ಚಂದ್ರವಳ್ಳಿ ನ್ಯೂಸ್, ದಾವಣಗೆರೆ:
ಕಂಡಿರಾ
ಹರುಷದ ವರುಷದ
ಚಂದಿರನ
ಇಡೀ ವರುಷದ
ಚರಿತೆಯ ಸಾರುವ
ಚಂದಿರನ
ಜೀವನದ
ಕರಿ ಮೋಡ
ಸರಿದು
ಬೆಳಕಿನ ಸೆರಗು
ಹಾಸುವ
ಚಂದಿರನ
ಕಂಡಿರಾ
ಕಾಣಿರಿ
ಅಂತರಂಗದ
ಕುರುಡು ಕಣ್ಣಿಗೂ
ಕಾಣುವ
ಚಂದಿರನ
ರಚನೆ: ಗುರಾನಿ
ಜಿ ಆರ್ ನಿಂಗೋಜಿ ರಾವ್
ದಾವಣಗೆರೆ ಮೋ 9036389240