ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಕುರಿತು ಅವಹೇಳನಕಾರಿಯಾಗಿ ಮಾತನಾಡಿರುವ ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್ ರವಿಕುಮಾರ್ ರವರನ್ನು ಕೂಡಲೆ ಬಂಧಿಸುವಂತೆ ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜ್ಯೋತಿಲಕ್ಷ್ಮಿ ಗೋಪಿಯಾದವ್ ಆಗ್ರಹಿಸಿದ್ದಾರೆ.
ನಿಷ್ಠಾವಂತ ಮಹಿಳಾ ಅಧಿಕಾರಿಯಾಗಿ ಶಾಲಿನಿ ರಜನೀಶ್ ಅವರು ತನ್ನ ಕರ್ತವ್ಯವನ್ನು ಸಮಯ ನಿಗದಿಪಡಿಸದೆ ಕರ್ತವ್ಯ ನಿರ್ವಹಿಸಿದ್ದಕ್ಕೆ ಅವಹೇಳನಕಾರಿ ಹೇಳಿಕೆ ನೀಡಿರುವ ಎನ್ ರವಿ ಕುಮಾರ್ ರವರಿಗೆ ಬಿಜೆಪಿ ಪಕ್ಷ ವಿರೋಧ ಪಕ್ಷದ ಸಚೇತಕ ಹುದ್ದೆಯಿಂದ ಎನ್ ರವಿಕುಮಾರ್ ಅವರನ್ನು ತೆರವುಗೊಳಿಸುವಂತೆ ಜ್ಯೋತಿ ಲಕ್ಷ್ಮಿ ಗೋಪಿ ಯಾದವ್ ಆಗ್ರಹಿಸಿದ್ದಾರೆ.
ಗಾಂಧಿ ಪ್ರತಿಮೆ ಮುಂದೆ ಕೂತು ಅಸಂಸದೀಯ ಪದ ಬಳಸಿ ನಿಂದಿಸಿರುವುದು ಸರಿಯಲ್ಲ. ಈ ಹಿಂದೆ ವಿಧಾನ ಪರಿಷತ್ ಸದಸ್ಯ ಸಿಟಿ ರವಿ ಅವರು ವಿಧಾನ ಪರಿಷತ್ತಿನಲ್ಲಿ ಹೆಣ್ಣು ಮಕ್ಕಳ ಬಗ್ಗೆ ಇದೇ ರೀತಿ ಅಸಂಸದೀಯ ಪದ ಬಳಸಿ ಮಾತನಾಡಿದ್ದರು.
ಬಿಜೆಪಿಯ ಮುಖಂಡರು ಹೆಣ್ಣು ಮಕ್ಕಳ ಕುರಿತು ತಾತ್ಸಾರ, ಅವಹೇಳನಕಾರಿಯಾಗಿ ಮಾತನಾಡುತ್ತಿರುವುದು ಹೆಣ್ಣು ಮಕ್ಕಳಿಗೆ ನೀಡುತ್ತಿರುವ ಗ್ಯಾರಂಟಿ ಯೋಜನೆಯನ್ನು ಬಿಟ್ಟಿ ಯೋಜನೆ ಎಂದು ವ್ಯಂಗ್ಯ ಮಾಡುತ್ತಾರೆ. ಇಂತಹ ಅಸಂಸದೀಯ ವ್ಯಕ್ತಿಗಳನ್ನು ಕೂಡಲೇ ಬಂಧಿಸುವಂತೆ ಜ್ಯೋತಿಲಕ್ಷ್ಮಿ ಆಗ್ರಹಿಸಿದ್ದಾರೆ.