ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ತಾಲೂಕಿನ ಕತ್ತೆಹೊಳೆಯಿಂದ ಉಡುವಳ್ಳಿ ಕೆರೆಗೆ ಪೂರಕ ನಾಲೆ ನಿರ್ಮಿಸುವುದರ ಜೊತೆಯಲ್ಲಿ ವೇದಾವತಿ ನದಿಯಿಂದ ನೀರು ಹರಿಸುವಂತೆ ಒತ್ತಾಯಿಸಿ ರೈತರು ಏಪ್ರಿಲ್-4 ರಂದು ಬೃಹತ್ ಕಾಲ್ನಡಿಗೆ ಜಾಥಾ ಹಮ್ಮಿಕೊಂಡಿದ್ದಾರೆ.
ಏ.4ರಂದು ಶುಕ್ರವಾರ ಬೆಳಗ್ಗೆ 110 ಗಂಟೆಗೆ ಹಿರಿಯೂರಿನ ತುಳಸಿ ಕಲ್ಯಾಣ ಮಂಟಪದಿಂದ ತಾಲ್ಲೂಕು ಕಛೇರಿಯವರೆಗೆ ಬೃಹತ್ ಕಾಲ್ನಡಿಗೆ ಜಾಥಾ ಹಮ್ಮಿಕೊಳ್ಳಲಾಗಿದೆ. ಉಡುವಳ್ಳಿ, ಯಲ್ಲದಕೆರೆ, ವಿವಿ ಪುರ, ದಿಂಡಾವರ, ಗೌಡನಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ರೈತ ಭಾಂದವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ಹೋರಾಟಗಾರ ಪರಮೇನಹಳ್ಳಿ ಮಹಲಿಂಗಪ್ಪ ಮನವಿ ಮಾಡಿದ್ದಾರೆ.
ಮೇಕೇನಹಳ್ಳಿ ಹತ್ತಿರ ಇರುವ ವೇದಾವತಿ ನದಿಯಿಂದ ಇಪ್ಪೆ ಕಣಿವೆ ಭೂತಪ್ಪ ದೇವಸ್ಥಾನ ಹತ್ತಿರದ ಉಡುವಳ್ಳಿ ಕೆರೆಗೆ ಇರುವ ಪೂರಕ ನಾಲೆಯ ಮುಖಾಂತರ ನೀರು ಹರಿಸಬೇಕು. ನೀರು ಹರಿಸದಿದ್ದರೆ ಈ ಭಾಗದ ಪ್ರಾಣಿ, ಪಕ್ಷಿಗಳಿಗೆ ಹಾಗೂ ಜಾನುವಾರುಗಳಿಗೆ, ಜನರಿಗೆ ನೀರು ಇರುವುದಿಲ್ಲ. ನೀರು ಹರಿಸುವುದರಿಂದ ಎಷ್ಟೋ ಪ್ರಾಣಿ, ಪಕ್ಷಿಗಳು ಮತ್ತು ಜಾನುವಾರುಗಳಿಗೆ ಕುಡಿಯಲು ನೀರು ಕಲ್ಪಿಸಿದಂತಾಗುತ್ತದೆ. ಹಾಗೂ ಅಂತರ್ಜಲ ಮಟ್ಟ ಕೂಡ ವೃದ್ದಿಯಾಗಿ ರೈತರ ಬಾಳು ಹಸನಾಗುತ್ತದೆ. ಆದ್ದರಿಂದ ಉಡುವಳ್ಳಿ ಕೆರೆಗೆ ಈ ಭಾಗದಿಂದ ನೀರು ಹರಿಸಿದರೆ ಶಾಶ್ವತವಾಗಿ ಯಲ್ಲದಕೆರೆಯವರೆಗೂ ಅಂತರ್ಜಲ ವೃದ್ಧಿಯಾಗುತ್ತದೆ ಎಂದು ರೈತ ಹೋರಾಟಗಾರರು ಮನವಿ ಮಾಡಿದ್ದಾರೆ.
ಹೋರಾಟಕ್ಕೆ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರು ರೈತರ ಸಂಘಟನೆಗಳು ರೈತ ಮಹಿಳೆಯರು ಹಾಗೂ ರೈತರ ಬಗ್ಗೆ ಕಾಳಜಿ ಇರುವ ತಾಲೂಕಿನ ರಾಜಕೀಯ ಪಕ್ಷಗಳ ಮುಂಖಡರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಹೋರಾಟ ಯಶ್ವಸಿಗೊಳ್ಳಬೇಕಾಗಿ ಮನವಿ ಮಾಡಿದ್ದಾರೆ.