ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ದೊಡ್ಡಬಳ್ಳಾಪುರ ಗ್ರಾಮಾಂತರ ಮಧುರೆ ಹೋಬಳಿ ಮಧುರನ ಹೊಸಹಳ್ಳಿ ಗ್ರಾಮದಲ್ಲಿ ಶ್ರೀ ಮಾರುತಿ ಯುವಕರ ಸಂಘದಿಂದ ಗ್ರಾಮಸ್ಥರೆಲ್ಲ ಸೇರಿ ಕಾಮನ ತಿಥಿ ಕಾರ್ಯ ನೆರವೇರಿಸಲಾಯಿತು.
ಮಾ.12 ರಂದು ಕಾಮನ ಹುಣ್ಣಿಮೆಯ ದಿನ ಕಾಮನ ದಹನ ಮಾಡಲಾಗಿದ್ದು ನಂತರ 11ದಿನಗಳ ಕಳೆದ ನಂತರ ತಿಥಿ ಕಾರ್ಯ ನೆರವೇರಿಸಲಾಗಿ, ಪೂಜೆ ಸಲ್ಲಿಕೆ, ಪ್ರಸಾದಹಂಚಲಾಯಿತು. ಈ ಸಂದರ್ಭದಲ್ಲಿ ಮಧುರನ ಹೊಸಹಳ್ಳಿಯ ಗ್ರಾಮಸ್ಥರ ಅಕ್ಕಪಕ್ಕದ ಗ್ರಾಮದ ಜನರು ಹಾಜರಿದ್ದರು.