ರಾಜ್ಯದ ಅಭಿವೃದ್ಧಿಗೆ ಮಲತಾಯಿ ದೋರಣೆ ತಾಳಿರುವ ಕೇಂದ್ರ ಸರ್ಕಾರದ ವಿರುದ್ಧ ಕನ್ನಡ ಪಕ್ಷ ಪ್ರತಿಭಟನೆ

News Desk

 ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಕರ್ನಾಟಕದಲ್ಲಿ ಕನ್ನಡ ಭಾಷೆಯನ್ನು ಕಡೆಗಣಿಸಿ ಹಿಂದಿ ಭಾಷೆ ಏರುತ್ತಿರುವ ಮತ್ತು ನನೆಗುದಿಗೆ ಬಿದ್ದಿರುವ ರಾಜ್ಯದ ನೀರಾವರಿ ಯೋಜನೆಗಳ ಅನುಷ್ಠಾನದಲ್ಲಿ ವಿಳಂಬ ಧೋರಣೆ
, ಹಾಗೂ ರಾಜ್ಯದ ತೆರಿಗೆಯಲ್ಲಿ ಕರ್ನಾಟಕಕ್ಕೆ ಬರಬೇಕಾದ ವಿವಿಧ ಹಣಕಾಸು ಯೋಜನೆಗಳಲ್ಲಿ ವಂಚನೆ ಮಾಡುತ್ತಿರುವ ಕೇಂದ್ರ ಸರ್ಕಾರದ ಮಲತಾಯಿ ಧೋರಣೆ ಖಂಡಿಸಿ ಪ್ರತಿಭಟನೆ ನೆಡೆಸಲಾಯಿತು

    ನಗರದ ಭಗತ್ ಸಿಂಗ್ ಮೈದಾನದ ಬಳಿ ಇರುವ ಅಂಚೆ ಕಚೇರಿಯ ಆವರಣದಲ್ಲಿ ಕನ್ನಡ ಪಕ್ಷದ ವತಿಯಿಂದ ಕೇಂದ್ರ ಸರಕಾರದ ಧೋರಣೆ ವಿರುದ್ಧ ಆಯೋಜನೆ ಮಾಡಲಾದ ಪ್ರತಿಭಟನೆಯಲ್ಲಿ

ಕನ್ನಡ ಪಕ್ಷದ ಮುಖಂಡರಾದ ಸಂಜೀವ್ ನಾಯ್ಕ್  ಮಾತನಾಡಿ, .ಕೇಂದ್ರ ಸರಕಾರ  ಕಳಸಾ ಬಂಡೂರಿ ನಾಲಾ ಯೋಜನೆ ಜಾರಿಗೆ ಒಪ್ಪಿಗೆ ನೀಡಬೇಕು. ಕುಡಿಯುವ ನೀರಿನ ವಿಚಾರದಲ್ಲಿಯೂ ಮಹಾರಾಷ್ಟ್ರ ಮತ್ತು ಗೋವಾ ಸರ್ಕಾರಗಳು ರಾಜಕೀಯ ಮಾಡುತ್ತಿವೆ. ಇದನ್ನು ಕನ್ನಡಿಗರು ಪ್ರತಿಭಟಿಸಬೇಕುಕನ್ನಡಿಗರು ಇಂದು ನಮ್ಮ ಹಕ್ಕಿಗಾಗಿ ಹೋರಾಟ ಮಾಡುವ ಅನಿವಾರ್ಯತೆ ಎದುರಾಗಿದೆ. ಕೇಂದ್ರ ಸರಕಾರ ಮಾಡುತ್ತಿರುವ ಅನ್ಯಾಯದ ವಿರುದ್ಧ ನಮ್ಮ ಸಂಸದರು ಧ್ವನಿ ಎತ್ತಬೇಕು. ಸರಕಾರ ಕನ್ನಡಿಗರ ಭಾವನೆಗಳನ್ನು ಅರ್ಥ ಮಾಡಿಕೊಂಡು ಸ್ಪಂದಿಸದಿದ್ದರೆ ಮುಂದೆ ಉಗ್ರ ಹೋರಾಟ ಮಾಡುತ್ತೇವೆಎಂದು ಎಚ್ಚರಿಕೆ ನೀಡಿದರು.

 ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಕ್ಕೆ  ಕೇಂದ್ರ ಸರಕಾರ ಮಲತಾಯಿ ಧೋರಣೆಯನ್ನು ಅನುಸರಿಸುತ್ತಾ ಬಂದಿದೆ. ಇದರಿಂದ  ರಾಜ್ಯದ ಭಾಷೆ ರಾಜ್ಯದ ಅಭಿವೃದ್ಧಿಗೆ ಹಿನ್ನಡೆಯುಂಟಾಗಿತ್ತಿದೆ. ಕೇಂದ್ರ ಸರಕಾರಿದಿಂದ  ಕನ್ನಡ ಭಾಷೆಯನ್ನು ನಿಷ್ಕಿçÃಯಗೊಳಿಸುವ ಹುನ್ನಾರ ನಡೆಯುತ್ತಿದೆ. ಕನ್ನಡಿಗರೇ ಸ್ಥಾಪಿಸಿ ಬೆಳೆಸಿದ ಬ್ಯಾಂಕ್ಗಳನ್ನು  ವಿಲೀನಗೊಳಿಸಿ  ಕೇಂದ್ರ ಸರಕಾರದಿಂದ ರಾಜ್ಯಕ್ಕೆ ಅನ್ಯಾಯ ಎಸೆಯಲಾಗಿದೆ. ಒಂದೇ ಭಾಷೆ ಒಂದೇ ದೇಶ ಎಂಬ ಕಲ್ಪನೆ ಅಡಿಯಲ್ಲಿ  ಕೇಂದ್ರ ಸರಕಾರ  ಪ್ರಾದೇಶಿಕ ಭಾಷೆಗಳನ್ನು  ಕಡೆಗಣಿಸುತ್ತಾ ಬಂದಿದೆ ಈ ಬಗ್ಗೆ ನಾಗರಿಕರು ಎಚ್ಚೆತ್ತುಕೊಳ್ಳದಿರೇ ಮುಂದಿನ ದಿನಗಳಲ್ಲಿ ಕನ್ನಡಿಗರಿಗೆ ಅಪಾಯ ಕಟ್ಟಿಟ್ಟ ಬುತ್ತಿ ಎಂದರು.

 ಈ ವೇಳೆ ಪ್ರತಿಭಟನೆಯಲ್ಲಿ  ಕನ್ನಡ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಡಿ.ಪಿ ಆಂಜನೇಯ ಜಿಲ್ಲಾಧ್ಯಕ್ಷ ಮುನಿ ಪಾಪಯ್ಯ, ತಾ.ಗೌ. ಅಧ್ಯಕ್ಷ ರಂಗನಾಥ್ ತಾ. ಅಧ್ಯಕ್ಷ. ಡಿ.ವೆಂಕಟೇಶ್, ತಾ.ಪ್ರಧಾನ ಕಾರ್ಯದರ್ಶಿ ಬೋರೇಗೌಡ, ಕರವೇ ಪ್ರವೀಣ್ ಶೆಟ್ಟಿ ಬಳಗದ ವೆಂಕಟೇಶ್, ಕನ್ನಡ ಸಂಘಟನೆಗಳ ಒಕ್ಕೂಟದ ಜಿಲ್ಲಾಧ್ಯಕ್ಷ ನಂಜಪ್ಪ. ಛಲವಾದಿ ಮಹಾಸಭಾದ ಗುರುರಾಜು ಪ್ರಜಾ ವಿಮೋಚನಾ ಚಳುವಳಿಯ ಗುಳ್ಯ ಹನುಮಣ್ಣ, ಶಿವರಾಜಕುಮಾರ್ ಸೇನಾ ಸಮಿತಿ ಅಧ್ಯಕ್ಷ ರಮೇಶ ತಾಲ್ಲೂಕಿನ ಕನ್ನಡ ರೈತ ದಲಿತ ಪರ ಸಂಘಗಳು ಹಾಜರಿದ್ದರು.

- Advertisement -  - Advertisement -  - Advertisement - 
Share This Article
error: Content is protected !!
";