ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಜಲ ಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಅವರೇ, ಅಪಾಯದಲ್ಲಿರುವ ಕಬಿನಿ ಅಣೆಕಟ್ಟೆಯಲ್ಲಿನ ಬಿರುಕನ್ನು ಮೊದಲು ದುರಸ್ಥಿ ಪಡಿಸುವ ಕೆಲಸವನ್ನು ತುರ್ತಾಗಿ ಮಾಡಿ ಎಂದು ಜೆಡಿಎಸ್ ಆಗ್ರಹ ಮಾಡಿದೆ.
ಕಬಿನಿ ಬಲದಂಡೆ ನಾಲೆ ಬಳಿ ನೀರು ಸೋರಿಕೆ ಬೆನ್ನಲ್ಲೇ, ಕ್ರಸ್ಟ್ ಗೇಟ್ ಸಮೀಪ ಮತ್ತೊಂದು ದೊಡ್ಡ ಬಿರುಕು ಕಾಣಿಸಿಕೊಂಡು ನೀರು ಹೊರಬರುತ್ತಿದೆ. ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಸಿದ್ದರಾಮಯ್ಯ ಸರ್ಕಾರದ ಭ್ರಷ್ಟಾಚಾರ, ಹಗರಣಗಳನ್ನು ಮುಚ್ಚಿಹಾಕಲು 24/7 ನಿರತರಾಗಿದ್ದಾರೆ. ಆದರೆ ಡ್ಯಾಂಗಳ ಸುರಕ್ಷತೆ ಬಗ್ಗೆ ಗಮನ ಹರಿಸಲು ಸಮಯವೇ ಇಲ್ಲವಾಗಿರುವುದು ವಿಪರ್ಯಾಸ.
ತುಂಗಭದ್ರಾ ಡ್ಯಾಂನಲ್ಲಿ ಎಲ್ಲಾ ಕ್ರಸ್ಟ್ ಗೇಟ್‌ಗಳನ್ನು ಬದಲಿಸುವುದಾಗಿ ಹೇಳಿ, ಇನ್ನೂ ಹೊಸ ಗೇಟ್‌ಗಳನ್ನು ಅಳವಡಿಸಿಲ್ಲ. ಈಗ ಕಬಿನಿ ಜಲಾಶಯದ ಸುರಕ್ಷತೆ ಬಗ್ಗೆಯೂ ಜನರಲ್ಲಿ ತೀವ್ರ ಆತಂಕ ಸೃಷ್ಟಿಯಾಗಿದೆ ಎಂದು ಜೆಡಿಎಸ್ ಆತಂಕ ವ್ಯಕ್ತಪಡಿಸಿದೆ.

