ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಜಿಲ್ಲಾ ಜೆ ಡಿ ಎಸ್ ಘಟಕದ ವತಿಯಿಂದ ರಾಜ್ಯದಲ್ಲಿ ಆಡಳಿತ ರೂಢ ಕಾಂಗ್ರೆಸ್ ಸರ್ಕಾರದ ಲಂಚ ಗುಳಿತನ, ಭ್ರಷ್ಟಚಾರ, ಆಡಳಿತ ವೈಪಲ್ಯ ಮತ್ತು ಕಾಂಗ್ರೆಸ್ ಪಕ್ಷದ ಹಿರಿಯ ಶಾಸಕರೇ ನೇರವಾಗಿ ವಸತಿ ಸಚಿವ ಜಮೀರ್ ಅಹಮದ್ ರವರ ವಿರುದ್ಧ ಆಪಾದನೆ ಮಾಡಿದ್ದಾರೆ. ಭಷ್ಟಚಾರ ಹೊತ್ತಿರುವ ಸಚಿವ ಜಮೀರ್ ಅಹಮದ್ ಯವರನ್ನು ಸಚಿವ ಸಂಪುಟದಿಂದ ವಜಾಗೊಳಿಸುವಂತೆ ಒತ್ತಾಯಿಸಿ ಜೆಡಿಎಸ್ ವತಿಯಿಂದ ರಾಜ್ಯ ಸರ್ಕಾರದ ವಿರುದ್ಧ ಜೂನ್-30 ರಂದು ಸೋಮವಾರ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಜಿಲ್ಲಾಧ್ಯಕ್ಷ ಎಂ ಜಯಣ್ಣ ನಾಯಕತ್ವದಲ್ಲಿ ಪ್ರತಿಭಟನೆಯಲ್ಲಿ ನೆಡೆಯಲಿದೆ. ಪ್ರತಿಭಟನೆಯಲ್ಲಿ ಬಿ. ಕಾಂತರಾಜ್, ಡಿ.ಯಶೋಧರ್, ಕಳೆದ ವಿಧಾನಸಭಾ ಪರಾಜಿತ ಅಭ್ಯರ್ಥಿಗಳಾದ ರವೀಂದ್ರಪ್ಪ, ರವೀಶ್, ತಿಪ್ಪೇಸ್ವಾಮಿ, ವೀರಭದ್ರಪ್ಪ, ಜಿಲ್ಲಾ ಕಾರ್ಯಧ್ಯ ಜಿ ಬಿ ಶೇಖರ್, ತಾಲ್ಲೂಕು ಘಟಕದ ಅಧ್ಯಕ್ಷರಾದ ಸಣ್ಣತಿಮ್ಮಪ್ಪ, ಹನುಮಂತ ರಾಯಪ್ಪ, ಪರಮೇಶ್ವರಪ್ಪ, ಗಣೇಶಮೂರ್ತಿ, ಕರಿಬಸಪ್ಪ, ಪಿ ಟಿ ತಿಪ್ಪೇಸ್ವಾಮಿ ಮತ್ತಿತರರು ಭಾಗವಹಿಸಲಿದ್ದಾರೆ.
ವಿವಿಧ ಘಟಕಗಳ ಅಧ್ಯಕ್ಷರಾದ ಲಲಿತಾ ಕೃಷ್ಣಮೂರ್ತಿ, ಗೀತಮ್ಮ, ಪ್ರತಾಪ ಜೋಗಿ, ಲಿಂಗರಾಜ್, ಪರಮೇಶ್, ಅಬ್ಬು ಇತರರು ಭಾಗವಹಿಸುವರು. ಆದ್ದರಿಂದ ಪಕ್ಷದ ಎಲ್ಲಾ ಘಟಕದ ಪದಾಧಿಕಾರಿಗಳು ಮತ್ತು ಪಕ್ಷದ ಕಾರ್ಯಕರ್ತರು ಭಾಗವಹಿಸುವರು ಎಂದು ಜಿಲ್ಲಾ ಜೆಡಿಎಸ್ ಮಹಾ ಪ್ರಧಾನ ಕಾರ್ಯದರ್ಶಿ ಡಿ. ಗೋಪಾಲ ಸ್ವಾಮಿ ನಾಯಕ ತಿಳಿಸಿದ್ದಾರೆ.