ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ, ಬೆಲೆ ಏರಿಕೆ, ಜನ ವಿರೋಧಿ ನೀತಿ , ಗ್ಯಾರಂಟಿಗೆ SCSP-TSP ಅನುದಾನದ ಹಣ ದುರ್ಬಳಕೆ ಹಾಗೂ ಮಹಿಳೆಯರಿಗೆ ಗೃಹಲಕ್ಷ್ಮಿ ಹಣ ಬಿಡುಗಡೆಗೆ ಒತ್ತಾಯಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಜೆಡಿಎಸ್ ಪಕ್ಷದ ವತಿಯಿಂದ ಬೃಹತ್‌ಪ್ರತಿಭಟನೆ ನಡೆಸಿ, ಮೆರವಣಿಗೆ ಮೂಲಕ ವಿಧಾನಸೌಧ ಮುತ್ತಿಗೆಗೆ ಯತ್ನಿಸಲಾಯಿತು.
Jds ಮನಸೋ ಇಚ್ಛೆ ಗೃಹಲಕ್ಷ್ಮಿ ಹಣ ಬಿಡುಗಡೆ ಮಾಡುವುದಲ್ಲ.
ಗೃಹಲಕ್ಷ್ಮಿ ಗ್ಯಾರಂಟಿ ಹಣ ಕೊಡುವ ದಿನಾಂಕ ಹೇಳಿ ಸಿದ್ರಾಮಣ್ಣ!! ನಾಡಿನ ಮಹಿಳೆಯರಿಗೆ ನಿಗದಿತ ದಿನಾಂಕದಂದು ಅವರ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡಿ ಎಂದು ಜೆಡಿಎಸ್ ನಾಯಕರು ಆಗ್ರಹ ಮಾಡಿದರು. ಗ್ಯಾರಂಟಿಗಳ ಅನುಷ್ಠಾನದಲ್ಲಿ ಆಗಿರುವ ವೈಫಲ್ಯಗಳ ಬಗ್ಗೆ ಜನತೆಗೆ ತಿಳಿಸುವ ಪ್ರಯತ್ನ ಮಾಡಲಾಯಿತು.
ಕರ್ನಾಟಕ ಕಾಂಗ್ರೆಸ್ ಸರ್ಕಾರ ಜನತೆಗೆ ಪಂಚ ಗ್ಯಾರಂಟಿಗಳ ಭರವಸೆ ನೀಡಿ ಅಧಿಕಾರಕ್ಕೆ ಬಂದಿದೆ ಎನ್ನುವುದು ನಿಜ. ಆದರೆ, ಅದೇ ಗ್ಯಾರಂಟಿಗಳನ್ನು ನಿಗದಿತ, ನಿಯಮಿತವಾಗಿ ಜನರಿಗೆ ಮುಟ್ಟಿಸಲು ಸಂಪೂರ್ಣ ವಿಫಲವಾಗಿದೆ. ಗ್ಯಾರಂಟಿಗಳು ಎಂದರೆ ಈ ಸರಕಾರಕ್ಕೆ ಚುನಾವಣೆಗಳನ್ನು ಗೆಲ್ಲುವ ವಾಮಮರ್ಗಗಳು ಎನ್ನುವ ಅಪವಾದ ಇದೆ ಜೆಡಿಎಸ್ ನಾಯಕರು ಕಿಡಿ ಕಾರಿದರು.
ಸಿಎಂ ಸಿದ್ದರಾಮಯ್ಯನವರೇ.. ಡಿಸಿಎಂ ಡಿ.ಕೆ ಶಿವಕುಮಾರ್ ರವರೇ.. ನಿಮಗೆ ಇಷ್ಟ ಬಂದಾಗ ಗ್ಯಾರಂಟಿ ಹಣ ಕೊಡುವುದಲ್ಲ. ಕ್ಯಾಲೆಂಡರ್ ನಲ್ಲಿ ದಿನಾಂಕ ಗುರುತಿಸಿ ಘೋಷಣೆ ಮಾಡಿ. ನಿಮ್ಮ ಬಜೆಟ್ ನಲ್ಲಿ ‘ಗ್ಯಾರಂಟಿ ಕ್ಯಾಲೆಂಡರ್‘ ಬಿಡುಗಡೆ ಮಾಡಿ. ಪ್ರತಿ ತಿಂಗಳು ಹಣ DBT ಮಾಡುವ ದಿನ ಹೇಳಿ, ಸತ್ಯಮೇವ ಜಯತೇ ಎನ್ನುತ್ತೀರಿ. ಸತ್ಯ ಹೇಳಿ ಎಂದು ಜೆಡಿಎಸ್ ನಾಯಕರು ಆಗ್ರಹ ಮಾಡಿದರು.
ಶಾಸಕಾಂಗ ಪಕ್ಷದ ನಾಯಕರಾದ ಸುರೇಶ್‌ಬಾಬು ಸಿ.ಬಿ., ಯುವ ಘಟಕದ ಅಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಶಾಸಕರುಗಳಾದ ಎಂ.ಟಿ. ಕೃಷ್ಣಪ್ಪ, ಸಿ.ಎನ್. ಬಾಲಕೃಷ್ಣ, ನೇಮಿರಾಜ್‌ನಾಯಕ್, ಬಿ.ಎನ್. ರವಿಕುಮಾರ್, ಜಿ.ಡಿ. ಹರೀಶ್‌ಗೌಡ, ಸ್ವರೂಪ್‌ಪ್ರಕಾಶ್, ವಿಧಾನ ಪರಿಷತ್‌ಸದಸ್ಯರಾದ ಟಿ.ಎನ್. ಜವರಾಯಿಗೌಡ ಹಾಗೂ ಮಾಜಿ ಶಾಸಕರುಗಳಾದ ಮಾಗಡಿ ಮಂಜುನಾಥ್, ನಿಸರ್ಗ ನಾರಾಯಣಸ್ವಾಮಿ, ವಿಧಾನ ಪರಿಷತ್‌ಮಾಜಿ ಸದಸ್ಯರಾದ ತಿಪ್ಪೇಸ್ವಾಮಿ,

ತೂಪಲ್ಲಿ ಚೌಡರೆಡ್ಡಿ, ರಾಜ್ಯ ಮಹಿಳಾ ಘಟಕದ ಅಧ್ಯಕ್ಷರಾದ ರಶ್ಮಿ ರಾಮೇಗೌಡ, ಮುಖಂಡರಾದ ಬಿ.ಡಿ. ಪಾಟೀಲ್, ಜಗದೀಶ್ ನಾಗರಾಜಯ್ಯ, ಬಿ.ಆರ್.ರಾಮಚಂದ್ರ, ತಿಮ್ಮೇಗೌಡ, ಬೆಂಗಳೂರು ಮಹಾನಗರ ಘಟಕದ ಅಧ್ಯಕ್ಷರಾದ ಹೆಚ್.ಎಂ. ರಮೇಶ್‌ಗೌಡ ಹಾಗೂ ಬೆಂಗಳೂರು ಮಹಾನಗರದ ವಿವಿಧ ಘಟಕಗಳ ಅಧ್ಯಕ್ಷರುಗಳು, ಪದಾಧಿಕಾರಿಗಳು, ಪಕ್ಷದ ವಕ್ತಾರರು ಹಾಗೂ ಅಸಂಖ್ಯಾತ ಕಾರ್ಯಕರ್ತರು, ಜನರು ಭಾಗವಹಿಸಿದ್ದರು.

