ನ್ಯಾಯಾಂಗ ಪರೀಕ್ಷಾ ಫಲಿತಾಂಶ ಪ್ರಕಟ ಶ್ವೇತಾಗೆ 59ನೇ ಸ್ಥಾನ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಚಿಕ್ಕಮಗಳೂರು:
ರಾಜ್ಯ ನ್ಯಾಯಾಂಗ ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು, ಹಿರೇಮಗಳೂರಿನ ಎಚ್.ಇ ಶ್ವೇತಾ ಅವರು 59ನೇ ಸ್ಥಾನದೊಡನೆ ನ್ಯಾಯಾಧೀಶರಾಗಿ ಆಯ್ಕೆಯಾಗಿದ್ದು, ಚಿಕ್ಕಮಗಳೂರಿಗೆ ಹೆಮ್ಮೆ ತಂದಿದ್ದಾರೆ ಎಂದು ವಿಧಾನ ಪರಿಷತ್ ಶಾಸಕ ಸಿ.ಟಿ ರವಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ತರಕಾರಿ ವ್ಯಾಪಾರಸ್ಥರಾದ ಈಶ್ವರ್ ಮತ್ತು ಕುಸುಮಾ ದಂಪತಿಗಳ ಪುತ್ರಿ ಶ್ವೇತಾ ಅವರು ಪರಿಶ್ರಮದಿಂದ ಯಾವ ಸಾಧನೆಯನ್ನಾದರೂ ಮಾಡಬಹುದು ಎಂದು ಸಾಬೀತುಪಡಿಸಿದ್ದಾರೆ.

- Advertisement - 

ಶ್ವೇತಾ ಅವರಿಗೆ ಕರೆ ಮಾಡಿ, ಈ ಸಾಧನೆಗಾಗಿ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿ, ಅವರ ಸಾಧನೆ ಚಿಕ್ಕಮಗಳೂರಿನ ಯುವ ಜನತೆಗೆ ಇನ್ನಷ್ಟು ಸ್ಫೂರ್ತಿ ನೀಡಲಿ ಎಂದು ಸಿ.ಟಿ ರವಿ ಅವರು ಹಾರೈಸಿದರು.
ಶ್ವೇತಾ ಸಾಧನೆಗೆ ಬೆಂಬಲವಾಗಿದ್ದ ಅವರ ಪೋಷಕರಿಗೂ ಅಭಿನಂದನೆಗಳು. ನ್ಯಾಯಾಂಗ ಸೇವೆಯಲ್ಲಿ ಶ್ವೇತಾ ಉತ್ತಮ ಕೊಡುಗೆ ನೀಡಲಿ ಎಂದು ರವಿ ಅವರು ಶುಭ ಹಾರೈಸಿದರು.

ನ್ಯಾಯಾಂಗ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ, ನ್ಯಾಯಾಧೀಶರಾಗಿ ಆಯ್ಕೆಯಾಗಿರುವ ರಾಜ್ಯದ ಎಲ್ಲ ಪ್ರತಿಭೆಗಳಿಗೂ ಹೃತ್ಪೂರ್ವಕ ಅಭಿನಂದನೆಗಳನ್ನು ರವಿ ಅವರು ಸಲ್ಲಿಸಿದ್ದಾರೆ.

- Advertisement - 

 

 

 

Share This Article
error: Content is protected !!
";