ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರನ್ನು ಒಡೆದು ರಾಮನಗರ ಜಿಲ್ಲೆಯಾಗಿಸಿದ್ದು ಸನ್ಮಾನ್ಯ ಬ್ರದರ್ ಸ್ವಾಮಿಗಳು ರಿಯಲ್ ಎಸ್ಟೇಟ್ ದಂಧೆ ನಡೆಸಲಾ ಎಂದು ಜೆಡಿಎಸ್ ಖಾರವಾಗಿ ಪ್ರಶ್ನಿಸಿದೆ.
ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ಅವರು ತಮ್ಮ ಸ್ವಂತ ಪರಿಶ್ರಮದಿಂದ ಅವಶ್ಯಕತೆಯಷ್ಟು ಸಂಪಾದಿಸಿದ್ದಾರೆ, ನೂರಾರು ಎಕರೆ ಅರಣ್ಯ ಭೂಮಿ ಒತ್ತುವರಿಮಾಡಿಕೊಂಡು ಕಳ್ಳಾಟವಾಡುತ್ತಿರುವ ಪ್ರಭಾವಿ ಕುಟುಂಬದಂತೆ ದಂಧೆ ನಡೆಸುವ ಅವಶ್ಯಕತೆ ಅವರಿಗಿಲ್ಲ! ಎಂದು ಜೆಡಿಎಸ್ ದೂರಿದೆ.
ಕರ್ನಾಟಕ, ಕನ್ನಡಿಗರಿಗೆ ನಿರಂತರ ದ್ರೋಹ ಬಗೆಯುತ್ತಿರುವ ಬಿಜೆಪಿಯೊಂದಿಗೆ ಅನಧಿಕೃತ ವಿಲೀನ ಮಾಡಿಕೊಂಡು ಅವಲಕ್ಷಣ ಎನಿಸಿಕೊಂಡು ಮೋದಿ ಮುಂದೆ ಮಂಡಿಯೂರಿದ ವಿಲಕ್ಷಣ ರಾಜಕಾರಣ ಮಾಡಿದವರಿಗೆ ದಿಡೀರ್ ಕನ್ನಡಿಗರು, ಬೆಂಗಳೂರಿನ ಬಗ್ಗೆ ಕಾಳಜಿ ಉಕ್ಕಿ ಹರಿಯುತ್ತಿರುವುದು ಆಶ್ಚರ್ಯಕರ! ಎಂದು ಜೆಡಿಎಸ್ ವ್ಯಂಗ್ಯ ಮಾಡಿದೆ.
ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆದ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಮಂಡಿಸಿದ ಗ್ರೇಟರ್ ಬೆಂಗಳೂರು – 2025 ವಿಧೇಯಕ ಬೆಂಗಳೂರಿನ ಆಡಳಿತವನ್ನು ವಿಕೇಂದ್ರೀಕರಣ ಮಾಡುವ ಮೂಲಕ ಬೆಂಗಳೂರು ನಗರವನ್ನು ಅಭಿವೃದ್ಧಿಯ ಉತ್ತುಂಗಕ್ಕೇರಿಸುವ ದೂರದೃಷ್ಟಿಯ, ಮಹತ್ತರ ಉದ್ದೇಶ ಹೊಂದಿದೆ ಎಂದು ಜೆಡಿಎಸ್ ಆರೋಪಿಸಿದೆ.
ಬೆಂಗಳೂರು ನಗರ ಕೆಂಪೇಗೌಡರು ಕಟ್ಟಿಸಿದ ಗೋಪುರ ಮೀರಿ ಬೆಳೆದಿದೆ. ಕೆಂಪೇಗೌಡರ ದೂರದೃಷ್ಟಿಯಂತೆ ಬೆಳೆಯುತ್ತಲೇ ಇದೆ. ಈಗ ಅದನ್ನು ನಿಲ್ಲಿಸಲು ಆಗುವುದಿಲ್ಲ, ಮುಂದೆಯೂ ಆಗುವುದಿಲ್ಲ. ಈ ಹಿಂದೆ ಅಧಿಕಾರ ವಿಕೇಂದ್ರಿಕರಣದ ಉದ್ದೇಶದಿಂದಲೇ ಬೆಂಗಳೂರು ಮೂರು ಜಿಲ್ಲೆಯಾಯಿತು. ಈಗಲೂ ಕೂಡ ಆಡಳಿತಾತ್ಮಕ ದೃಷ್ಟಿಯಿಂದಲೇ ಪಾಲಿಕೆ ವಿಭಜನೆ ಮಾಡಲಾಗುತ್ತಿದೆ.
ಜನರ ದಿಕ್ಕುತಪ್ಪಿಸುವ, ಕಲ್ಪಿತ ಊಹಾಪೋಹಗಳನ್ನು ಹರಿಬಿಡುವುದು, ಆರೋಪ ಮಾಡುವುದು, ಮೋದಿ ಮುಂದೆ ಜೀ ಹುಜೂರ್ ಎನ್ನುವುದು ಬಿಟ್ಟು ಪಳೆಯುಳಿಕೆ ಪಕ್ಷವಾದ ನಿಮಗಾದರೂ ಇನ್ನೇನು ಉಳಿದಿದೆ? ಎಂದು ಖಾರವಾಗಿ ಜೆಡಿಎಸ್ ಪ್ರಶ್ನಿಸಿದೆ.