ಜೆಡಿಎಸ್ ಕಾರ್ಯಕರ್ತರು ಎಂದರೆ ಹೀಗೆ…
ಎಂ.ಎಲ್.ಗಿರಿಧರ, ಮಲ್ಲಪ್ಪನಹಳ್ಳಿ.
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರೈತರ ಕಣ್ಮಣಿ ನಮ್ಮಣ್ಣ ಕುಮಾರಣ್ಣ….
ರೈತ ಜಮೀನಿನಲ್ಲಿ ಲಾಸ್ ಆಗಿದೆ ಅಂತ ಜಮೀನು ಮಾರಲ್ಲ
ಈ ಭೀಮ ಜೆಡಿಎಸ್ ಸೋತಿದೆ ಅಂತ ಕೈ ಬಿಡಲ್ಲ…ಇದು ನಿಷ್ಠಾವಂತ ಜೆಡಿಎಸ್ ಕಾರ್ಯಕರ್ತ ಹರಿಯಬ್ಬೆ ಭೀಮ ಇವರ ಸ್ಲೋಗನ್…
ತನ್ನ ಬೈಕ್ ನ ಕ್ಯಾರಿ ಬ್ಯಾಗ್ ಮೇಲೆ ಸದಾ ಕಾಣಿಸುವ ಈ ಸ್ಲೋಗನ್ ಅಚ್ಚರಿ ಮೂಡಿಸುತ್ತದೆ. ಅಷ್ಟೇ ಅಲ್ಲ ಕುಮಾರಸ್ವಾಮಿ ಅವರ ಮೂರು ಭಾವ ಚಿತ್ರಗಳು, ಜೆಡಿಎಸ್ ಭಾವುಟ ರಾರಾಜಿಸುತ್ತಿರುತ್ತದೆ. ದಿನ ಬೆಳಗಾದರೆ ಆ ಪಕ್ಷ ಈ ಪಕ್ಷ ಎಂದು ಗೆದ್ದೆತ್ತಿನ ಬಾಲ ಹಿಡಿಯುವ ಲಕ್ಷಾಂತರ ಮಂದಿ ಕಾಣುತ್ತಿರುವಾಗ ಅತ್ಯಂತ ವಿಭಿನ್ನವಾಗಿ ಕಂಡಿದ್ದು ಈ ಭೀಮನ ಸ್ಲೋಗನ್.
ಕುಮಾರಣ್ಣನ ಜೆಡಿಎಸ್ ಎಷ್ಟೇ ಸಾರಿ ಸೋತರೂ ಎದೆಗುಂದದ ಇಂತಹ ಲಕ್ಷಾಂತರ ಕಾರ್ಯಕರ್ತರು ಜೆಡಿಎಸ್ ಆಧಾರಸ್ತಂಭ. ಎರಡು ರಾಷ್ಟ್ರೀಯ ಪಕ್ಷಗಳ ಹಣ, ಅಧಿಕಾರ ಬಲದ ನಡುವೆ ಒಂದು ಪ್ರಾದೇಶಿಕ ಪಕ್ಷ ಅಕಸ್ಮಿಕವಾಗಿ ಅಧಿಕಾರ ಹಿಡಿದ ಸಂದರ್ಭ ಬಿಟ್ಟರೆ ಬೇರೆ ಯಾವುದೇ ಸಂದರ್ಭದಲ್ಲಿ ಅಧಿಕಾರ ನಡೆಸಿಲ್ಲದಿದ್ದರೂ ಕಾರ್ಯಕರ್ತರು ಮಾತ್ರ ಎದೆಗುಂದಿಲ್ಲ. ಗೆದ್ದವರಿಂದ ಬಾಲ ಹಿಡಿದು ಸೌಲಭ್ಯಕ್ಕಾಗಿ ಓಡುವುದು ಇಲ್ಲ.
ಜೆಡಿಎಸ್ ಸದಸ್ಯತ್ವ ನೋಂದಣಿ ಹಾಗೂ ಕಾರ್ಯಕರ್ತರ ಸಮಾವೇಶಕ್ಕೆ ಹಿರಿಯೂರು ತಾಲೂಕಿನ ಹರಿಯಬ್ಬೆ ಗ್ರಾಮಕ್ಕೆ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆಗಮಿಸಿದ್ದ ಸಂದರ್ಭದಲ್ಲಿ ಯುವ ಜೆಡಿಎಸ್ ಕಾರ್ಯಕರ್ತ ಭೀಮನ ಬೈಕ್ ಗಮನ ಸೆಳೆದಿತ್ತು.
ಮಾರ್ಗ ಮಧ್ಯದ ಹಳ್ಳಿ ಹಳ್ಳಿಯಲ್ಲೂ ನಿಖಿಲ್ ಕುಮಾರಸ್ವಾಮಿಗೆ ಅದ್ದೂರಿ ಸ್ವಾಗತ ದೊರೆಯುತ್ತಿದ್ದರೆ ಇನ್ನೊಂದೆಡೆ ಇಂಥ ಕಾರ್ಯಕರ್ತರ ಪಡೆ ಸಾಲಾಗಿ ನಿಂತು ಸ್ವಾಗತಿಸುತ್ತಿತ್ತು.
ಸಭೆ ನಡೆಯುವ ಕಾಲೇಜ್ ಮೈದಾನದವರೆಗೆ ಕಿಮೀ ಗಟ್ಟಲೆ ಅವರನ್ನು ಭವ್ಯ ಮೆರವಣಿಗೆಯಲ್ಲಿ ಕರೆ ತರಲಾಯಿತು. ದಾರಿಯುದ್ಧಕ್ಕೂ ಸ್ತಬ್ದಚಿತ್ರ ಹಾಗೂ ಮಹಿಳೆಯರ ಪೂರ್ಣಕುಂಭ ಮೆರವಣಿಗೆಯಲ್ಲಿ ಯುವ ಘಟಕದ ರಾಜ್ಯಾಧ್ಯಕ್ಷರನ್ನು ಕರೆತಂದ ಕಾರ್ಯಕರ್ತರು, ಅಭಿಮಾನಿಗಳು ಪಟಾಕಿ ಹಚ್ಚಿ ಸಂಭ್ರಮಿಸಿದರು.
ನಿಖಿಲ್ ರವರು ವೇದಿಕೆ ಮೇಲೆ ಕುಳಿತಿದ್ದಾಗ ಹತ್ತಾರು ಗ್ರಾಮಗಳ ಕಾರ್ಯಕರ್ತರು ದೊಡ್ಡ ದೊಡ್ಡ ಹೂವಿನ ಹಾರಗಳನ್ನು ತಂದು ಸನ್ಮಾನಿಸಲು ಪ್ರಯತ್ನಿಸಿದಾಗ ಸ್ವಲ್ಪ ಹೊತ್ತು ವೇದಿಕೆ ಪಕ್ಕ ಜನರ ಕೂಗಾಟ, ಜೈಕಾರಗಳು ಕೇಳಿದವು.
ಕೊನೆಗೆ ನಿಖಿಲ್ ರವರೆ ಮೈಕ್ ಹಿಡಿದು ಎದ್ದು ನಿಂತು ಎಲ್ಲರ ಹಾರಗಳನ್ನು ಪಡೆದು ಫೋಟೋ ತೆಗೆಸಿಕೊಳ್ಳುತ್ತೇನೆ ಸಮಾಧಾನದಿಂದಿರಿ ಎಂದರು. ಇಂಥಹ ಲಕ್ಷಾಂತರ ಕಾರ್ಯಕರ್ತರು ಇಡೀ ರಾಜ್ಯದ ತುಂಬೆಲ್ಲ ಇದ್ದಾರೆ.

ಆದರೆ ಒಮ್ಮೆ ಪೂರ್ಣ ಬೆಂಬಲ ಸಿಕ್ಕರೆ ಖಂಡಿತ ರೈತಾಪಿ ವರ್ಗಕ್ಕೆ ಬಂಪರ್ ಕೊಡುಗೆಗಳು ಲಭ್ಯವಾಗುವುದರಲ್ಲಿ ಅನುಮಾನವಿಲ್ಲ. ಇದಕ್ಕಾಗಿ ಜೆಡಿಎಸ್ ನಿಷ್ಠಾವಂತ ಕಾರ್ಯಕರ್ತರು ಶಬರಿಯಂತೆ ಜೆಡಿಎಸ್ ಅಧಿಕಾರಕ್ಕಾಗಿ ಬರಲು ಕಾಯುತ್ತಿದ್ದಾರೆ.

