ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಗ್ರೇಟರ್‌ಬೆಂಗಳೂರು ವಿಧೇಯಕ ತಂದು, ಬಿಬಿಎಂಪಿಯನ್ನು 7 ಭಾಗವಾಗಿ ಛಿದ್ರ ಮಾಡುತ್ತಿರುವುದನ್ನು ಖಂಡಿಸಿ, ಕರ್ನಾಟಕ ಕಾಂಗ್ರೆಸ್ ಸರ್ಕಾರದ ವಿರುದ್ಧ ಜೆಡಿಎಸ್ ಪಕ್ಷದ ವತಿಯಿಂದ ಬೆಂಗಳೂರಿನ ಫ್ರೀಡಂಪಾರ್ಕ್‌ನಲ್ಲಿ ಬೃಹತ್‌ಪ್ರತಿಭಟನೆ ನಡೆಸಲಾಯಿತು.
ಬೆಂಗಳೂರಿನಲ್ಲಿ ರಿಯಲ್‌ಎಸ್ಟೇಟ್‌ದಂಧೆಗೆ ಮತ್ತು ಕನ್ನಡಿಗರನ್ನು ಒಡೆದು ಆಳಲು “ಗ್ರೇಟರ್‌ಬೆಂಗಳೂರು” ಮಾಡಲಾಗುತ್ತಿದೆ ಎಂದು ಪ್ರತಿಭಟನೆಯ ನೇತೃತ್ವ ವಹಿಸಿದ್ದ ಬೆಂಗಳೂರು ಮಹಾನಗರ ಘಟಕದ ಅಧ್ಯಕ್ಷ ಹೆಚ್.ಎಂ.ರಮೇಶ್‌ಗೌಡ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್‌ಸದಸ್ಯರಾದ ಟಿ.ಎ.ಜವರಾಯಿ ಗೌಡ, ವಿಧಾನ ಪರಿಷತ್‌ಮಾಜಿ ಸದಸ್ಯರಾದ ಕೆ.ಎ. ತಿಪ್ಪೇಸ್ವಾಮಿ, ಬೆಂಗಳೂರು ಮಹಿಳಾ ಘಟಕದ ಅಧ್ಯಕ್ಷರಾದ ಶೈಲಜಾ ರಾವ್, ಮುಖಂಡರಾದ ನಾಗೇಶ್‌ರಾವ್, ವೆಂಕಟಸ್ವಾಮಿ, ವೇಣುಗೋಪಾಲ್, ಮಂಗಳಮ್ಮ ಪ್ರವೀಣ್‌ಕುಮಾರ್, ಸ್ಯಾಮುಯಲ್, ಅಪ್ರೋಜ್‌ಬೇಗ್‌ಸೇರಿದಂತೆ ನಗರದ ಎಲ್ಲಾ ವಿಧಾನಸಭೆ ಕ್ಷೇತ್ರಗಳ ಪಕ್ಷದ ಅಧ್ಯಕ್ಷರು, ಮುಖಂಡರು, ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.