ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಮತ್ತು ಜಿಲ್ಲಾ ಘಟಕಗಳಿಗೆ ಚುನಾವಣೆ ನಡೆಯುತ್ತಿದ್ದು, ಅ.27 ಸೋಮವಾರ ನಾಮಪತ್ರ ಸಲ್ಲಿಕೆ ಮುಕ್ತಯವಾಯಿತು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಚಿತ್ರದುರ್ಗ ಜಿಲ್ಲಾ ಘಟಕಕ್ಕೆ ಕೊನೆಯ ದಿನವಾದ ಸೋಮವಾರ ಒಟ್ಟು 27 ನಾಮಪತ್ರಗಳು ಸಲ್ಲಿಕೆಯಾಗಿದ್ದು, ಇಲ್ಲಿಯವರೆಗೆ ಒಟ್ಟು 49 ನಾಮಪತ್ರಗಳು ಸಲ್ಲಿಕೆಯಾಗಿವೆ.
ಜಿಲ್ಲಾ ಘಟಕದ ಅಧ್ಯಕ್ಷರು-ಒಂದು ಹುದ್ದೆ ಕೇಂದ್ರ ಸ್ಥಾನಕ್ಕೆ ಬಿ.ಎಸ್.ವಿನಾಯಕ, ಎಸ್.ಸಿದ್ದರಾಜು ಹಾಗೂ ಗೌನಹಳ್ಳಿ ಗೋವಿಂದಪ್ಪ ಸೇರಿದಂತೆ ಒಟ್ಟು ಮೂರು ಮಂದಿ ನಾಮಪತ್ರ ಸಲ್ಲಿಸಿದ್ದಾರೆ.
ಜಿಲ್ಲಾ ಘಟಕದ ಉಪಾಧ್ಯಕ್ಷರು (ಒಟ್ಟು ಮೂರು ಹುದ್ದೆ) ಸ್ಥಾನಕ್ಕೆ ಎಂ.ಎನ್.ಅಹೋಬಳಪತಿ, ಡಿ.ಕುಮಾರಸ್ವಾಮಿ, ಕೆ.ಕೆಂಚಪ್ಪ, ನಾಗತಿಹಳ್ಳಿ ಮಂಜುನಾಥ, ಸಿ.ಪಿ.ಮಾರುತಿ ಹಾಗೂ ಬಿ.ಟಿ.ರಂಗನಾಥ ಸೇರಿದಂತೆ ಒಟ್ಟು 6 ಮಂದಿ ನಾಮಪತ್ರ ಸಲ್ಲಿಸಿದ್ದಾರೆ.
ಪ್ರಧಾನ ಕಾರ್ಯದರ್ಶಿ-ಒಂದು ಹುದ್ದೆ ಕೇಂದ್ರ ಸ್ಥಾನಕ್ಕೆ ವೀರೇಶ ವಿ ಹಾಗೂ ಟಿ.ತಿಪ್ಪೇಸ್ವಾಮಿ ಸೇರಿದಂತೆ ಇಬ್ಬರು ನಾಮಪತ್ರ ಸಲ್ಲಿಸಿದ್ದಾರೆ.
ಕಾರ್ಯದರ್ಶಿಗಳು (ಒಟ್ಟು ಮೂರು ಹುದ್ದೆ) ಸ್ಥಾನಕ್ಕೆ ತಿಪ್ಪೇಸ್ವಾಮಿ ನಾಕೀಕೆರೆ, ನಾಗೇಶ್ ಬಿ.ಆರ್, ಜಿ.ಸುಭಾಷ್ ಚಂದ್ರ, ವಿ.ಚಂದ್ರಪ್ಪ ಹಾಗೂ ಹೆಚ್.ತಿಪ್ಪೇಸ್ವಾಮಿ ಸೇರಿದಂತೆ ಒಟ್ಟು ಐದು ಮಂದಿ ನಾಮಪತ್ರ ಸಲ್ಲಿಸಿದ್ದಾರೆ.
ಖಜಾಂಚಿ (ಒಂದು ಹುದ್ದೆ ಕೇಂದ್ರ ಸ್ಥಾನ)ಕ್ಕೆ ಡಿ.ಕುಮಾರಸ್ವಾಮಿ ಹಾಗೂ ಎಸ್.ಜೆ.ದ್ವಾರಕನಾಥ ಸೇರಿದಂತೆ ಇಬ್ಬರು ನಾಮಪತ್ರ ಸಲ್ಲಿಸಿದ್ದಾರೆ.
ಜಿಲ್ಲಾ ಕಾರ್ಯಕಾರಿಣಿ-15 ಸ್ಥಾನಗಳಿಗೆ ರವಿ ಮಲ್ಲಾಪುರ, ಸಿ.ಎನ್.ಕುಮಾರ್, ಎಸ್.ಬಿ.ರವಿಕುಮಾರ್, ಟಿ.ಜೆ.ತಿಪ್ಪೇಸ್ವಾಮಿ, ಜಿಒಎನ್ ಮೂರ್ತಿ, ಹೆಚ್.ಸಿ.ಗಿರೀಶ್, ಎಸ್.ಮಹಂತೇಶ್, ಎಸ್.ಟಿ.ನವೀನ್ ಕುಮಾರ್, ಹೆಚ್.ಟಿ.ಪ್ರಸನ್ನ, ಚೌಳೂರು ಮಂಜುನಾಥ, ಟಿ.ದರ್ಶನ್, ವರದರಾಜ, ವಿಶ್ವನಾಥ, ಜಡೇಕುಂಟೆ ಮಂಜುನಾಥ, ಎಸ್.ರಾಜಶೇಖರ, ಎಸ್.ಅಮಿತ್, ಕೆ.ಜಿ.ವೀರೇಂದ್ರ ಕುಮಾರ್, ಮಲ್ಲಿಕಾರ್ಜನಾಚಾರ್, ಅರ್ಜುನ್ ಡಿ, ಹೆಚ್.ಬಸವರಾಜಪ್ಪ, ಗೋಪಾಲ, ಎಲ್.ಕಿರಣ್ ಕುಮಾರ್, ಸಿ.ಎಂ.ನಾಡಿಗೇರ್, ಡಿ.ಎನ್.ಗೋವಿಂದಪ್ಪ, ನಾಗೇಶ್ ಬಿ.ಆರ್ ಹಾಗೂ ಆರ್.ಶಿವರಾಜ್ ಸೇರಿದಂತೆ ಒಟ್ಟು 26 ಮಂದಿ ನಾಮಪತ್ರ ಸಲ್ಲಿಸಿದ್ದಾರೆ.
ರಾಜ್ಯ ಸಮಿತಿ ಸದಸ್ಯರು (ಪ್ರತಿ ಜಿಲ್ಲೆಯಿಂದ ಒಬ್ಬರಂತೆ ಒಂದು ಹುದ್ದೆ) ಸ್ಥಾನಕ್ಕೆ ದಿನೇಶ ಗೌಡಗೆರೆ, ಸಿ.ರಾಜಶೇಖರ, ಟಿ.ತಿಪ್ಪೇಸ್ವಾಮಿ, ಎಸ್.ಸಿದ್ದರಾಜು ಹಾಗೂ ಎಲ್.ಕಿರಣ್ ಕುಮಾರ್ ಸೇರಿದಂತೆ ಐದು ಮಂದಿ ನಾಮ ಪತ್ರ ಸಲ್ಲಿಸಿದ್ದಾರೆ.
ಅಕ್ಟೋಬರ್ 28ರಂದು ಮಂಗಳವಾರ ಚುನಾವಣಾ ಕಚೇರಿ ಪತ್ರಿಕಾ ಭವನದ ಡಾ.ಬಿ.ಆರ್.ಅಂಬೇಡ್ಕರ್ ಸಭಾಂಗಣದಲ್ಲಿ ಬೆಳಿಗ್ಗೆ 11 ಗಂಟೆಯಿಂದ ನಾಮಪತ್ರಗಳ ಪರಿಶೀಲನೆ ನಡೆಯಲಿದೆ.
ಅ.30 ರಂದು ಗುರುವಾರ ನಾಮಪತ್ರಗಳನ್ನು ಹಿಂಪಡೆಯಲು ಕೊನೆಯ ದಿನ. ಅಂದೇ ಅಭ್ಯರ್ಥಿಗಳ ಅಂತಿಮ ಪಟ್ಟಿ ಪ್ರಕಟ ಮಾಡಲಾಗುವುದು. ನವೆಂಬರ್ 09ರಂದು ಭಾನುವಾರ ಬೆಳಿಗ್ಗೆ 9 ರಿಂದ ಮಧ್ಯಾಹ್ನ 3 ರವರೆಗೆ ಅಗತ್ಯ ಬಿದ್ದಲ್ಲಿ ಮತದಾನ ನಡೆಯಲಿದೆ.
ಅಂದೇ ಮಧ್ಯಾಹ್ನ 3.30ರ ನಂತರ ಮತಗಳ ಎಣಿಕೆ ಹಾಗೂ ಫಲಿತಾಂಶ ಪ್ರಕಟವಾಗಲಿದೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಚಿತ್ರದುರ್ಗ ಜಿಲ್ಲಾ ಘಟಕದ ಜಿಲ್ಲಾ ಚುನಾವಣಾಧಿಕಾರಿ ಚಿಕ್ಕಪ್ಪನಹಳ್ಳಿ ಷಣ್ಮುಖ ತಿಳಿಸಿದ್ದಾರೆ.

