ಎಂ.ಎಲ್.ಗಿರಿಧರ, ಮಲ್ಲಪ್ಪನಹಳ್ಳಿ.
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ನಾವು ಯಾವುದೇ ಹೊಲದಲ್ಲಿ ಬಿತ್ತನೆ ಮಾಡುವಾಗ ಮನೆ ಕಟ್ಟುವಾಗ ಹಲವಾರು ದೇವರ ನೆನೆದು ಕಾರ್ಯಗಳಿಗೆ ಮುಂದುವರಿಯುತ್ತೇವೆ ಹಾಗೆ ನಗರಸಭೆ ಪೌರಕಾರ್ಮಿಕರಲ್ಲಿ ಬೆಳಗಿನ ಜಾವ ನಗರದ ಸ್ವಚ್ಛತೆಗೆ ಮುಂದಾಗುತ್ತಾರೆ. ನಗರಸಭೆ ಆವರಣದಲ್ಲಿ ಎಲ್ಲ ಪೌರ ಕಾರ್ಮಿಕರು ಮಳೆ, ಗಾಳಿ, ಚಳಿ, ಸುಡು ಬಿಸಿಲು ಎನ್ನದೆ ನಿತ್ಯ ಸೇರಿ ದೇವರ ಭಕ್ತಿ ಗೀತೆಯೊಂದಿಗೆ ಕಾಯಕ ಆರಂಭಿಸುವ ಪೌರ ಕಾರ್ಮಿಕರಿಗೆ ಬೆನ್ನೆಲುಬಾಗಿ ನಿಲ್ಲುವ ಅಧಿಕಾರಿಗಳು ಬೇಕು. ಆ ಕೆಲಸವನ್ನು ಪೌರಕಾರ್ಮಿಕರು ಮತ್ತು ಸಾರ್ವಜನಿಕರ ಮಧ್ಯ ಕೊಂಡಿಯಾಗಿ ಹಿರಿಯೂರು ನಗರಸಭೆಯ ಪೌರಾಯುಕ್ತ ವಾಸಿಂ ಮಾಡಿಕೊಂಡು ಬರುತ್ತಿದ್ದಾರೆ.
ನಗರದ ಸ್ವಚ್ಛತೆಗೆ ಮುಂದಾಗುವ ಪೌರಕಾರ್ಮಿಕರಿಗೆ ನಗರದ ಜನತೆಯ ಪ್ರೀತಿ ವಾತ್ಸಲ್ಯ ಇರಬೇಕಾಗಿದೆ. ತಮ್ಮ ಆರೋಗ್ಯವನ್ನು ಲೆಕ್ಕಿಸದೆ ನಗರ ಮತ್ತು ನಗರದ ನಿವಾಸಿಗಳನ್ನು ಆರೋಗ್ಯವಂತರನ್ನಾಗಿ ಮಾಡಲು ಪೌರ ಕಾರ್ಮಿಕರು ಹಗಲು ರಾತ್ರಿ ಶ್ರಮವಹಿಸಿ ನಗರವನ್ನು ಸ್ವಚ್ಛವಾಗಿ ಇಟ್ಟು ಸಾರ್ವಜನಿಕರ ಆರೋಗ್ಯ ಕಾಪಾಡುವಂತ ಪೌರಕಾರ್ಮಿಕರು ದೇವರು ಸಮ.
ಇಂಥಹ ಪೌರ ಕಾರ್ಮಿಕರಿಗೆ ನಗರಸಭಾ ಅಧಿಕಾರಿಗಳು, ಸಾರ್ವಜನಿಕರು ಒಳಿತು ಮಾಡಬೇಕಾಗಿದೆ. ಅಲ್ಲದೆ ನಗರದ ಜನತೆಯ ಆಶೀರ್ವಾದ ಪೌರ ಕಾರ್ಮಿಕರ ಮೇಲಿರಬೇಕಿದೆ.
ನಗರದ ಸ್ವಚ್ಛತೆಗೆ ಪೌರಕಾರ್ಮಿಕರು ಹೊರಡುವ ಮುಂಚೆ ಎಷ್ಟೇ ಕಷ್ಟ ಸುಖಗಳಿದ್ದರೂ ಎಲ್ಲವನ್ನೂ ಮರೆತು ಸಾರ್ವಜನಿಕರ ಆರೋಗ್ಯ ರಕ್ಷಣೆ, ನಗರದ ಸ್ವಚ್ಛತೆ ಮಾಡುವ ಕಾಯಕವೇ ದೇವರ ಕಾಯಕವೆಂದು ನೆನೆದು ಸ್ವಚ್ಛತೆಗೆ ಮುಂದಾಗುತ್ತಾರೆ.
ನಗರದ ಜೀವ ನಾಡಿಗಳಾಗಿರುವ ಪೌರ ಕಾರ್ಮಿಕರು, ನಗರದ, ಸಮಾಜದ ಸ್ವಾಸ್ಥ್ಯ ಕಾಪಾಡುವ, ಸಮರ್ಪಕವಾಗಿ ಪರಿಸರ ಸ್ವಚ್ಛವಾಗಿಡುವ ಪೌರ ಕಾರ್ಮಿಕರು ಹಲವಾರು ಸಾಂಕ್ರಾಮಿಕ ಕಾಯಿಲೆಗಳು ದೂರವಾಗುವುದರ ಜತೆಗೆ ನಗರ ಸೌಂದರ್ಯ ಹೆಚ್ಚುತ್ತಿದ್ದಾರೆ.
ಸ್ವಂತ ಮನೆಯನ್ನು ಸ್ವಚ್ಛ ಮಾಡಲು ಕುಟುಂಬದ ಸದಸ್ಯರು ಒದ್ದಾಡುವ ಇಂಥ ದಿನಗಳಲ್ಲಿ ಇಡೀ ನಗರ ಸ್ವಚ್ಛತೆ ಮಾಡುವ ಪೌರ ಕಾರ್ಮಿಕರ ಕಾರ್ಯ ಸದಾ ಸ್ಮರಣೀಯರು. ಪೌರಕಾರ್ಮಿಕರು ಸ್ಥಳೀಯ ಸಂಸ್ಥೆಗಳ ಆಧಾರ ಸ್ತಂಭಗಳು. ಮತ್ತು ಪೌರ ಕಾರ್ಮಿಕರು ಭೂ ಸೇನಾ ಸೈನಿಕರಿದ್ದಂತೆ. ಮಳೆ, ಚಳಿ, ಗಾಳಿ, ಗಲೀಜು ಎಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ತಮ್ಮ ಆರೋಗ್ಯ ಬದಿಗೊತ್ತಿ ಸ್ವಚ್ಛತಾ ಕಾರ್ಯ ಮಾಡುತ್ತಾರೆ. ಸರ್ಕಾರಿ ಉನ್ನತಾಧಿಕಾರಿಗಳ ಮನೆ ಚಾಕರಿ, ಬೇರೆ ಇಲಾಖೆಗಳ ಕಚೇರಿ, ಶೌಚಾಲಯ ಸ್ವಚ್ಛತೆ ಸೇರಿದಂತೆ ಇತರ ಕೆಲಸಗಳಿಗೆ ಪೌರ ಕಾರ್ಮಿಕರನ್ನು ಜೀತದಾಳುಗಳಂತೆ ಬಳಸಿಕೊಳ್ಳುವುದು ಹಲವೆಡೆ ನಡೆಯುತ್ತಿದೆ. ಆದರೆ ಇದಕ್ಕೆಲ್ಲ ಅವಕಾಶ ನೀಡದ ಪೌರಾಯುಕ್ತ ವಾಸಿಂ ಪೌರ ಕಾರ್ಮಿಕರನ್ನು ದೇವರಂತೆ ಕಾಣುತ್ತಿದ್ದಾರೆ.
ಪರಿಶುದ್ಧವಾದ ಮನಸ್ಸಿನಿಂದ ಪೌರಕಾರ್ಮಿಕರು ನಗರದ ಸ್ವಚ್ಛತೆಗೆ ಮುಂದಾಗಿ ನಗರವನ್ನ ಸ್ವಚ್ಛ ಮಾಡಿ ಜನತೆಯ ಆರೋಗ್ಯ ಕಾಪಾಡುತ್ತಾರೆ. ಸಾರ್ವಜನಿಕರು ಎಲ್ಲಂದರೆ ಅಲ್ಲೇ ಕಸ ಹಾಕಬಾರದು ಒಂದು ನಿಗದಿ ಸ್ಥಳದಲ್ಲಿ ಕಸ ಹಾಕುವ ಪರಿಪಾಠ ಬೆಳೆಸಿಕೊಳ್ಳಬೇಕು. ಸಾರ್ವಜನಿಕರು ಪೌರ ಕಾರ್ಮಿಕರ ಸೇವೆ ಗೌರವಿಸಿ ನಗರವನ್ನು ಸ್ವಚ್ಛವಾಗಿಡಲು ಸಹಕರಿಸಿದರೆ ನಗರದ ಸೌಂದರ್ಯ ಸಾಧ್ಯವಾಗುತ್ತದೆ. ಬೇಕಾಬಿಟ್ಟಿ ಕಸ ಹಾಕುವುದರಿಂದ ರೋಗಗರು ಹರಡುತ್ತವೆ. ಅದನ್ನು ಸಾರ್ವಜನಿಕರು ಅರಿತುಕೊಂಡರೆ ಪೌರಕಾರ್ಮಿಕರಿಗೂ ಸಹಕರಿಸಿದಂತಾಗುತ್ತದೆ ಎಂದು ಪೌರಾಯುಕ್ತ ಎ.ವಾಸೀಂ ಅವರ ಕಳಕಳಿಯ ಕೋರಿಕೆ.
“ಇವತ್ತಿನ ದಿನಗಳಲ್ಲಿ ಆರೋಗ್ಯವಾಗಿ ಇರಬೇಕೆಂದರೆ ಸ್ವಚ್ಛತೆ ಬಹಳ ಮುಖ್ಯ. ಸ್ವಚ್ಛತೆ ಕಾಪಾಡದಿದ್ದರೆ ಮಾರಕ ರೋಗಗಳು ಹರಡುತ್ತವೆ. ನಗರವನ್ನು ಸ್ವಚ್ಛಗೊಳಿಸಿ ಯಾವುದೇ ರೋಗಗಳು ಜನರಿಗೆ ಹರಡದಂತೆ ಸ್ವಚ್ಛತೆ ಕಾಪಾಡುವ ಪೌರಕಾರ್ಮಿಕರನ್ನು ದೇವರಂತೆ ಕಾಣಿ”. ಎ.ವಾಸೀಂ, ಪೌರಾಯುಕ್ತ, ಹಿರಿಯೂರು ನಗರಸಭೆ.
“ಪೌರ ಕಾರ್ಮಿಕರಿಗೆ ಮೊದಲ ಆದ್ಯತೆ ನಗರ ಸ್ವಚ್ಛವಾಗಿ ಇದ್ದರೆ ನಗರದ ಜನತೆ ಆರೋಗ್ಯವಿರಲು ಸಾಧ್ಯ. ಪೌರಕಾರ್ಮಿಕರಿಗೆ ಸಾರ್ವಜನಿಕರು ಸಹ ಸಹಕರಿಸಬೇಕಾಗುತ್ತದೆ. ಎಲ್ಲಂದರಲ್ಲಿ ಕಸ ಹಾಕಬಾರದು ಕಸ ನಿಗದಿತ ಸ್ಥಳದಲ್ಲಿ ಹಾಕಿದರೆ ಪೌರಕಾರ್ಮಿಕರಿಗೆ ಸಹಕರಿಸಿದಂತಾಗುತ್ತದೆ ಹಾಗೂ ನೀವು ಓಡಾಡುವ ರಸ್ತೆಯ ಪಕ್ಕದಲ್ಲಿ ರಸ್ತೆಗೆ ಹಾಕುವುದನ್ನು ಬಿಟ್ಟು ನಗರ ಸಭೆಯ ಗಾಡಿಗೆ ಕಸ ಹಾಕಿ. ಹಸಿ ಕಸ ಮತ್ತು ಒಣ ಕಸ ಬೇರ್ಪಡಿಸಿ ಹಾಕಿ ಸ್ವಚ್ಛತೆಗೆ ಸಾರ್ವಜನಿಕರ ಸಹಕಾರ ಅತ್ಯಗತ್ಯ. ಹಾಗೆ ಪೌರ ಕಾರ್ಮಿಕರಿಗೆ ಜನರ ಸಹಕಾರವಿರಲಿ”.
ಎ ವಾಸೀಂ, ಪೌರಾಯುಕ್ತರು, ಹಿರಿಯೂರು ನಗರಸಭೆ.