ಕುಮಾರಸ್ವಾಮಿ ಬಗ್ಗೆ ಜಮೀರ್ ಅವಹೇಳಕಾರಿ ಹೇಳಿಕೆ ಖಂಡಿಸಿ ಜೆಡಿಎಸ್ ಪ್ರತಿಭಟನೆ 

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಕೇಂದ್ರ ಸಚಿವ ಕುಮಾರ ಸ್ವಾಮಿ ಯವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಸಚಿವ ಜಮೀರ್ ಅಹ್ಮದ್ ವಿರುದ್ಧ ಬೆಂಗಳೂರು ಗ್ರಾಮಾಂತರ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಬಿ. ಮುನೇಗೌಡರ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

          ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಮುನೇಗೌಡ ಮಾತನಾಡಿ ಕೇಂದ್ರ ಸಚಿವ ಹಾಗೂ ಜೆಡಿಎಸ್ ಪಕ್ಷದ ಸರ್ವೋಚ್ಚ ನಾಯಕ ಕುಮಾರಸ್ವಾಮಿಯವರ ಬಗ್ಗೆ ಸಚಿವ ಜಮೀರ್ ಅಹ್ಮದ್ ಬಳಸಿರುವ ಭಾಷೆ ತೀರಾ ಕೀಳು ಮಟ್ಟದ್ದು. ಜವಾಬ್ದಾರಿಯುತ ಸ್ಥಾನದಲ್ಲಿರುವ ವ್ಯಕ್ತಿ ಕುಮಾರಣ್ಣನ ಬಗ್ಗೆ ಅವಹೇಳನಕಾರಿ ಯಾಗಿ ಮಾತನಾಡಿರುವುದು ಅವರ ವ್ಯಕ್ತಿತ್ವವನ್ನು ತೋರಿಸುತ್ತದೆ.

ಇಂತಹ ಕೊಳಕು ಮನಸಿನ ವ್ಯಕ್ತಿ ಸಚಿವ ಸಂಪುಟದಲ್ಲಿರುವುದು ಸಚಿವ ಸಂಪುಟಕ್ಕೆ ಅವಮಾನ. ನಿಜಕ್ಕೂ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ. ಕೆ.ಶಿವಕುಮಾರ್ ರವರಿಗೆ ನಿಜವಾಗಿಯೂ ನೈತಿಕತೆ ಇದ್ದರೆ ಈ ಕೂಡಲೇ ಜಮೀರ್ ನನ್ನು ಸಂಪುಟದಿಂದ ವಜಾ ಮಾಡಬೇಕು.

ಇಲ್ಲದಿದ್ದರೆ ಜೆಡಿಎಸ್ ಪಕ್ಷ ಉಗ್ರ ಹೋರಾಟ ಮಾಡುತ್ತದೆ. ಜೊತೆಗೆ ಜಮೀರ್ ವಿರುದ್ಧ ಕಾನೂನು ಹೋರಾಟಕ್ಕೂ ಸಿದ್ದವಾಗುತ್ತದೆ ಎಂದು ಮುನೇಗೌಡರು ಆಕ್ರೋಶ ವ್ಯಕ್ತ ಪಡಿಸಿದರು.

             ದೇವನಹಳ್ಳಿ ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಮಾತನಾಡಿ ಜಮೀರ್ ಕುಮಾರಣ್ಣನ ಬಗ್ಗೆ ಹಗುರವಾಗಿ ಮಾತನಾಡಿರುವುದು ತೀರಾ ಖಂಡನೀಯ ಅದರಲ್ಲೂ ದೇವೇಗೌಡರ ಕುಟುಂಬವನ್ನು ಕೊಂದುಕೊಳ್ಳುತ್ತೇನೆ ಎಂಬ ದುರಹಂಕಾರಿ ಹೇಳಿಕೆ ನೀಡಿರುವುದನ್ನು ನಾವು ಸಹಿಸುವುದಿಲ್ಲ.

ಇಂತಹ ದುರಹಂಕಾರಿ ನಾಲಾಯಕ್ ಸಚಿವನನ್ನು ಸಂಪುಟದಿಂದ ವಜಾ ಮಾಡುವುದನ್ನು ಬಿಟ್ಟು, ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಮೌನವಾಗಿರುವುದನ್ನು ನೋಡಿದರೆ ಜಮೀರ್ ನ ನೀಚ ಹೇಳಿಕೆಯನ್ನು ಪರೋಕ್ಷವಾಗಿ ಸಮರ್ಥಿಸಿ ಕೊಳ್ಳುತ್ತಿದ್ದಾರೆ ಎಂಬ ಶಂಕೆ ಮೂಡುತ್ತದೆ.

ದೇವೇಗೌಡರ ಕುಟುಂಬವನ್ನು ಕೊಂಡು ಕೊಳ್ಳುವಷ್ಟು ಯೋಗ್ಯತೆ ಜಮೀರ್ ಅಹ್ಮದ್ ಗೆ ಇದೆಯಾ. ಈ ಕೂಡಲೇ ಜಮೀರ್ ಅಹ್ಮದ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ದೇವೇಗೌಡರ ಹಾಗೂ ಕುಮಾರಣ್ಣನವರ ಕ್ಷಮೆ ಕೇಳಬೇಕು. ಇದನ್ನು ಯಾವುದೇ ಕಾರಣಕ್ಕೂ ಸಹಿಸುವ ಪ್ರಶ್ನೆಯೇ ಇಲ್ಲ.

ಕಾಂಗ್ರೆಸ್ ಪಕ್ಷ ಜಮೀರ್ ಮೇಲೆ ಕ್ರಮ ಕೈಗೊಳ್ಳದಿದ್ದರೆ ನಾವು ಪ್ರತಿಭಟನೆಯನ್ನು ತೀವ್ರ ಗೊಳಿಸುತ್ತೇವೆ. ಜಮೀರ್ ಹೇಳಿಕೆ ಸಂಬಂಧ ರಾಜ್ಯಪಾಲರನ್ನು ಬೇಟಿ ಮಾಡಿ ಅವರ ಶಾಸಕ ಶಾಸಕ ಸ್ಥಾನವನ್ನು ವಜಾ ಗೊಳಿಸುವಂತೆ ಒತ್ತಾಯಿಸಿ, ಕಾನೂನು ರೀತ್ಯ ಹೋರಾಟ ಮಾಡಲಾಗುವುದು ಎಂದು ನಿಸರ್ಗ ನಾರಾಯಣಸ್ವಾಮಿ ಹೇಳಿದರು.

      ಪ್ರತಿಭಟನೆಗೂ ಮುನ್ನ ಚಪ್ಪರ ಕಲ್ ಬಳಿ ಜೆಡಿಎಸ್ ಕಾರ್ಯಕರ್ತರು ಜಮೀರ್ ಅಹ್ಮದ್ ಪ್ರತಿಕೃತಿ ದಹಿಸಿ ಅವರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ರಾಜ್ಯ ಜೆಡಿಎಸ್ ಪ್ರದಾನ ಕಾರ್ಯದರ್ಶಿ ಡಾ. ಹೆಚ್. ಜಿ. ವಿಜಯ ಕುಮಾರ್, ದೊಡ್ಡಬಳ್ಳಾಪುರ ತಾಲೂಕು ಜೆಡಿಎಸ್ ಅಧ್ಯಕ್ಷ ಲಕ್ಷ್ಮೀಪತಯ್ಯ,

ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯರಾದ ಕುರುವಿಗೆರೆ ನರಸಿಂಹಯ್ಯ, ಹಾಡೋನಹಳ್ಳಿ ಅಪ್ಪಯ್ಯಣ್ಣ, ನಗರಸಭೆ ಉಪಾಧ್ಯಕ್ಷ ರೈಲ್ವೇ ಸ್ಟೇಷನ್ ಮಲ್ಲೇಶ್, ನಗರಸಭೆ ಸದಸ್ಯ ವಡ್ಡರಳ್ಳಿ ರವಿ ಮುಖಂಡರಾದ ಜಗನ್ನಾತಾಚಾರ್, ವಕ್ತಾರ, ಕುಂಟನಹಳ್ಳಿ ಮಂಜುನಾಥ್ ಸೇರಿದಂತೆ ಹಲವಾರು ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

- Advertisement -  - Advertisement -  - Advertisement - 
Share This Article
error: Content is protected !!
";