ಜಾತಿಯ ವಿಷಬೀಜಕ್ಕೆ ಕನಕದಾಸರ ಕೀರ್ತನೆಗಳೇ ಮದ್ದು : ಓಬಯ್ಯ

News Desk

ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಕನಕ ದಾಸರು ರಚಿಸಿದ ಕೀರ್ತನೆಗಳು ಸಮಾಜದಲ್ಲಿ ಎಲ್ಲಾ ವರ್ಗದ ಮೇಲೂ ಸಮಾನವಾದ ಪರಿಣಾಮವನ್ನು ಬೀರಿವೆ. ಸಮಾಜದಲ್ಲಿ ಆಳಾವಾಗಿ ಬೇರೂರಿದ್ದ ಜ್ಯಾತೀಯತೆಯ ವಿಷಬೀಜಗಳಿಗೆ ಕನಕದಾಸರ ಕೀರ್ತನೆಗಳು ದಾರಿದೀಪವಾಗಿವೆ. ಇಂತಹ ಮಹಾನ್ ವ್ಯಕ್ತಿ ಜಯಂತಿ ಆಚರಣೆ ಎಲ್ಲರಿಗೂ ಸ್ಪೂರ್ತಿ ಎಂದು ನಗರಂಗೆರೆ ಗ್ರಾಪಂ ಉಪಾಧ್ಯಕ್ಷ ಓಬಯ್ಯ ತಿಳಿಸಿದರು.

ಅವರು, ಭಾನುವಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಲಕ್ಷ್ಮಪುರ ಗ್ರಾಮದಲ್ಲಿ ಕುರುಬ ಸಮುದಾಯ ಹಮ್ಮಿಕೊಂಡಿದ್ದ ೫೩೮ನೇ ಕನಕ ಜಯಂತ್ರೋತ್ಸವವನ್ನು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನಾವೆಲ್ಲರೂ ಕನಕದಾಸರ ಅದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದರು.

- Advertisement - 

ಕಾರ್ಯಕ್ರಮದ ಅಂಗವಾಗಿ ಕನಕದಾಸರ ಭಾವಚಿತ್ರದ ಮೆರವಣಿಗೆಯನ್ನು ಮಂಗಳವಾದ್ಯಗಳೊಂದಿಗೆ ಗ್ರಾಮದ ಪ್ರಮುಖರಸ್ತೆಯಲ್ಲಿ ಮೆರವಣಿಗೆ ನಡೆಸಲಾಯಿತು.

ದಾರಿಯುದ್ದಕ್ಕೂ ನೂರಾರು ಜನರು ವೀಕ್ಷಿಸಿಸಂತಸ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಗ್ರಾಪಂ ಸದಸ್ಯೆ ನಾಗವೇಣಮ್ಮ, ಸಮಾಜದ ಮುಖಂಡರಾದ ರಾಮಣ್ಣ, ರಾಜಣ್ಣ, ಬೀರಪ್ಪ, ಜಯಣ್ಣ, ಕರಿಯಣ್ಣ, ರಂಗಸ್ವಾಮಿ, ಬಸವಲಿಂಗಪ್ಪ, ಮಹಂತೇಶ್, ಮಹಾಲಿಂಗಪ್ಪ, ಬಾಬು, ಸಾವಿತ್ರಮ್ಮ ಮುಂತಾದವರು ಉಪಸ್ಥಿತರಿದ್ದರು.

- Advertisement - 

 

 

 

 

 

Share This Article
error: Content is protected !!
";