ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಾಂಗ್ರೆಸ್ ಕಮಂಗಿಗಳೇ.. ಕೇಳಿಸಿಕೊಳ್ಳಿ.. ಮೇಕೆದಾಟುಗೆ ಜೆಡಿಎಸ್ ಬದ್ಧ. ಎರಡು ಮಾತೇ ಇಲ್ಲ. ರಾಜ್ಯದ ಅನೇಕ ನೀರಾವರಿ ಯೋಜನೆಗಳು ಸಾಕಾರವಾಗಿದ್ದೇ ಮಣ್ಣಿನಮಗ ದೇವೇಗೌಡರಿಂದ. ಉತ್ತರ ಕರ್ನಾಟಕ ಜಲಶ್ಯಾಮಲವಾಗಿದ್ದೇ ಅವರ ದೃಢ ಸಂಕಲ್ಪದಿಂದ. ಕಬಿನಿ, ಹಾರಂಗಿ, ಹೇಮಾವತಿ ಜಲಾಶಯಗಳು ನಿರ್ಮಾಣವಾಗಿದ್ದೇ ಅವರ ಹೋರಾಟದ ಛಲದಿಂದ ಎಂದು ಜೆಡಿಎಸ್ ತಿಳಿಸಿದೆ.
ನಿಮ್ಮದೋ.. ಡಿಎಂಕೆ ಜತೆ ಚಕ್ಕಂದ!! ನಿಮಗೆ ವೋಟು ಕೊಟ್ಟ ಕನ್ನಡಿಗರ ಸ್ಥಿತಿ ಗೋವಿಂದ!! ನಮ್ಮ ನೀರು ನಮ್ಮ ಹಕ್ಕು; ಕನ್ನಡಿಗರಿಗೆ ಸ್ಲೋಗನ್ ಭಾಗ್ಯ! ತಮಿಳುನಾಡಿಗೆ ಕಾವೇರಿ ಭಾಗ್ಯ!! ಬಿರಿಯಾನಿ ಬಾರಿಸಿ, ಎಣ್ಣೆ ಹೊಡೆದು ಮೇಕೆದಾಟುಗೆ ಎಳ್ಳುನೀರು ಬಿಟ್ಟ ನಿಮಗೆ, ಜೆಡಿಎಸ್ ಹೋರಾಟಗಳ ಬಗ್ಗೆ ಜಾಣ ಅಜ್ಞಾನ ! ರಾಜ್ಯಸಭೆಯಲ್ಲಿ ತಮಿಳುನಾಡು ಸದಸ್ಯರ ಗದ್ದಲದ ನಡುವೆಯೂ ಸಿಡಿದೆದ್ದ ಹೆಚ್.ಡಿ.ದೇವೇಗೌಡ ಅವರು, 93ರ ಇಳಿ ವಯಸ್ಸಿನಲ್ಲಿಯೂ ಮೇಕೆದಾಟಿನ ಬಗ್ಗೆ ದನಿ ಎತ್ತಿದ್ದು ಕಿವಿಗೆ ಕೇಳಲಿಲ್ಲವೇ ? ನಿಮಗೆ ಕಿವುಡೇ? ಕಾಣಲಿಲ್ಲವೇ.. ನಿಮ್ಮ ಕಣ್ಣಿಗೆ ಕಾಮಾಲೆಯೇ ? ಕರ್ನಾಟಕ ಕಾಂಗ್ರೆಸ್ ನವರೇ ಎಂದು ಜೆಡಿಎಸ್ ವಾಗ್ದಾಳಿ ಮಾಡಿದೆ.
ದೇವೇಗೌಡರು ಅದೆಷ್ಟು ಸಲ ಮೇಕೆದಾಟು ಬಗ್ಗೆ ಪ್ರಸ್ತಾಪಿಸಿದರು. ಅವರು ಗುಡುಗುತ್ತಿದ್ದರೆ, ಅದೇ ಕಲಾಪದಲ್ಲಿದ್ದ ನಿಮ್ಮ ಪಕ್ಷದ ರಬ್ಬರ್ ಸ್ಟ್ಯಾಂಪ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರು ಮೌನವ್ರತ ಮಾಡುತ್ತಿದ್ದರು ! ಕಾರಣ.. ಡಿಎಂಕೆ ಮುಲಾಜು !! ಅಕ್ಕಿ ಮೇಲೆ ಆಸೆ, ನೆಂಟರ ಮೇಲೆ ಪ್ರೀತಿ !!
ಇಂಥ ಹೊಣೆಗೇಡಿ ಮೂಲವ್ಯಾಧಿಗೆ ಮದ್ದೇನು ಮೂದೇವಿಗಳಾ? ಎಂದು ಜೆಡಿಎಸ್ ಹಿಗ್ಗಾಮುಗ್ಗಾ ಟೀಕಿಸಿದೆ.
ಆಗ: ನಮ್ಮ ನೀರು ನಮ್ಮ ಹಕ್ಕು ! ಈಗ: ನಮ್ಮ ನೀರು ತಮಿಳುನಾಡು ಹಕ್ಕು !!
ಇದಪ್ಪಾ ಕಂತ್ರಿ ಕಾಂಗ್ರೆಸ್ !! ಡಿಎಂಕೆ ಬಿ ಟೀಮ್ ಪಾರ್ಟಿಯಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ? ಕೇರಿಗೊಂದು ಕಿತಾಪತಿ, ಊರಿಗೊಂದು ಉಪದ್ರವ, ರಾಜ್ಯಕ್ಕೊಂದು ರಕ್ಕಸನೀತಿ !! ದೇಶಕ್ಕೆ ಮಕ್ಮಲ್ ಟೋಪಿ.. ಭಲೇ ಭಲೇ.. ತುಕಡೆ ಗ್ಯಾಂಗ್ ಲೀಡರ್ ಪಾರ್ಟಿಯಿಂದ ಇನ್ನೇನಾದೀತು ? ಕಾವೇರಿ ಏನಾದರೇನು ? ನಿಮ್ಮ ವೋಟಿನ ಬುಟ್ಟಿ ತುಂಬಿದರೆ ಸಾಕು.. ಲಜ್ಜೆಗೇಡಿ ಭಾರತೀಯ ಕಾಂಗ್ರೆಸ್!! ಎಂದು ಜೆಡಿಎಸ್ ಟೀಕಾಪ್ರಹಾರ ಮಾಡಿದೆ.
ತಮಿಳುನಾಡು ಮನವೊಲಿಸುವ ಮಾತಿರಲಿ, ಮೊನ್ನೆ ಮೊನ್ನೆಯಷ್ಟೇ ಕದ್ದುಮುಚ್ಚಿ ರಾತ್ರೋರಾತ್ರಿ ನೀರು ಹರಿಸಿದೆ ನಿಮ್ಮ ನಯವಂಚಕ ಕಾಂಗ್ರೆಸ್ ಸರಕಾರ. ನಾಡದ್ರೋಹ ನಿಮ್ಮ ರಕ್ತದಲ್ಲಿಯೇ ಇದೆ.
ಈಗಲೂ ಜೆಡಿಎಸ್ ಸವಾಲು ಇಷ್ಟೇ.. ಧಮ್ಮಿದ್ದರೆ, ತಾಕತ್ತಿದ್ದರೆ ತಮಿಳುನಾಡಿನ ಮನವೊಲಿಸಿ. ತಕ್ಷಣವೇ ಕೇಂದ್ರದಿಂದ ಮೇಕೆದಾಟುಗೆ ಒಪ್ಪಿಗೆ ಕೊಡಿಸುವ ಹೊಣೆ ಕುಮಾರಸ್ವಾಮಿ ಅವರದ್ದು ಎಂದು ಜೆಡಿಎಸ್ ಸವಾಲ್ ಹಾಕಿದೆ.
ಕುಮಾರಸ್ವಾಮಿ ಅವರ ಧಮ್ಮು ತಾಕತ್ತಿನ ಬಗ್ಗೆ ಹಲುಬಿದ್ದೀರಿ. ದೆಹಲಿಗೆ ಬನ್ನಿ ಕಮಂಗಿಗಳೇ..
ಆಂಧ್ರಕ್ಕೆ ಹೋಗಿ ನೋಡಿ.. ವೈಜಾಗ್ ಸ್ಟೀಲ್ ಕಾರ್ಖಾನೆ ಮರುಜೀವ ಪಡೆದಿದೆ. 11,440 ಕೋಟಿ ಪುನಶ್ಚೇತನ ಪ್ಯಾಕೇಜ್ ಕೊಡಿಸಿದ್ದಾರೆ ಕುಮಾರಸ್ವಾಮಿ ಅವರು. ಅದು ಹೇಗಾಯಿತು? ಎನ್ನುವುದನ್ನು ತಿಳಿದುಕೊಳ್ಳಿ. ಆಮೇಲೆ ಹೆಚ್.ಡಿ.ಕುಮಾರಸ್ವಾಮಿ ಅವರ ಧಮ್ಮು, ತಾಕತ್ತಿನ ಬಗ್ಗೆ ಮಾತನಾಡಿ ಎಂದು ಜೆಡಿಎಸ್ ಸವಾಲ್ ಹಾಕಿದೆ.
ಕೊಳಕು ಕಾಂಗ್ರೆಸ್ಸಿಗೆ ಪ್ರತಿ ವಿಷಯದಲ್ಲಿಯೂ ರಾಜಕೀಯ ಮಾಡುವ ಚಟ. ಕುದುರೆಮುಖಕ್ಕೂ ಪಾಲಿಟಿಕ್ಸ್, ಹೆಚ್‘ಎಂಟಿ ಬಗ್ಗೆಯೂ ಹಗೆತನ. ಅಭಿವೃದ್ಧಿ ಮತ್ತು ದ್ವೇಷ ಒಟ್ಟೊಟ್ಟಿಗೆ ಸಾಗುವುದಿಲ್ಲ ಕಾಂಗ್ರೆಸ್ಸಿಗರೇ..
ನಮ್ಮ ರಾಜ್ಯ ನಮಗೆಷ್ಟು ಮುಖ್ಯ ಎನ್ನುವ ಬದ್ಧತೆಯನ್ನು ಆಂಧ್ರವನ್ನು ನೋಡಿ ಕಲಿಯಿರಿ. ನಿಮ್ಮದೇ ಪಕ್ಷದ ತೆಲಂಗಾಣ ಮುಖ್ಯಮಂತ್ರಿಯಿಂದ ತಿಳಿಯಿರಿ. ಚಂದ್ರಬಾಬು ನಾಯ್ಡು, ರೇವಂತ್ ರೆಡ್ಡಿ ಅವರಿಗಿರುವ ಸೌಜನ್ಯ ನಿಮ್ಮ ಮುಖ್ಯಮಂತ್ರಿಗೆ ಇಲ್ಲವಲ್ಲ ಎಂದು ಜೆಡಿಎಸ್ ಟೀಕಾಪ್ರಹಾರ ಮಾಡಿದೆ.
ಚಿಲ್ಲರೆ ರಾಜಕೀಯ ಮಾಡುವುದು ಬಿಡಿ. ಕರಾರುವಾಕ್ಕಾದ ಪ್ರಸ್ತಾವನೆಗಳನ್ನು ತನ್ನಿ. ಕುಮಾರಸ್ವಾಮಿ ಅವರಷ್ಟೇ ಅಲ್ಲ, ಕೇಂದ್ರದಲ್ಲಿರುವ ಎಲ್ಲಾ ಸಚಿವರು ರಾಜ್ಯದ ಸೇವೆಗೆ ಸಿದ್ಧ. ಕೇವಲ ಮೋದಿ ಮತ್ತು ಕುಮಾರಸ್ವಾಮಿ ಅವರನ್ನು ನಿಂದಿಸಿದರೇನು ಫಲ? ನಿಂದಿಸಿದಷ್ಟು ನಾಲಿಗೆಗೆ ನೋವೇ ಹೊರತು, ನಾಡಿಗೆ ಒಳಿತಲ್ಲ ಕಾಂಗಿಗಳೇ ಎಂದು ಜೆಡಿಎಸ್ ಮನಬಂದಂತೆ ವಾಗ್ದಾಳಿ ಮಾಡಿದೆ.
ತೆರಿಗೆ-ಅನುದಾನದ ವಿಷಯಕ್ಕೆ ಬಂದರೆ, ಅದು ನೀವೇ ರಚಿಸಿದ ಹಣಕಾಸು ಆಯೋಗಗಳ ಫಲ. ನಿಮ್ಮದೇ ಪಾಪದ ಫಲ. ಈ ಬಗ್ಗೆ ನಾನೇ ಅನೇಕ ಸಲ ಹೇಳಿದ್ದೇನೆ. ನಿಮಗೆ ಧಮ್ಮಿದ್ದರೆ ಸಂಸತ್ತಿನಲ್ಲಿ ಚರ್ಚೆ ಮಾಡಿ. ಹಣಕಾಸು ಆಯೋಗಗಳ ವರದಿಗಳನ್ನು ಇಟ್ಟುಕೊಂಡು ಸಂವಾದಕ್ಕೆ ಬನ್ನಿ. ನಿಮಗೆ ಧಮ್ಮಿಲ್ಲ. ತಪ್ಪು ಮಾಡಿದ್ದೇ ನೀವು.
ಸೀಡಿ ಸುತ್ತಿ, ಪೆನ್ ಡ್ರೈವ್ ಹಂಚಿ, ಗೋಡೆಗೆ ಪೋಸ್ಟರ್ ಅಂಟಿಸಿ, ಇನ್ನೊಬ್ಬರ ಭೂಮಿಗೆ ಬೇಲಿ ಹಾಕಿ, ಹೆದರಿಸಿ ಬೆದರಿಸುವ ನಿಮ್ಮ ಲೂಟಿಕೋರ ಲೀಡರನಂತಲ್ಲ ನಮ್ಮ ನಾಯಕ. ಮೂರು ಹೊತ್ತು ಮನೆಹಾಳು ಆಲೋಚನೆಗಳ ಮೈವೇತ್ತ ವ್ಯಕ್ತಿಯನ್ನು ತಲೆ ಮೇಲೆ ಹೊತ್ತು ಮೆರೆಸಿ ಸಿಎಂ ಸೀಟಿನ ಮೇಲೆ ಕೂರಿಸಲು ಹೊರಟಿದ್ದೀರಿ. ಗಾಂಧಿಜೀಯವರ ಆದರ್ಶದ ಸೂಜಿ ಮೊನೆಯಷ್ಟು ಯೋಗ್ಯನಲ್ಲದ, ಚಾರಿತ್ರ್ಯಹೀನ ಕ್ರೂರಮೃಗವನ್ನು ರಾಜ್ಯದ ಮೇಲೆ ಛೂ ಬಿಡಲು ಹೊರಟಿದ್ದೀರಿ, ಅಯ್ಯೋ.. ಗಾಂಧಿ ಕಾಂಗ್ರೆಸ್ಸಿಗೆ ಇದೆಂಥ ದುರ್ಗತಿ ? ಎಂದು ಜೆಡಿಎಸ್ ಹರಿಹಾಯ್ದಿದೆ.