ಜಿ ರಾಮ್​ ಜಿ ಅತ್ಯಂತ ಪರಿಣಾಕಾರಿ ಮತ್ತು ಜನಪರ-ಶೋಭಾ ಕರಂದ್ಲಾಜೆ

News Desk
- Advertisement -  - Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಹುಬ್ಬಳ್ಳಿ:
ಕೇಂದ್ರ ಸರ್ಕಾರವು ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಗೆ ಜಿ ರಾಮ್​ ಜಿ ಎಂದು ಹೊಸ ಸ್ವರೂಪ ನೀಡಿದ್ದು ಇದು ಅತ್ಯಂತ ಪರಿಣಾಮಕಾರಿ ಹಾಗೂ ಜನಪರವಾಗಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ನಗರದಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ದೇಶಾದ್ಯಂತ ಕಾಂಗ್ರೆಸ್ ‌ಮತ್ತು‌ಇಂಡಿ‌ಒಕ್ಕೂಟ ಜಿ ರಾಮ್ ಜಿ ಕಾಯ್ದೆ ವಿರೋಧಿಸುತ್ತಿದೆ. ಜಿ ರಾಮ್ ಜಿ ಬಿಲ್ ಪಾಸಾಗಿದೆ. ಎಲ್ಲ ರಾಜ್ಯಗಳಿಗೂ ಅಳವಡಿಕೆಗೆ ಕಳುಹಿಸಲಾಗಿದೆ. 2005 ರಿಂದ ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಇಲ್ಲದ ಜನರಿಗೆ ಉದ್ಯೋಗ ಕೊಡುವ ಕೆಲಸ ಆರಂಭಿಸಲಾಯಿತು.

- Advertisement - 

2005 ರಿಂದ 2025 ರವರೆಗೆ 10.66 ಲಕ್ಷ ಕೋಟಿ ರೂ. ಗಳನ್ನು ಈ ಯೋಜನೆಗೆ ಖರ್ಚು ಮಾಡಿದ್ದೇವೆ ಎಂದರು. ಯುಪಿಎ ಸರ್ಕಾರದ ಅವಧಿಯಲ್ಲಿ ಮನರೇಗಾ ಯೋಜನೆಯಡಿ 1,660 ಕೋಟಿ ಮಾನವ ದಿನದ ಕೆಲಸ ಕೊಟ್ಟಿದ್ದರೆ, ಪ್ರಧಾನಿ ನೇತೃತ್ವದ ಮೋದಿ ಸರ್ಕಾರದ ಅವಧಿಯಲ್ಲಿ 3,010 ಕೋಟಿ ಮಾನವ ದಿನ ಕೆಲಸ ಕೊಡಲಾಗಿದೆ.
2,13,220 ಕೋಟಿ ರೂ. ಯುಪಿಎ ಅವಧಿಯಲ್ಲಿ ನೀಡಿದ್ದರೆ, 8,53,810 ಕೋಟಿ ಮೋದಿ ಅವಧಿಯಲ್ಲಿ ಖರ್ಚು ಮಾಡಲಾಗಿದೆ. 153 ಲಕ್ಷ ಬೇರೆ ಬೇರೆ ಕೆಲಸಗಳನ್ನು ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಈ ಹಿಂದೆ ನಕಲಿ ಜಾಬ್ ಕಾರ್ಡ್ ತೋರಿಸುತ್ತಿದ್ದರು.

ಕೆಲವು ರಾಜ್ಯಗಳಲ್ಲಿ ಅವ್ಯವಹಾರ ನಡೆಯಿತು. ದೇಶಾದ್ಯಂತ ಮನರೇಗಾ ಹಣ ದುರುಪಯೋಗದ ಬಗ್ಗೆ 10.50 ಲಕ್ಷ ಕೇಸ್ ನೋಂದಣಿಯಾಗಿವೆ. ಹೀಗಾಗಿ, ಈ ಯೋಜನೆ ಪರಿಶೀಲನೆ ಅಗತ್ಯ ಇತ್ತು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮೊದಲ ಅವಧಿಯಿಂದಲೇ ಇದರ ಪರಿಶೀಲನೆ ನಡೆಯುತ್ತಿತ್ತು. ಆದರೆ ಪ್ರಯೋಜನ ಏನೂ ಆಗಲಿಲ್ಲ. ಇದುವರೆಗೆ 100 ಕೆಲಸದ ದಿನ ಇತ್ತು, ಇದೀಗ ವರ್ಷಕ್ಕೆ 120 ದಿನ ಕೆಲಸದ ದಿನಗಳಾಗಿವೆ. ಏನು ಕೆಲಸ ಕೊಡಬೇಕೆಂದು ಆಯಾ ಗ್ರಾಮ ಪಂಚಾಯತ್​ಗಳು ನಿರ್ಧರಿಸಬೇಕು. ಇದು ಸರಿಯೋ ತಪ್ಪೋ ಕಾಂಗ್ರೆಸ್ ಹೇಳಲಿ ಎಂದರು.

- Advertisement - 

ಅಧಿಕಾರ ವಿಕೇಂದ್ರೀಕರಣಕ್ಕೆ ಕೇಂದ್ರ ಸರ್ಕಾರ ಆದ್ಯತೆ ನೀಡಿದೆ. ದೇಶದಲ್ಲಿ 25 ಕೋಟಿಗಿಂತ ಹೆಚ್ಚು ಜನ ಬಡತನ ರೇಖೆಗಿಂತ ಕೆಳಗಿದ್ದರು. ಇದೀಗ ಶೇ. 4.86ಕ್ಕೆ ಬಡತನ ಇಳಿದಿದೆ. ಗ್ರಾಮೀಣ ಆರ್ಥಿಕತೆ‌ಹೆಚ್ಚಿಸಬೇಕು. ಜಿ ರಾಮ್​ ಜಿ ಮುಖಾಂತರ ಜಲ ಸಂಪನ್ಮೂಲ ಬೆಳೆಸಬೇಕು, ಆಹಾರ ದಾಸ್ತಾನು ಹೆಚ್ಚಿಸಬೇಕು ಎಂದು ಕೇಂದ್ರ ಸಚಿವೆ ಶೋಭಾ ಅವರು ಹೇಳಿದರು.

ಕಾಂಗ್ರೆಸ್​ನವರು ಹೆಸರು ಬದಲಾಯಿತು ಎಂಬುದಕ್ಕೆ ಮಾತ್ರ ವಿರೋಧಿಸುತ್ತಿದ್ದಾರೋ ಅಥವಾ ಯಾವ ಕಾರಣಕ್ಕೆ ವಿರೋಧ ಮಾಡುತ್ತಿದ್ದಾರೆ ಎಂಬುದನ್ನು ಮೊದಲು ತಿಳಿಸಲಿ ಎಂದು ತಾಕೀತು ಮಾಡಿದ ಅವರು,
ಕಾಂಗ್ರೆಸ್​ನ ಅನೇಕ ಸಂಸದರು‌ಇದನ್ನು ಸ್ವಾಗತಿಸಿದ್ದಾರೆ.

ಆದರೆ, ಪಕ್ಷಕ್ಕಾಗಿ ಹೆಸರಿಗೆ ಮಾತ್ರ ವಿರೋಧ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು. ಕಳೆದ ಒಂದು ವರ್ಷದಿಂದ ಹಲವಾರು ಸಂಪನ್ಮೂಲ ವ್ಯಕ್ತಿಗಳೊಂದಿಗೆ ಚರ್ಚಿಸಿದ ನಂತರವೇ ಈ ಯೋಜನೆ ಜಾರಿಗೊಳಿಸಲಾಗಿದೆ. ಈ ಬಗ್ಗೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್​ ಬಹಿರಂಗ ಚರ್ಚೆಗೆ ಆಹ್ವಾನಿಸದರೆ ಹೋಗುತ್ತೇವೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.

 

Share This Article
error: Content is protected !!
";