ಭಾರೀ ಮಳೆಗೆ ಜಕ್ಕಲ ಮಡುಗು ಜಲಾಶಯ ಭರ್ತಿ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಕಳೆದ ಹಲವಾರು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದ ತಾಲ್ಲೂಕಿನಾದ್ಯಂತ ಹಾಗು ರಾಜ್ಯದಲ್ಲಿ ಅತಿವೃಷ್ಠಿಯಿಂದಾಗಿ
 ಕೆರೆ ಕುಂಟೆಗಳು ತುಂಬಿದ್ದು ದೊಡ್ಡಬಳ್ಳಾಪುರ ಹಾಗು ಚಿಕ್ಕಬಳ್ಳಾಪುರ ಬೆಟ್ಟ ಗುಡ್ಡದಲ್ಲಿ ಕಳೆದ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಮುಂಜಾನೆ ಜಕ್ಕಲ ಮಡುಗು ಜಲಾಶಯ ಸಂಪೂರ್ಣ ಭರ್ತಿಯಾಗಿ ಕೋಡಿ ಹರಿದಿದೆ.
ಜಲಾಶಯದ ನೀರನ್ನ ನಂಬಿದ ಚಿಕ್ಕಬಳ್ಳಾಪುರ ಮತ್ತು ದೊಡ್ಡಬಳ್ಳಾಪುರ ಜನರು ತುಂಬಿ ಹರ್ಷ ತಂದಿದೆ.

ದೊಡ್ಡಬಳ್ಳಾಪುರ ಮತ್ತು ಚಿಕ್ಕಬಳ್ಳಾಪುರ ತಾಲೂಕಿನ ಗಡಿಭಾಗದಲ್ಲಿರುವ ಜಕ್ಕಲ ಮಡುಗು ಜಲಾಶಯ ಅವಳಿ ನಗರಗಳ ಕುಡಿಯುವ ನೀರು ಪೂರೈಸುವ ನೀರಿನ ಸೆಲೆಯಾಗಿದ್ದು, ಕಳೆದ ವರ್ಷ ಮಳೆಯ ಕೊರತೆಯಿಂದ ಜಲಾಶಯ ಕೋಡಿ ಬಿದ್ದಿರಲಿಲ್ಲ.

ಎರಡು ವರ್ಷಗಳ ಹಿಂದೆ ಅಂದರೆ, 2022ರ ಜೂನ್ ತಿಂಗಳಲ್ಲೇ ಕೋಡಿ ಬಿದ್ದು ಎರಡು ನಗರಗಳಲ್ಲಿ ಕಳೆದ ಎರಡು ವರ್ಷದಿಂದ ಯಾವುದೇ ನೀರಿನ ಸಮಸ್ಯೆಯಾಗದಂತ ಪರಿಸ್ಥಿತಿ ಇತ್ತು, ಇದೀಗ ಜಲಾಶಯ ತುಂಬಿರುವುದು ಎರಡು ವರ್ಷಗಳ ನೀರಿನ ಸಮಸ್ಯೆಯನ್ನ ದೂರ ಮಾಡಿದೆ. 

ರಾಜ್ಯದಲ್ಲಿ ಮುಂಗಾರ ಮಳೆಯ ಪ್ರಭಾವ ಕಡಿಮೆ ಇದ್ದರು, ಹಿಂಗಾರು ಮಳೆಯ ಅರ್ಭಟ ಜೋರಾಗಿದೆ, ಕಳೆದ 15 ದಿನಗಳಿಂದ ರಾಜ್ಯದಲ್ಲಿ ಸತತವಾಗಿ ಮಳೆಯಾಗುತ್ತಿದ್ದು, ನಿನ್ನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಇಡೀ ರಾತ್ರಿ ಸುರಿದ ಮಳೆಯಿಂದ ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಹರಿದು ಬಂದ  ಜಲಾಶಯ ಮಂಗಳವಾರ ಮುಂಜಾನೆ ಕೋಡಿ ಬಿದ್ದಿದೆ.

 

- Advertisement -  - Advertisement -  - Advertisement - 
Share This Article
error: Content is protected !!
";