ಕನಕಪುರದ ಬಂಡೆ ಕಳ್ಳರು !

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕನಕಪುರದ ಬಂಡೆ ಕಳ್ಳರು ! “ಕರ್ನಾಟಕ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕನಕಪುರ ತಾಲ್ಲೂಕಿನಾದ್ಯಂತ ಅಕ್ರಮ ಕಲ್ಲು ಗಣಿಗಾರಿಕೆಯಿಂದ ನೂರಾರು ಎಕರೆ ಅರಣ್ಯ ಪ್ರದೇಶವೇ ಮಾಯವಾಗಿದೆ ಎಂದು ಜೆಡಿಎಸ್ ದೂರಿದೆ. 

ಕನಕಪುರದ ಬ್ರದರ್ಸ್‌ಡಿಕೆ ಶಿವಕುಮಾರ್, ಡಿಕೆ ಸುರೇಶ್ ಹಿಂಬಾಲಕರ ಮೂಲಕ ಅರಣ್ಯ ವ್ಯಾಪ್ತಿಯಲ್ಲಿ ಅಕ್ರಮವಾಗಿ ಬೆಟ್ಟ, ಗುಡ್ಡಗಳನ್ನು ಕರಗಿಸಿ ಅವ್ಯಾಹತವಾಗಿ ಲೂಟಿ ಮಾಡುತ್ತಿದ್ದಾರೆ ಎಂದು ಜೆಡಿಎಸ್ ಆರೋಪಿಸಿದೆ.

- Advertisement - 

ಸರ್ಕಾರದ ಬೊಕ್ಕಸಕ್ಕೂ ನೂರಾರು ಕೋಟಿ ನಷ್ಟ ಉಂಟುಮಾಡಿರುವ, ಬಂಡೆ ಬ್ರದರ್ಸ್‌ಅವರ ಆಸ್ತಿಯನ್ನು ಮಾತ್ರ ವರ್ಷದಿಂದ ವರ್ಷಕ್ಕೆ ಬೆಟ್ಟದಷ್ಟು ಏರಿಸಿಕೊಳ್ಳುತ್ತಿದ್ದಾರೆ ಎಂದು ಜೆಡಿಎಸ್ ದೂರಿದೆ.

 

- Advertisement - 

Share This Article
error: Content is protected !!
";