ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ನಗರದ ಹೊರ ವಲಯದ ಎಂ.ಕೆ ಹಟ್ಟಿ ನಿವಾಸಿ ವೇ. ಎಂ ಮಲ್ಲಯ್ಯ(90) ಅವರು ತಮ್ಮ ನಿವಾಸದಲ್ಲಿ ಲಿಂಗೈಕ್ಯ ಆಗಿದ್ದಾರೆ.
ಮೃತರಿಗೆ ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
ಶ್ರೀಯುತರು, ಜಯದೇವ ಹಾಸ್ಟೆಲ್ ಮ್ಯಾನೇಜರ್ ಆಗಿ ಸುಮಾರು 30-40 ವರ್ಷಗಳು, ಕಾಲ ಸೇವೆ ಸಲ್ಲಿಸುತ್ತಾ ‘ಮ್ಯಾನೇಜರ್ ಮಲ್ಲಯ್ಯ‘ ಎಂದೇ ಹೆಸರಾಗಿದ್ದರು.
ಚಿತ್ರದುರ್ಗ ಬೃಹನ್ಮಠದ ಏಜೆಂಟ್ ಆಗಿ ಮುರುಘಾಮಠದ ಖಾಸಾ ಮಠಗಳ ಉಸ್ತುವಾರಿ ನೋಡಿಕೊಳ್ಳುತ್ತಾ ಸುಮಾರು 15ವರ್ಷಗಳಿಂದ ವಿಶ್ರಾಂತಿ ಪಡೆಯುತ್ತಿದ್ದರು.
ಲಿಂಗೈಕ್ಯರ ಆತ್ಮಕ್ಕೆ ಬಸವಾದಿ ಶಿವಶರಣರು ಹಾಗೂ ಶ್ರೀ ಗುರು ಮುರುಘೇಶ ಚಿರಶಾಂತಿ ಕರುಣಿಸಲೆಂದು ಸಮಾಜದ ಪರವಾಗಿ ರುದ್ರಮೂರ್ತಿ ಸಂತಾಪ ವ್ಯಕ್ತಪಡಿಸಿದ್ದಾರೆ.