲಕಾರಣ ಅಮರಶಿಲ್ಪಿ ಜಕಣಚಾರಿಯವರು. ಶಿಲ್ಪಕಲೆಗೆ ಜೀವಂತಿಕೆಯನ್ನು ತಂದುಕೊಟ್ಟ ಮಹಾನುಭಾವರು. ಅವರ ಕಲೆ ಇಂದು ವಿಶ್ವಪ್ರಸಿದ್ದಿಯಾಗಿದೆ, ಅಮರಶಿಲ್ಪಿ ಜಕರಣಚಾರಿಯವರ ಹೆಸರು ಸದಾಅಮರವಾಗಿರುತ್ತದೆ ಎಂದು ಕ್ಷೇತ್ರದ ಶಾಸಕ, ಸಣ್ಣ ಕೈಗಾರಿಕೆ ಅಭಿವೃದ್ದಿ ಮಂಡಳಿ ಅಧ್ಯಕ್ಷ ಟಿ.ರಘುಮೂರ್ತಿ ತಿಳಿಸಿದರು.
ಅವರು, ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಮ್ಮಿಕೊಂಡಿದ್ದ ಅಮರಶಿಲ್ಪಿ ಜಕಣಚಾರಿ ಜಯಂತಿ ಕಾರ್ಯಕ್ರಮವನ್ನು ಅವರ ಭಾವಚಿತ್ರಕ್ಕೆ ಪುಪ್ಪನಮನ ಸಲ್ಲಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ರಾಜ್ಯ ಸರ್ಕಾರ ಅವರ ಶಿಲ್ಪಕಲೆಯ ಗೌರವಾರ್ಧ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಮೂಲಕ ಕರ್ನಾಟಕರಾಜ್ಯಾದ್ಯಂತ ಮಹಾನ್ ಶಿಲ್ಪಿ ಜಯಂತಿ ಆಚರಣೆಗೆ ಅವಕಾಶ ಮಾಡಿಕೊಟ್ಟಿದೆ. ಕ್ಷೇತ್ರದ ಜನತೆ ಹಾಗೂ ವಿಶ್ವಕರ್ಮ ಸಮುದಾಯದ ಪರವಾಗಿ ನಾನು ಸರ್ಕಾರವನ್ನು ಅಭಿನಂದಿಸುತ್ತೇನೆ. ವಿಶ್ವಕರ್ಮ ಸಮಾಜದ ಬಂಧುಗಳು ಅಮರಶಿಲ್ಪಿ ಜಕಣಚಾರಿಯವರ ಆದರ್ಶಗಳನ್ನು ಮೈಗೂಡಿಸಿಕೊಂಡು ಮುನ್ನಡೆಯಿರಿ ಎಂದು ಶಾಸಕರು ಕರೆ ನೀಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ತಹಶೀಲ್ಧಾರ್ ರೇಹಾನ್ಪಾಷ, ಅಮರಶಿಲ್ಪಿ ಜಕಣಚಾರಿ ಮಹಾನೂಭಾವರ ಜಯಂತಿ ಆಚರಣೆ ನಮಗೆ ಹೆಮ್ಮೆತಂದಿದೆ. ಕಳೆದ ಸಾವಿರಾರು ವರ್ಷಗಳಿಂದ ಶಿಲ್ಪಕಲೆಗೆ ಮೌಲ್ಯವನ್ನು ತಂದುಕೊಟ್ಟವರು. ಅಮರಶಿಲ್ಪಿ ಜಕಣಚಾರಿಯವರು. ನಾವೆಲ್ಲರೂ ಸದಾಕಾಲ ಅವರಲ್ಲಿದ್ದ ಶಿಲ್ಪಕಲೆಯ ದಿವ್ಯ ಜ್ಞಾನದ ಬಗ್ಗೆ ಚಿಂತನೆ ನಡೆಸಬೇಕೆಂದರು.
ಕಾರ್ಯಕ್ರಮದಲ್ಲಿ ಲಕ್ಷ್ಮಣಚಾರ್, ಶ್ರೀಕಂಠಚಾರ್, ಶ್ರೀನಿವಾಸ್ಚಾರ್ರವರನ್ನು ಸನ್ಮಾನಿಸಲಾಯಿತು. ಗ್ಯಾರಂಟಿ ಸಮಿತಿ ಅಧ್ಯಕ್ಷ ಗದ್ದಿಗೆತಿಪ್ಪೇಸ್ವಾಮಿ, ಕುಶಲ ಕರ್ಮಿ ವಿಭಾಗದ ರಾಜ್ಯಾಧ್ಯಕ್ಷ ಆರ್.ಪ್ರಸನ್ನಕುಮಾರ್, ಅಧ್ಯಕ್ಷ ಚಂದ್ರಶೇಖರಚಾರ್, ಕಾರ್ಯದರ್ಶಿ ಸಿ.ಈ.ಪ್ರಸನ್ನ, ವೆಂಕಟೇಶಚಾರ್, ಮಹಿಳಾಸಂಘದ ಅಧ್ಯಕ್ಷೆ ಉಮಾದೇವಿ, ರಾಜೇಶ್ವರಿ, ಸರಸ್ವತಮ್ಮ, ಕಮಲಮ್ಮ, ಜಿ.ಓ.ಸುಮಲತ, ಜಯವೀರಚಾರ್ ಪೌರಾಯುಕ್ತ ಜಗರೆಡ್ಡಿ ಮುಂತಾದವರು ಉಪಸ್ಥಿತರಿದ್ದರು.

