ವಕೀಲ ಪ್ರತಾಪ್ ಬಂದನಕ್ಕೆ ಕಲ್ಯಾಣ್ ಆಗ್ರಹ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ತಾಲ್ಲೂಕಿನ ಸಾಸಲು ಹೋಬಳಿಯ ದಡಘಟ್ಟಮಡುಗು ಗ್ರಾಮ ವ್ಯಾಪ್ತಿಯಲ್ಲಿ ಕಳೆದ ಹಲವು ದಿನಗಳ ಹಿಂದೆ  ವಕೀಲ ಪ್ರತಾಪ್ ಹಾಗೂ ಸ್ಥಳೀಯರ ನಡುವೆ ಜಮೀನು ವಿವಾದ ಸೃಷ್ಟಿಯಾಗಿದ್ದು ಸದರಿ ಜಮೀನು ವಿಚಾರದ ಗಲಾಟೆ ಕುರಿತು ಹೊಸಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದೂರು ದಾಖಲಾಗಿದ್ದು ಸದರಿ ಇಬ್ಬರ ಮೇಲೂ ಎಫ್ ಐ ಆರ್ ದಾಖಲಾಗಿತ್ತು ಆದರೆ ಈಗ ಆರೋಪಿ ಲೋಕೇಶ್ ನನ್ನು ಯಾವುದೇ ಮಾಹಿತಿ ನೀಡದೆ ಬಂಧಿಸಿರುವ ಪೊಲೀಸರು ಮತ್ತೋರ್ವ ಆರೋಪಿ ಪ್ರತಾಪ್ ನನ್ನ ಬಂಧಿಸಿಲ್ಲ ಏಕೆ ಎಂದು ಸಾಸಲು ಹೋಬಳಿ ಮುಖಂಡ ಕಲ್ಯಾಣ್ ಅಗ್ರಹಿಸಿದರು.

 ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು  ತಾಲೂಕಿನಲ್ಲಿ ಹಣವಂತರಿಗೊಂದು ನ್ಯಾಯ ಬಡವರಿಗೊಂದು ನ್ಯಾಯವಾಗುತ್ತಿದೆ. ಯಾವುದೇ ಮಾಹಿತಿ ನೀಡದೆ ಇಂದು ಮುಂಜಾನೆ ಲೋಕೇಶ್ ರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ ಆದರೆ  ಇದೆ ಪ್ರಕರಣದ ಮತ್ತೋರ್ವ ಆರೋಪಿ ಪ್ರತಾಪ್ ಸೇರಿದಂತೆ ಒಟ್ಟು 7ಮಂದಿ ವಿರುದ್ಧ ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ , ಕೂಡಲೇ ವಕೀಲ ಪ್ರತಾಪ್ ಹಾಗೂ ಪ್ರಕರಣದಲ್ಲಿ ದಾಖಲಾಗಿರುವ  ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆಯಬೇಕು  ನಮಗೆ ನ್ಯಾಯ ಒದಗಿಸಬೇಕು ಎಂದರು.

- Advertisement - 

 ಸಾಸಲು ಹೋಬಳಿಯಲ್ಲಿ  ಭೂ ಮಾಫಿಯ ಹೆಚ್ಚಾಗಿದ್ದು ಬಡವರ ಭೂಮಿಗಳನ್ನು ಕಸಿದುಕೊಳ್ಳುವ ಪ್ರಯತ್ನ ನಡೆಯುತ್ತಿದೆ ಇದಕ್ಕೆ ಉತ್ತಮ ನಿದರ್ಶನವಾಗಿ  ಈ ಪ್ರಕರಣ ನಡೆದಿದ್ದು  ಬಡ ಕುಟುಂಬಕ್ಕೆ ಭೂಮಿ ಇಲ್ಲದಂತಾಗಿದೆ. ಭೂಮಿ ಕೇಳಲು ಹೋದ  ಜಮೀನು ಮಾಲೀಕರ ಮೇಲೆ ಹಲ್ಲೆ ಪ್ರಕರಣ, ಜಾತಿ ನಿಂದನೆ ಪ್ರಕರಣ ಸೇರಿದಂತೆ ಹಲವು ಪ್ರಕರಣ ದಾಖಲಿಸಿ ತೊಂದರೆ ಕೊಡುತ್ತಿದ್ದಾರೆ  ಲೋಕೇಶ್ ಮತ್ತು ವರಲಕ್ಷ್ಮಿ ಕುಟುಂಬಕ್ಕೆ ಆಧಾರವಾಗಿರುವ ಜಮೀನು ಕಸಿದುಕೊಂಡರೆ ಹೇಗೆ ಬಡವರ ಪರ ನಿಲ್ಲಬೇಕಾಗಿರುವ ಅಧಿಕಾರಿಗಳೇ  ಬಡ ರೈತರ ವಿರುದ್ಧವಾದರೆ ಹೇಗೆ  ಈ ಕೂಡಲೇ  ತಪ್ಪಿತಸ್ಥರನ್ನು ವಶಕ್ಕೆ ಪಡೆದು  ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

 

- Advertisement - 

 

Share This Article
error: Content is protected !!
";