ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ದೆಹಲಿಯ ಪ್ರತಿಷ್ಠಿತ ಭಾರತೀಯ ಕೃಷಿ ಸಂಶೋಧನೆ ಸಂಸ್ಥೆಯಲ್ಲಿ (ಐಎಆರ್ ಐ) ಕೃಷಿ ಸಂಶೋಧನೆ ನಡಿಸಿ ಡಾಕ್ಟರೆಟ್ ಆಫ್ ಫಿಲಾಸಫಿ (ಪಿಹೆಚ್.ಡಿ)ಪದವಿ ಪಡೆದ ಹಿರಿಯೂರು ತಾಲ್ಲೂಕಿನ ಬಾಲೆನಹಳ್ಳಿ ಗ್ರಾಮದ ಕಾಡುಗೊಲ್ಲ ಸಮಾಜದ ಕುಮಾರಿ ಕಾವ್ಯ.ಟಿ ಅವರಿಗೆ ಹಿರಿಯೂರು ತಾಲ್ಲೂಕು ಪ್ರವಾಸಿ ಮಂದಿರದಲ್ಲಿ ರಾಜ್ಯ ಕಾಡುಗೊಲ್ಲ ಸಂಘದ ವತಿಯಿಂದ ಸನ್ಮಾನ ಮಾಡಿ ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಕೆ. ಮಂಜುನಾಥ್, ರಾಜ್ಯ ಕಾಡುಗೊಲ್ಲ ಸಂಘದ ರಾಜ್ಯಾಧ್ಯಕ್ಷ ರಾಜಣ್ಣ, ರಾಜ್ಯ ಉಪಾಧ್ಯಕ್ಷ ಮೀಸೆ ಮಹಾಲಿಂಗಪ್ಪ, ತಾಲ್ಲೂಕು ಅಧ್ಯಕ್ಷ ವಕೀಲ ಪಿ. ಆರ್.ದಾಸ್, ಕಾಡುಗೊಲ್ಲ ಮುಖಂಡ ರಂಗಪ್ಪ, ನಗರಸಭೆ ಮಾಜಿ ಅಧ್ಯಕ್ಷೆ ಶಿವರಂಜಿನಿ ಯಾದವ್, ಆಲಮರದಹಟ್ಟಿ ಶಿವಣ್ಣ, ವಕೀಲ ನಾಗರಾಜ್, ಚಿತ್ತಪ್ಪ, ಸಿದ್ದೇಶ್, ವೇದಮೂರ್ತಿ, ನಾಗೇಂದ್ರ, ಹಿರಿಯ ಕಿರಿಯ ಮುಖಂಡರು, ಸಂಘದ ಪದಾಧಿಕಾರಿಗಳು ಹಾಗೂ ಕಾಡುಗೋಲ್ಲ ಬಂಧುಗಳು ಪಾಲ್ಗೊಂಡಿದ್ದರು.

