ಜೆಡಿಎಸ್-ಬಿಜೆಪಿ ಮೈತ್ರಿ ಉಲ್ಲಂಘನೆ-ಹುಸ್ಕೂರ್ ಆನಂದ್ 

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ಸ್ಥಳೀಯವಾಗಿ ಹೆಸರಿಗಷ್ಟೇ ಜೆಡಿಎಸ್-ಬಿಜೆಪಿ ಮೈತ್ರಿಯಾಗಿದೆ. ಶಾಸಕ ಧೀರಜ್ ಮುನಿರಾಜ್ ಎನ್ ಡಿಎ ಬದ್ಧತೆ ಪಾಲಿಸುತ್ತಿಲ್ಲ
, ಬಿಜೆಪಿ ಹಾಗೂ ಜೆಡಿಎಸ್‌(ಎನ್ ಡಿಎ) ಮೈತ್ರಿ ಘೋಷಣೆ ಆದ ಮೇಲೆ ವೋಟ್ ಹಾಕಿ. ಇಲ್ಲದಿದ್ದಲ್ಲಿ ಜೆಡಿಎಸ್ ಅಭ್ಯರ್ಥಿಗಳಿಗೆ ಮಾತ್ರ ವೋಟ್ ಹಾಕಿ ಎಂದು  ಜೆಡಿಎಸ್‌ರಾಜ್ಯ ಕಾರ್ಯದರ್ಶಿ ಹುಸ್ಕೂರ್ ಆನಂದ್‌ಆಕ್ರೋಶವ್ಯಕ್ತಪಡಿಸಿದರು.

 ತಾಲ್ಲೂಕಿನ  ಜಿ.ಹೊಸಹಳ್ಳಿ (ಗುಂಡಮಗೆರೆ) ಬಸ್ ನಿಲ್ದಾಣದಲ್ಲಿ ನೆಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸ್ಥಳೀಯ ಶಾಸಕ ಧೀರಜ್ ಮುನಿರಾಜ್ ಅವರು ಅಸಂಬದ್ಧವಾಗಿ ಮೈತ್ರಿ ಮಾಡಿಕೊಂಡು ಜೆಡಿಎಸ್‌ಮತದಾರರನ್ನು ದಿಕ್ಕುತಪ್ಪಿಸುವಂತಹ ಕೆಲಸವನ್ನು ಮಾಡುತ್ತಿದ್ದಾರೆ.

- Advertisement - 

ಏಕಪಕ್ಷೀಯವಾಗಿ ನಿರ್ಧಾರಗಳನ್ನು ಕೈಗೊಳ್ಳುವ ಮೂಲಕ ದೇವೇಗೌಡರ ಆದೇಶವನ್ನು ಉಲ್ಲಂಘನೆ ಮಾಡಿ ನಮ್ಮಲ್ಲಿ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ ಎಂದ ಅವರು ನಮ್ಮ ಮನೆಯಲ್ಲೂ  ಮೂರು ಮತಗಳಿವೆ ಆದರೆ ಇದೂವರೆಗೂ ನಮ್ಮಮನೆಗೆ ಬಿಜೆಪಿಯವರು ಮತಯಾಚನೆ ಮಾಡಲು ಬಂದಿಲ್ಲ. ಕೇವಲ ಜೆಡಿಎಸ್ ನವರು ಬಂದಿದ್ದಾರೆ. ಇದನ್ನ ಎನ್ ಡಿಎ ಮೈತ್ರಿ ಅಂತಾರಾ ಎಂದು ಆಕ್ರೋಶವ್ಯಕ್ತಪಡಿಸಿದರು.

ಇದೂವೆರೆಗೂ ಎನ್ ಡಿ ಎ ಮೈತ್ರಿಕೂಟದ ಬಗ್ಗೆ ಪತ್ರಿಕಾಗೋಷ್ಠಿ ಮಾಡಿಲ್ಲ. ಮತದಾರರು, ರೈತರಲ್ಲಿ ಸ್ಥಳೀಯ ಶಾಸಕರು ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

- Advertisement - 

ಸುದ್ದಿ ಗೋಷ್ಠಿಯಲ್ಲಿ ಗ್ರಾಮಪಂಚಾಯಿತಿ ಸದಸ್ಯರಾದ ರಾಮಕೃಷ್ಣಪ್ಪ, ಮುನಿರಾಜು, ರಾಜಣ್ಣ, ಗ್ರಾಪಂ ಮಾಜಿ ಸದಸ್ಯ ಶಿವಣ್ಣ, ಕೊಟ್ಟಿಗೆ ಮಾಚೇನಹಳ್ಳಿ ಶಿವಣ್ಣ, ಜೆಡಿಎಸ್ ಮುಖಂಡರಾದ ನರಸಿಂಹ ಮೂರ್ತಿ, ವೆಂಕಟೇಶ್, ಅಶೋಕ್ ಮುಂತಾದವರು ಹಾಜರಿದ್ದರು.

 

Share This Article
error: Content is protected !!
";