ಕಲ್ಯಾಣಿ ಸ್ವಚ್ಛತೆಗೆ ಜಿಲ್ಲಾಧಿಕಾರಿಗಳಿಂದ ಶ್ರಮದಾನ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ದಿನದಿಂದ ದಿನಕ್ಕೆ ಬಿಸಿಲಿನ ತಾಪಮಾನ ಹೆಚ್ಚುತ್ತಿದ್ದು  ಜೀವರಾಶಿಗಳು  ನೀರಿನ  ಸಮಸ್ಯ ತಲೆದೋರದಂತೆ  ಮುನ್ನಚ್ಚರಿಕೆ ಕ್ರಮ ವಹಿಸಬೇಕಾಗಿದೆ  ಎಂದು ಮಾನ್ಯ ಜಿಲ್ಲಾಧಿಕಾರಿ ಬಸವರಾಜ್ ತಿಳಿಸಿದರು.

ನಗರಸಭೆ, ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಸೇರಿ ಸಂಘ-ಸಂಸ್ಥೆಗಳ ನೆರವಿನಿಂದ ಭಾನುವಾರ ಆಯೋಜಿಸಿದ್ದ ನಗರದ ಪುರಾತನ ಹಾಗು ಐತಿಹಾಸಿಕ ಹಿನ್ನೆಲೆ ಇರುವ ದೊಡ್ಡಬಳ್ಳಾಪುರ ದಿಂದ ಬೆಂಗಳೂರಿಗೆ ಹೋಗುವ ರಸ್ತೆಯ ಪಕ್ಕದಲ್ಲಿರುವ. ಅಂಜೀನೆಯ ಸ್ವಾಮಿ ದೇವಾಲಯದ ಪಕ್ಕದಲ್ಲಿ ಇರುವ  ಪುರಾತನ ರಾಮಣ್ಣ ಬಾವಿ ಕಲ್ಯಾಣಿಯ ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 700ಕ್ಕೂ ಹೆಚ್ಚು ಕೆರೆ-ಕಟ್ಟೆ, ಕಲ್ಯಾಣಿ ಗಳನ್ನು ಗುರುತಿಸಲಾಗಿದೆ. ಇವುಗಳ ಸಂರಕ್ಷಣೆಗೆ ಒತ್ತು ನೀಡಲಾಗುವುದು. ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ನೀರಿನ ಮೂಲ ಇಲ್ಲ. ಬೋರ್ ವೆಲ್ ಹಾಗೂ ಕೆರೆ-ಕಟ್ಟೆ ಕಲ್ಯಾಣಿಗಳು ಇವುಗಳನ್ನ ಉಳಿಸಿ ಕೊಳ್ಳಬೇಕಿದೆ ಎಂದರು.

- Advertisement - 

 ಜೀವ ಸಂಕುಲ ಹಾಗು ಪ್ರಾಣಿ ಸಂಕುಲ ಉಳಿ ಬೇಕಾದರೆ ನೆಲ ಜಲ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕು  ಪೂರ್ವಿಕರು ಕೆರೆ ಕುಂಟೆ ಬಾವಿಗಳ ನೀರು ಕುಡಿಯುವ ನೀರಿನ ಮೂಲವಾಗಿತ್ತು  ನಗರದಲ್ಲಿ   ಗಿಡ ಮರಗಳು ಬೆಳೆಸಿದರು ನಗರದ ಸೌಂದರ್ಯ ಹೆಚ್ಚುತ್ತದೆ  ಎಂದರು.

ಪ್ರತಿ ಶನಿವಾರ ಹಾಗು ಭಾನುವಾರ ದಿನದಂದು ಜಿಲ್ಲೆಯ ಪ್ರತಿಯೊಂದು ಕೆರೆ ಕಟ್ಟಿ, ಕಲ್ಯಾಣಿಗಳ ಸ್ವಚ್ಛಗೊಳಿಸುವ ಕಾರ್ಯ ಮಾಡೋಣ ಎಂದರು. ಮುಕ್ಕಣ್ಣೀಶ್ವರ ದೇವಸ್ಥಾನ ಉಳಿಸಿ: ತಾಲೂಕಿನ ಹುಲುಕುಡಿ ಬೆಟ್ಟದ ತಪ್ಪಲಿನಲ್ಲಿರುವ ಪುರಾತನ ಮುಕ್ಕಣೇಶ್ವರ ದೇವಸ್ಥಾನದ ಪರಿಸರವನ್ನು

- Advertisement - 

ಖಾಸಗಿಯವರು ಹಾಳು ಮಾಡುತ್ತಿದ್ದಾರೆ. ಈ ಬಗ್ಗೆ ಹಿಂದೆಯೂ ಮನವಿ ಮಾಡಿದ್ದೆವು. ಈ ವರೆಗೆ ಕ್ರಮ ಜರುಗಿಸಿಲ್ಲ. ಹಲವು ದಶಕಗಳ ಕಾಲದ ಇತಿಹಾಸವಿರುವ ದೇಗುಲ ಸಂರಕ್ಷಿಸಿ ಎಂದು ಜಿಲ್ಲಾಧಿಕಾರಿಗಳಿಗೆ  ಮನವಿ ನೀಡಲಾಯಿತು.

  ಕಾರ್ಯದಲ್ಲಿ ಪೌರಾಯುಕ್ತ ಕಾರ್ತಿಕ್ ಈಶ್ವರ್, ನಗರಸಭೆ ಉಪಾಧ್ಯಕ್ಷ ಮಲ್ಲೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ರವಿಕುಮಾ‌ರ್, ಸಂಘ ಸಂಸ್ಥೆಗಳ ಮುಖಂಡರು ಪರಿಸರವಾದಿಗಳು ಮತ್ತು ಸಾರ್ವಜನಿಕರು ಹಾಜರಿದ್ದರು.

 

 

Share This Article
error: Content is protected !!
";