ಕನ್ನಡವೇ ಸತ್ಯ. ಕನ್ನಡವೇ ನಿತ್ಯ

News Desk

 ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕನ್ನಡ ರಾಜ್ಯೋತ್ಸವದ ಶುಭಾಶಯಗಳು.  ನವೆಂಬರ್ ತಿಂಗಳೆಂದರೆ ಕನ್ನಡಿಗರಿಗೆ ಬಹಳಷ್ಟು ವಿಶೇಷವಾದ ತಿಂಗಳು. ಈ ವರ್ಷ ನಾವೆಲ್ಲಾ ೬೯ ನೇ ಕನ್ನಡ ರಾಜ್ಯೋತ್ಸವ ಆಚರಿಸಲಿದ್ದೇವೆ.

ಕನ್ನಡ ಭಾಷೆಯ ನೆಲ ಅಲ್ಲಲ್ಲಿ ಚದುರಿದ್ದು ಅವುಗಳನ್ನು ಒಂದು ಗೂಡಿಸೀ ಆ ಪ್ರಾಂತ್ಯವನ್ನು  ಕರ್ನಾಟಕ ಎಂದು ನಾಮಕರಣ ಮಾಡಿದ ದಿನ ಈ ದಿನವಾಗಿದೆ. ಇಂದಿನ ಕರ್ನಾಟಕವನ್ನು ಹಿಂದೆ ಮೈಸೂರು ಪ್ರಾಂತ್ಯವೆಂದು ಕರೆಯಲಾಗಿತ್ತು.

  ಕರ್ನಾಟಕದ ಹುಟ್ಟಿಗೆ ಕಾರಣರಾದ ಕನ್ನಡದ ಕುಲ ಪುರೋಹಿತ ಎಂದೇ ಹೆಸರಾದ ಆಲೂರು ಶ್ರೀ ವೆಂಕಟರಾವ್ ಅವರು ಮೊದಲಿಗೆ ಕರ್ನಾಟಕ ಏಕೀಕರಣ ಚಳುವಳಿಯನ್ನು ಸ್ವಾತಂತ್ರ್ಯ ಪೂರ್ವದ ಸಮಯದಲ್ಲಿ ೧೯೦೫ ರಲ್ಲಿ ಪ್ರಾರಂಭಿಸಿದರು.

ನಂತರ ಭಾರತಕ್ಕೆ ಸ್ವಾತಂತ್ರ್ಯ ದೊರೆತು ಗಣರಾಜ್ಯವಾದ್ದ ನಂತರ ಭಾಷೆಗಳ ಆಧಾರದ ಮೇಲೆ ೧೯೫೬ ನವೆಂಬರ್ ೧ ರಂದು ಕರ್ನಾಟಕ ರಾಜ್ಯ ಎಂಬ ನಾಮಾಂಕಿತದಲ್ಲೀ ರಾಜ್ಯವು ವಿಂಗಡಣೆಗೊಂಡಿದೆ.  ಕನ್ನಡದ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಕನ್ನಡಿಗರಾದ ನಾವುಗಳು ಭಾಷೆಯ ಗೌರವವನ್ನು ಹೆಚ್ಚಿಸೋಣ ಜೈ ಕನ್ನಡಾಂಬೆ.
ಲೇಖನ-ರಘು ಗೌಡ ೯೯೧೬೧೦೧೨೬೫

- Advertisement -  - Advertisement - 
Share This Article
error: Content is protected !!
";