ಕಲಬುರಗಿ-ಚಿತ್ರದುರ್ಗ ಎ/ಸಿ ಸ್ಲೀಪರ್ ಬಸ್ ಕಾರ್ಯಾಚರಣೆ

News Desk
- Advertisement -  - Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಕಲಬುರಗಿ ವಿಭಾಗ-1 ರಿಂದ ಕಲಬುರಗಿ-ಚಿತ್ರದುರ್ಗ ಹಾಗೂ ಕಲಬುರಗಿ-ಮೈಸೂರು ಎ/ಸಿ ಸ್ಲೀಪರ್ ಬಸ್‍ಗಳ(ಅಮೋಘವರ್ಷ) ಕಾರ್ಯಾಚರಣೆ ಆರಂಭಿಸಲಾಗಿದೆ.

ಕಲಬುರಗಿ-ಚಿತ್ರದುರ್ಗ ಬಸ್ ಪ್ರತಿದಿನ ರಾತ್ರಿ 10:45ಕ್ಕೆ ಕಲಬುರಗಿಯಿಂದ ಹೊರಟು ಜೇವರ್ಗಿ,ಶಹಾಪೂರ, ಲಿಂಗಸೂರು, ಸಿಂಧನೂರು,ಗಂಗಾವತಿ,ಹೊಸಪೇಟೆ ಮಾರ್ಗವಾಗಿ ಮುಂಜಾನೆ 8 ಗಂಟೆಗೆ ಚಿತ್ರದುರ್ಗ ತಲುಪಲಿದೆ. ಮರಳಿ ಚಿತ್ರದುರ್ಗದಿಂದ ರಾತ್ರಿ 7:30 ಹೊರಟು ಮುಂಜಾನೆ  5:20ಕ್ಕೆ ಕಲಬುರಗಿ ತಲುಪಲಿದೆ.

- Advertisement - 

ಕಲಬುರಗಿ-ಮೈಸೂರು ಬಸ್ ಪ್ರತಿದಿನ ಸಂಜೆ 5 ಗಂಟೆಗೆ ಕಲಬುರಗಿಯಿಂದ ಹೊರಟು ಜೇವರ್ಗಿ,ಶಹಾಪೂರ, ಲಿಂಗಸೂರು, ಸಿಂಧನೂರು, ಬಳ್ಳಾರಿ, ಚಳ್ಳಕೆರೆ, ಹಿರಿಯೂರು, ನಾಗಮಂಗಲ ಹಾಗೂ ಪಾಂಡವಪುರ ಮಾರ್ಗವಾಗಿ ಮುಂಜಾನೆ 7 ಗಂಟೆಗೆ ಮೈಸೂರು ತಲುಪಲಿದೆ. ಮರಳಿ ದಮೈಸೂರಿನಿಂದ ಸಂಜೆ 5:30 ಹೊರಟು ಮುಂಜಾನೆ 7:30ಕ್ಕೆ ಕಲಬುರಗಿ ತಲುಪಲಿದೆ.

ಸಾರ್ವಜನಿಕರು ಸದರಿ ಸಾರಿಗೆಗಳ ಸದುಪಯೋಗ ಪಡೆದುಕೊಳ್ಳುವಂತೆ ಕಲಬುರಗಿ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ಕೋರಿದ್ದಾರೆ.

- Advertisement - 

 

Share This Article
error: Content is protected !!
";