ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ತಾಲ್ಲೂಕಿನ ತೂಬಗೆರೆ ಹೋಬಳಿಯ ಹಾಡೋನಹಳ್ಳಿ ಚೌಡೇಶ್ವರಿ ದೇವಾಲಯದ ಮುಂದೆ ಘಾಟಿ ಗ್ರಾಮದ ಪ್ರಮುಖ ಯುವ ಮುಖಂಡರಾದ ವಿನಯ್, ರಾಕೇಶ್, ಅನಂತ್ ಮತ್ತು ವಿಜಯ್ ಅವರು ಕಾಂಗ್ರೆಸ್ ಪಕ್ಷ ತೊರೆದು ಜನತಾ ದಳ(ಜಾತ್ಯತೀತ) ಪಕ್ಷ ಸೇರ್ಪಡೆಯಾಗಿದ್ದಾರೆ.
ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಎಲ್.ಎನ್. ಯುವಕರನ್ನು ಪಕ್ಷಕ್ಕೆ ಆತ್ಮೀಯವಾಗಿ ಸ್ವಾಗತಿಸಿದರು. ಕಾಂಗ್ರೆಸ್ ತೊರೆದು ನಮ್ಮ ಪಕ್ಷ ಸೇರಿದ್ದಕ್ಕಾಗಿ ಅವರಿಗೆ ಧನ್ಯವಾದ ತಿಳಿಸಿ ನಿಮ್ಮ ಸೇರ್ಪಡೆಯಿಂದ ನಮ್ಮ ಪಕ್ಷಕ್ಕೆ ಮತ್ತಷ್ಟು ಬಲ ಬಂದಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕುರವಿಗೆರೆ ನರಸಿಂಹಣ್ಣ, ಹಾಡೋನಹಳ್ಳಿ ನಾಗರಾಜ್, ದೇವರಾಜ್, ಮುದ್ದಣ್ಣ, ಪುರುಷೋತ್ತಮ್, ಅಶೋಕ್, ಮುರುಳಿ, ಮಂಜುನಾಥ್, ನಾಗರಾಜ್, ಮಧು, ಮುನೇಗೌಡ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.