ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರು ಮಹಾನಗರ ಘಟಕದ ಅಧ್ಯಕ್ಷ ಹೆಚ್.ಎಂ. ರಮೇಶ್ ಗೌಡ ಅವರ ಅಧ್ಯಕ್ಷತೆಯಲ್ಲಿ ಬೆಂಗಳೂರು ಮಹಾನಗರ ಘಟಕದ ಮುಸ್ಲಿಂ ಅಲ್ಪಸಂಖ್ಯಾತರ ವಿಭಾಗದ ಸಭೆಯನ್ನು ಪಕ್ಷದ ಕೇಂದ್ರ ಕಚೇರಿ ಜೆ.ಪಿ. ಭವನದಲ್ಲಿ ನಡೆಸಲಾಯಿತು.
ಈ ಸಭೆಯಲ್ಲಿ ಬೆಂಗಳೂರು ನಗರ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷ ಅಪ್ರೋಜ್ ಬೇಗ್, ಪುಲಿಕೇಶಿ ನಗರ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಸೈಯದ್ ತಹಸಿನ್, ಬೆಂಗಳೂರು ನಗರ ಮಹಿಳಾ ವಿಭಾಗದ ಅಧ್ಯಕ್ಷೆ ಶೈಲಾ ಸಂತೋಷ್ ರಾವ್, ಅಲ್ಪಸಂಖ್ಯಾತರ ವಿಭಾಗದ ಮುಖಂಡರಾದ ಸುಲ್ತಾನ್ ಪಾಷ, ಕಮರ್ ಪಾಷಾ, ಹೈದರ್ ಅಲಿ, ಜಾವೀದ್, ಮೌಲ, ನಾಜಿಮ್, ಮಹಬೂಬ್ ಖಾನ್, ಇಮ್ರಾನ್ ಪಾಷ,
ಮಹಮ್ಮದ್ ಅಮೀರ್ ಜಾನ್, ನಾಜಿಯಾ, ಸುಮಯ್ಯ ಶರೀಫ್, ಹಾಜಿರ ಫಾರೂಕ್, ಮೌಲಾ ಪಾಷ, ಸೈಯದ್ ನಾಜಿಮ್, ಫಯಾಜ್ ಅಹ್ಮದ್ ಹಾಗೂ ಬೆಂಗಳೂರು ನಗರ ಮಾತೃ ಘಟಕದ ಕಾರ್ಯಾಧ್ಯಕ್ಷ ಕೆ.ವಿ. ನಾರಾಯಣಸ್ವಾಮಿ, ಮಹಾಪ್ರಧಾನ ಕಾರ್ಯದರ್ಶಿ ಎಸ್ ರಮೇಶ್,
ವಿಧಾನಸಭಾ ಕ್ಷೇತ್ರದ ಅಧ್ಯಕ್ಷರುಗಳು, ವಿಭಾಗಗಳ ಅಧ್ಯಕ್ಷರು, ಪದಾಧಿಕಾರಿಗಳು, ಕಾರ್ಯಕರ್ತರು ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು.