ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಶ್ರೀಸೂರ್ಯ ಪದವಿ ಪೂರ್ವ ಕಾಲೇಜು ಆವರಣದಲ್ಲಿ ದಾಸ ಶ್ರೇಷ್ಠ ಕನಕದಾಸರ ಜಯಂತಿ ಕಾರ್ಯಕ್ರಮವನ್ನು ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ನಗರಸಭೆ ಮಾಜಿ ಅಧ್ಯಕ್ಷ ಕೆ ಬಿ ಮುದ್ದಪ್ಪ ಕನಕದಾಸರ ಆದರ್ಶ ನಮಗೆ ದಾರಿದೀಪ ವಾಗಬೇಕು ಕನಕದಾಸರ ಭಕ್ತಿಗೆ ಮೆಚ್ಚಿ ಉಡುಪಿಯಲ್ಲಿ ಶ್ರೀ ಕೃಷ್ಣ ದರ್ಶನ ಕೊಟ್ಟ ಎಂಬುದು ಅವರ ನಿರ್ಮಲ ಭಕ್ತಿಗೆ ಉದಾಹರಣೆಯಾಗಿದೆ ಎಂದು ಹೇಳಿದರು.
ಪ್ರಾಂಶುಪಾಲ ಎಂ ಸಿ ಮಂಜುನಾಥ್ ಮಾತನಾಡಿ ಕನಕದಾಸರ ಕೀರ್ತನೆಗಳು ಇಂದಿಗೂ ಸಂಗೀತಗಾರರಿಗೆ ಪ್ರಿಯವಾಗಿವೆ ಕನಕದಾಸರ ಕೀರ್ತನೆಗಳು ವಚನಗಳು ಅವರ ವಿಚಾರಗಳು ಇಂದಿಗೂ ಜನಪ್ರಿಯವಾಗಿವೆ ಎಂದು ಹೇಳಿದರು.
ರಾಜ್ಯಪ್ರಶಸ್ತಿ ವಿಜೇತ ಸುಗಮ ಸಂಗೀತ ಗಾಯಕಿ ಹಾಗೂ ಉಪನ್ಯಾಸಕಿ ಎಸ್ ಪಲ್ಲವಿ ಕನಕದಾಸರ ಕೀರ್ತನೆಗಳನ್ನು ಹಾಡಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಪುನೀತ್, ಟಿ ಉಮ್ಮೆಮುಸ್ಕಾನ್, ಕೆ ವಿ ಸೌಮ್ಯ, ಶ್ರೀ ಶ್ರೀ ಕೃಷ್ಣ ಚೈತನ್ಯ ಲಾವಣ್ಯ ಪಿಯುಸಿ ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಿದ್ದರು.