ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನಗರದ ಹೆಚ್ ಎಂ ಎಸ್ ಲೇಔಟ್ ನ ಕನ್ನಡ ಕೌಸ್ತುಭ ಪ್ರಕಾಶನದ ವತಿಯಿಂದ ‘ಕನ್ನಡ ಕಲರವ‘ ಕಾರ್ಯಕ್ರಮ ತುಂಬಾ ಅರ್ಥಪೂರ್ಣವಾಗಿ ನೆರೆವೇರಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ ಬಿ.ತಿಪ್ಪಣ್ಣ ಮರಿಕುಂಟೆ ಅವರು ವಹಿಸಿ ಮಾತನಾಡಿ ಕನ್ನಡ ಭಾಷೆ ಅತ್ಯಂತ ಸುಂದರ ಭಾಷೆಯಾಗಿದ್ದು, ದಕ್ಷಿಣ ಭಾರತದ ಪ್ರಮುಖ ಭಾಷೆಗಳಲ್ಲಿ ಕನ್ನಡದ ಅಂಕಿಗಳು ಇರುವ ಏಕೈಕ ಭಾಷೆ ನಮ್ಮ ಕನ್ನಡ ಭಾಷೆಯೆಂಬುದು ನಾವೆಲ್ಲರೂ ಹೆಮ್ಮೆ ಪಡುವ ವಿಚಾರವಾಗಿದೆ.
ನಾವು ನೀವೆಲ್ಲರೂ ಕನ್ನಡವನ್ನ ಬದುಕಾಗಿಸಿಕೊಂಡು ಕನ್ನಡವನ್ನ ಜೀವಿಸಬೇಕು. ಸಾಹಿತ್ಯವನ್ನು ನಮ್ಮ ಪ್ರವೃತ್ತಿ ಆಗಿಸಿಕೊಂಡು ನಮ್ಮ ವೈಯಕ್ತಿಕ ಬದುಕಿಗೆ ಧಕ್ಕೆಯಾಗದಂತೆ ಎಚ್ಚರಿಕೆಯ ಹೆಜ್ಜೆ ಇಡಬೇಕು ಎಂದು ತಿಳಿಸಿದರು.
ಲೇಖಕಿ ಡಿ.ಶಬ್ರಿನಾ ಮಹಮದ್ ಅಲಿ ಪ್ರಾಸ್ತಾವಿಕವಾಗಿ ಮಾತನಾಡಿ, ನಮ್ಮ ನೆಲದ ಭಾಷೆ ಕನ್ನಡ ಗೌರವಿಸುವುದು,ಪ್ರೀತಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು.
ಕವಿಗೋಷ್ಠಿಯ ಆಶಯ ನುಡಿಗಳನ್ನಾಡಿದ ಮೋದೂರು ತೇಜ ಅವರು “ಕನ್ನಡ ನಾಡು ಬಹುತ್ವದಿಂದ ಕೂಡಿದೆ. ಇಲ್ಲಿ ನಾವೆಲ್ಲರೂ ಒಂದಾಗಿ ಸಹಬಾಳ್ವೆಯಿಂದ ಬದುಕಬೇಕು. ನಾವು ರಚಿಸುವ ಸಾಹಿತ್ಯ ಕೂಡ ಅದರ ತಳಹದಿಯಲ್ಲೆ ಇರಬೇಕು. ಅರ್ಥವಿಲ್ಲದ ನೂರು ಸಾಲುಗಳನ್ನು ಗೀಚುವುದಕ್ಕಿಂತ ಅರ್ಥ ನೀಡುವ ಒಂದು ಒಳ್ಳೆಯ ರೂಪಕವನ್ನು ರಚಿಸುವ ಕಡೆ ನಾವು ನ ಕೊಡಬೇಕು ಎಂದರು.
ಮುಖ್ಯ ಅತಿಥಿ ರಾಜುಕವಿ ಸೂಲೇನಹಳ್ಳಿ, “ಕನ್ನಡ ನಾಡು ನುಡಿಗಾಗಿ ನಮ್ಮಿಂದಾದ ಸೇವೆ ಮಾಡಬೇಕು. ೨೫೦೦ ವರ್ಷಗಳ ಇತಿಹಾಸ ಇರುವ ಕನ್ನಡ ಭಾಷೆ ಬಳಸುವ ಮೂಲಕ ಉಳಿಸಿಕೊಂಡು ಹೋಗಬೇಕು ಎಂದು ತಿಳಿಸಿದರು. ಅತಿಥಿ ಮನುಶ್ರೀ ಸಿದ್ದಾಪುರ ಮಾತನಾಡಿ ಕವಿಗಳಾದ ನಾವು ನಮ್ಮ ನಮ್ಮ ಕವಿತೆಗಳಿಂದ ಗುರುತಿಸಿಕೊಳ್ಳಬೇಕು, ಅದು ನಮ್ಮ ಕಾವ್ಯ ಕಟ್ಟುವಿಕೆಗೆ ಬಲ ನೀಡುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ತಿಪ್ಪೇರುದ್ರಪ್ಪ ಟಿ.ಚಳ್ಳಕೆರೆ, ಪಾಲಯ್ಯ ಜಿ ಕೋನಸಾಗರ, ನಾಗರಾಜ ಬೆಳಗಟ್ಟ, ಕೂಡ್ಲಹಳ್ಳಿ ಜಗದೀಶ್ ಹಿರಿಯೂರು, ಜಯಮಾರುತಿ ಟಿ.ಹೆಚ್, ಚಳ್ಳಕೆರೆ, ಹಾಲೇಶ್ ಕೆ.ಜಿ,ಚಳ್ಳಕೆರೆ, ಹರ್ಷವರ್ಧನ ಎಂ.ಟಿ, ಚಿಕ್ಕಗೊಂಡನಹಳ್ಳಿ, ಬಸವರಾಜ್ ಜಿ.ಶಿರೇಕೊಳ, ವಿಜಯಲಕ್ಷ್ಮಿ. ಜಿ.ಚಳ್ಳಕೆರೆ, ಜಯಪ್ರಕಾಶ್. ಹೆಚ್, ಚಿತ್ರದುರ್ಗ, ಚನ್ನಕೇಶವ.ಎ, ಚಳ್ಳಕೆರೆ, ಯತೀಶ ಎಂ.ಸಿದ್ದಾಪುರ, ಪ್ರಕಾಶ್ ಮದಕರಿ, ಚಳ್ಳಕೆರೆ ,ವಿಜಯಗುರು, ಚಳ್ಳಕೆರೆ,
ಕ್ಲಾಸಿಕ್ ಚಂದ್ರಶೇಖರ್, ಅರುಣ್ ಕುಮಾರ್,ಚಳ್ಳಕೆರೆ, ಪ್ರಜ್ವಲ ತೆಲಗಿ, ಚಳ್ಳಕೆರೆ ಕೆಂಚರಾಜ್.ಡಿ ಚಳ್ಳಕೆರೆ, ಯೋಗೇಶ್ವರಿ ಚಳ್ಳಕೆರೆ, ಬಿ.ಶಿವರಾಜ್ ನಾಯಕ ಚಿಕ್ಕಉಳ್ಳಾರ್ತಿ, ಮಮತ.ಆರ್ ಚಿತ್ರದುರ್ಗ, ಟಿ.ಶಿವಮೂರ್ತಿ ಕೋಡಿಹಳ್ಳಿ, ಮಂಜುನಾಥ ಕೆ.ಎಂ ಸೋಮಗುದ್ದು, ಸಬ್ರಿನ್ ತಾಜ್ ಚಳ್ಳಕೆರೆ, ಮೀನಾಕ್ಷಿ.ಪಿ, ಸೈಯದ್ ಮಹಬೂಬ್ ಮೊಳಕಾಲ್ಮುರು(ಮೊಸೈಮ), ಹರ್ಷಿತ ಎಂ,
ಪಗಡಲಬಂಡೆ ನಾಗೇಂದ್ರಪ್ಪ, ಶಿವಲೀಲಾ, ಬಸವರಾಜು, ರಂಗಸ್ವಾಮಿ, ಕವಿತಾ ಕುಶ, ಅಮರೇಶಪ್ಪ, ವಿಹಾನ್ ಅಲಿ, ತೇಜ್ಮಿನ್, ಪ್ರಭಾಸ್, ಜೀವನ್, ಸಮ್ಮು ಇವರೆಲ್ಲಾ ಭಾಗವಹಿಸಿ ಕನ್ನಡ ಕಲರವ ಕಾರ್ಯಕ್ರಮ ಯಶಸ್ವಿಗೊಳಿಸಿದರು. ಕಾರ್ಯಕ್ರಮದ ನಿರೂಪಣೆ ಮಹಮದ್ ಅಲಿ, ಸ್ವಾಗತ ಇನಗಷಾ ಎ..ಎಸ್, ವಂದನಾರ್ಪಣೆ ಶಿಫಾ ಎಂ.ಎಸ್ ಮಾಡಿದರು.

