ಚಂದ್ರವಳ್ಳಿ ನ್ಯೂಸ್, ದಾವಣಗೆರೆ:
ಮುಡಿ ಮಲ್ಲಿಗೆ
ಘಮ ಘಮಿಸುವ
ಅರಳಿದ ಮಲ್ಲಿಗೆ
ಮನದಿನಿಯನ ಮುಗುಳ್ನಗೆಯ
ಸಂಭ್ರಮದ
ಕೈಯ ಬೆರಳಲಿ
ಕುಲುಕಾಡುತ
ಮುಡಿಯೆರಿ
ಸಂಭ್ರಮಿಸುವ
ಓ..ಮಲ್ಲಿಗೆ
ನಳನಳಿಸುತಲೆ
ಘಮಲಿಸುತ
ಸುಮಂಗಲಿಯ
ಮುಡಿಯೇರಿ
ಆಕೆಯ ಮುಖದಲ್ಲೂ
ಮಂದಹಾಸ ಬೀರಿಸಿ
ಮನದನ್ನೆಯ
ಚಲುವ ಹೆಚ್ಚಿಸುವ
ಓ..ಮಲ್ಲಿಗೆ
ಮನದಲ್ಲೇ
ನೂರ್ಬಾವ ಸೂಸಿಸಿ
ಮನದಾಸೆಯ ಇಮ್ಮಡಿಸಿ
ಶೃಂಗಾರ ಭಾವದಲ್ಲಿ
ಚಲುವ ಹೆಚ್ಚಿಸಿ
ಬದುಕಿಗೆ ಜೀವ ತುಂಬುವ
ಓ…ಮಲ್ಲಿಗೆ
ಎಲ್ಲೋ ಬೆಳೆದು
ಎಲ್ಲೋ ಸೇರಿ
ಎಲ್ಲೋ ಪಯಣಿಸಿ
ಮದುವಣಗಿತ್ತಿಯಂತೆ
ರಾರಾಜಿಸಿ
ಹಲವು ಮುಡಿಗಳಿಗೆ
ಕೆಲವು ಅಡಿಗಳಿಗೆ
ಅಲಂಕರಿಸಿ ಚಿತ್ತಾರವ
ಬಿಡಿಸಿ ಯಾವತ್ತೂ
ಘಮಘಮಿಸುವ
ಓ..ಮಲ್ಲಿಗೆ
ರಚನೆ : ಗುಜ್ಜರ್, ದಾವಣಗೆರೆ 9036389240