ಜೂನ್ 13 ಮತ್ತು 14ರಂದು ಜೇನು ಕೃಷಿಯ ತರಬೇತಿ ಕಾರ್ಯಗಾರ

News Desk

ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ತಾಲ್ಲೂಕಿನ ಬಬ್ಬೂರುಫಾರಂನ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಇದೇ ಜೂನ್
13 ಮತ್ತು 14ರಂದು ಬೆಳಿಗ್ಗೆ 10ಕ್ಕೆ ಜಿಲ್ಲೆಯ ಆಸಕ್ತ ಯುವ ಮತ್ತು ಮಹಿಳಾ ರೈತರಿಗೆ ವಿಶೇಷ ಜೇನು ಕೃಷಿಯ ಕುರಿತು ಎರಡು ದಿನದ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

- Advertisement - 

ಜೂನ್ 13ರಂದು ಮೊದಲನೇಯ ದಿನ ಮೇಟಿಕುರ್ಕೆಯ ಜೇನು ಕೃಷಿ ತಜ್ಞರು ಹಾಗೂ ನಿವೃತ್ತ ಸಹಾಯಕ ನಿರ್ದೇಶಕ ಡಾ. ಶಾಂತವೀರಯ್ಯ ಅವರು ಜೇನು ಕೃಷಿಯಿಂದ ಆರೋಗ್ಯ, ಆಹಾರ, ಆದಾಯ, ಉದ್ಯೋಗ, ಪರಿಸರ ಸಮತೋಲನೆ ಕಾಪಾಡುವಿಕೆ ಹಾಗೂ ಜೇನು ಸಾಕಾಣಿಕೆಯ ಸಮಗ್ರ ಮಾಹಿತಿಯಬಗ್ಗೆ ವಿಷಯ ಮಂಡನೆ ಮಾಡಲಿದ್ದಾರೆ. 

- Advertisement - 

ತರಬೇತಿಯ 2ನೇ ದಿನ ಮೇಟಿಕುರ್ಕೆಯ ಚಂದನ ಮಧುವನ ಜೇನು ಸಾಕಾಣಿಕೆ ತರಬೇತಿ ಕೇಂದ್ರದಲ್ಲಿ ತಮ್ಮ ಹೊಲ/ತೋಟದಲ್ಲಿ ಕಟ್ಟಿದ ಜೇನು ಕಟುಂಬವನ್ನು ಜೇನು ಸಾಕಾಣಿಕೆ ಪೆಟ್ಟಿಗೆಗೆ ವರ್ಗಾಯಿಸುವ ವಿಧಾನ, ಜೇನು ಪಟ್ಟಿಗೆಗಳ ನಿರ್ವಹಣೆ, ಜೇನು ಕುಟುಂಬಗಳ ವಿಭಜನೆ, ಜೇನು ತೆಗೆಯುವ ವಿಧಾನ ಇನ್ನಿತರೆ ವಿಷಯಗಳ ಕುರಿತು ಪ್ರಾಯೋಗಿಕವಾಗಿ ಪ್ರಾತ್ಯಕ್ಷಿಕೆಯನ್ನು ಏರ್ಪಡಿಸಲಾಗಿದೆ.

ಆಸಕ್ತ 40 ಜನರೈತ ಭಾಂದವರು ಈ ತರಬೇತಿಯಲ್ಲಿ ಭಾಗವಹಿಸಲು 8277931058 ದೂರವಾಣಿ ಸಂಖ್ಯೆಗೆ ಕರೆ ಮಾಡಿ ನೋಂದಾಯಿಸಿ ಈ ತರಬೇತಿಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕ ಆರ್.ರಜನೀಕಾಂತ ತಿಳಿಸಿದ್ದಾರೆ.

- Advertisement - 

 ಮೊದಲು ನೋಂದಾವಣಿ ಮಾಡಿಕೊಂಡ 40 ರೈತ ಭಾಂದವರು ಫ್ರೂಟ್ಸ್ ಐಡಿ (ಎಫ್.ಐಡಿ) ಅಥವಾ ಆಧಾರ್ ಕಾರ್ಡ್‍ನೊಂದಿಗೆ ತರಬೇತಿಗೆ ಹಾಜರಾಗಬೇಕು ಎಂದು ಪ್ರಕಟಣೆ ತಿಳಿಸಿದೆ.

 

Share This Article
error: Content is protected !!
";