ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ವಕ್ಫ್‌ಆಸ್ತಿ ಕಬಳಿಸಲು “ಕೈ” ಜೋಡಿಸಿದ ಸಚಿವ ಜಮೀರ್ ಅಹಮದ್ ಖಾನ್ ವಿರುದ್ಧ ಜೆಡಿಎಸ್ ಆಕ್ರೋಶ ವ್ಯಕ್ತಪಡಿಸಿದೆ.
ಸಚಿವ ಜಮೀರ್‌ಆಪ್ತ ಹಾಗೂ ವಕ್ಫ್ ಬೋರ್ಡ ಮಾಜಿ ಅಧ್ಯಕ್ಷ ಅನ್ವರ್ ಪಾಷಾ, ಚಿತ್ರದುರ್ಗದಲ್ಲಿ 6 ಎಕರೆ ಜಾಗವನ್ನು ಕಬಳಿಸಿದ್ದಾರೆ. ಈ ವಿಚಾರವಾಗಿ ನ್ಯಾಯಕ್ಕಾಗಿ ಆಗ್ರಹಿಸಿ, ಇಮ್ತಿಯಾಜ್ ಎಂಬ ವ್ಯಕ್ತಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.
ಆದರೆ ಭೂಗಳ್ಳ ಅನ್ವರ್ ಪಾಷಾ ಬೆನ್ನಿಗೆ ನಿಂತ ಜಮೀರ್ ಅಹಮದ್, ನ್ಯಾಯ ಕೇಳಿದ ಇಮ್ತಿಯಾಜ್ ಗೆ ಕರೆ ಮಾಡಿ ಧಮ್ಕಿ ಹಾಕಿದ್ದಾರೆ ಎಂದು ಜೆಡಿಎಸ್ ಕಿಡಿ ಕಾರಿದೆ.
ವಕ್ಫ್‌ಆಸ್ತಿ ಒತ್ತುವರಿ ಮಾಡಿರುವ ಅನ್ವರ್‌ಗೂ, ಜಮೀರ್‌ಸಾಬ್‌ಗೂ ಯಾವುದೇ ಸಂಬಂಧ ಇಲ್ಲ ಎಂದು ಕ್ಷಮಾಪಣೆ ಕೇಳಿ ವೀಡಿಯೋ ಮಾಡಿನನಗೆ ಕಳಿಸು ಎಂದು ಜಮೀರ್, ಆ ಯುವಕನಿಗೆ ಬೆದರಿಸಿರುವ ಆಡಿಯೋ ವೈರಲ್ ಆಗಿದೆ. ಸರ್ಕಾರದ ಆಸ್ತಿಯನ್ನು ಲೂಟಿ ಹೊಡೆಯಲು ಸಚಿವ ಸ್ಥಾನವನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಜಮೀರ್‌ಅವರನ್ನು ಸಂಪುಟದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿತ್ತುಹಾಕಬೇಕು ಎಂದು ಜೆಡಿಎಸ್ ಆಗ್ರಹ ಮಾಡಿದೆ.