ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಗಂಟಿಗಾನಹಳ್ಳಿ ವಿವಿದೋದ್ದೇಶ ಸಹಕಾರ ಸಂಘದ 25ರಿಂದ 30ರ ಅವಧಿಗೆ ನೂತನ ನಿರ್ದೇಶಕರ ಆಯ್ಕೆಗೆ ಚುನಾವಣೆ ನಡೆದಿದ್ದು ಹನ್ನೆರಡು ನಿರ್ದೇಶಕರ ಸ್ಥಾನಗಳಿಗೆ 24ಮಂದಿ ಸ್ಪರ್ದಿಸಿದ್ದು, ಇದರಲ್ಲಿ ಜೆಡಿಎಸ್ ಬೆಂಬಲಿತ ಎಂಟು ಹಾಗು ಕಾಂಗ್ರೆಸ್ ಬೆಂಬಲಿತ ನಾಲ್ಕು ಮಂದಿ ನಿರ್ದೇಶಕರು ಆಯ್ಕೆಯಾಗುವ ಮೂಲಕ ಗಂಟಿಗಾನಹಳ್ಳಿ ವಿ ಎಸ್ ಎಸ್ ಎನ್ ನಲ್ಲಿ ದಳ ಮೇಲುಗೈ ಸಾಧಿಸಿದೆ.
ಸಾಮಾನ್ಯ ಕ್ಷೇತ್ರದಿಂದ ಗೌರೀಶ್. ಎಸ್., ನಂದೀಶ್ ಎಂ. ಎಸ್., ಮುರಳೀಧರ ಜಿ. ಆರ್., ಶ್ರೀನಿವಾಸ್ ಮೂರ್ತಿ ಬಿ. ಎನ್, ಬಸವರಾಜ್ ಸಿ., ಹಿಂದುಳಿದ ಎ ವರ್ಗದಿಂದ ವಿಜಯ್ ಕುಮಾರ್, ಹಿಂದುಳಿದ ವರ್ಗ ಬಿ ಯಿಂದ ಎಸ್. ವಿ. ಯಶವಂತ್, ಪರಿಶಿಷ್ಟ ಜಾತಿ ಹನುಮಂತಪ್ಪ, ಪರಿಶಿಷ್ಟ ಪಂಗಡ ರಾಮಕೃಷ್ಣಪ್ಪ. ಪಿ., ಮಹಿಳಾ ಮೀಸಲು ಸ್ಥಾನದಿಂದ ಶೋಭಾ, ಸುಮಿತ್ರಾ, ಸಾಲಗಾರರಲ್ಲದ ಕ್ಷೇತ್ರದಿಂದ ಶಿವಕುಮಾರ್ ಎಂ. ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.
ನೂತನ ನಿರ್ದೇಶಕರನ್ನು ಅಭಿನಂದಿಸಿ ಕರ್ನಾಟಕ ತೆಂಗು ನಾರಿನ ಸಹಕಾರ ಮಹಾ ಮಂಡಳಿಯ ಅಧ್ಯಕ್ಷರಾದ ವೆಂಕಟೇಶ್ ಬಾಬು ಮಾತನಾಡಿ ಚುನಾವಣೆಗಳಲ್ಲಿ ಸೋಲು ಗೆಲುವು ಸಹಜ. ಸೊಸೈಟಿ ಲಾಬಾಂಶದ ದೃಷ್ಟಿಯಿಂದ ಸಹಕಾರ ಸಂಘಗಳಿಗೆ ಚುನಾವಣೆ ನಡೆಯಬಾರದೆನ್ನುವುದು ನನ್ನ ಅಭಿಪ್ರಾಯ. ಗಂಟಿಗಾನಹಳ್ಳಿ ಕೃಷಿ ಸಹಕಾರ ಸಂಘ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲೇ ಅತ್ಯುತ್ತಮ ಸಂಘವಾಗಿದ್ದು, ಸಂಘದ ವತಿಯಿಂದ ಗೋಲ್ಡ್ ಲೋನ್, ಸುಮಾರು ಆರು ಕೋಟಿಯಷ್ಟು ರೈತರಿಗೆ ಕೆ. ಸಿ. ಸಿ. ಮೂಲಕ ಸಾಲ ನೀಡಲಾಗಿದ್ದು ಹಾಗಾಗಿ ನಮ್ಮ ವಿಎಸ್ಎಸ್ಎನ್ ಸದೃಢವಾಗಿದೆ ಎಂದು ಹೇಳಿದರು.
ಮಾಜಿ ಜಿಲ್ಲಾ ಪಂಚಾಯ್ತಿ ಸದಸ್ಯರಾದ ಕುರುವಗೆರೆ ನರಸಿಂಹಯ್ಯ, ವಿ. ಎಸ್. ಎಸ್. ಎನ್. ಮಾಜಿ ನಿರ್ದೇಶಕರಾದ ಸಿ. ಕೆ. ದೇವರಾಜ್, ಸತೀಶ್, ನರೇಂದ್ರ ಗೌಡ ಮುಂತಾದವರು ನೂತನ ನಿರ್ದೇಶಕರನ್ನು ಅಭಿನಂದಿಸಿದರು.