ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಕೋರ್ಟ್ ರಸ್ತೆಯ ರೋಜಿಪುರ ಬಡಾವಣೆ ಕ್ಷೇಮಾಭಿವೃದ್ಧಿ ಸಂಘದವತಿಯಿಂದ ಕೋರ್ಟ್ ಮುಂಭಾಗದಲ್ಲಿ. ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಯಿತು.
ಕನ್ನಡ ಧ್ವಜಾರೋಹಣವನ್ನ ವಾರ್ಡಿನ ಹಿರಿಯರಾದ ಸುಲೋಚನಮ್ಮ ವೆಂಕಟರೆಡ್ಡಿ ಹಾಗೂ ದಯಾನಂದ ಅವರು ನೆರವೇರಿಸಿದರು.
ಆನಂತರ ಸುಲೋಚನಮ್ಮ ವೆಂಕಟರೆಡ್ಡಿ ಮಾತನಾಡಿ ಈಗಾಗಲೆ ದೊಡ್ಡಬಳ್ಳಾಪುರ ನಗರ ಹಾಗು ಗ್ರಾಮಾಂತರ ಭಾಗದಲ್ಲಿ. ಕಾರ್ಖಾನೆಗಳ ಕೆಲಸಕ್ಕೆ ಎಂದು ಬಂದು ಅನ್ಯ ಭಾಷಿಗರು ಕನ್ನಡ ಭಾಷೆಯನ್ನು ಬಿಟ್ಟು ಅವರ ಭಾಷೆ ಗೌರವ ತೋರುತ್ತಿರುವುದು ಕಂಡು ಬಂದಿದ್ದು ಅಂತಹವರಿಗೆ
ಕನ್ನಡ ನಾಡು ನುಡಿ ಬಾಷೆ ಸಂಸ್ಕೃತಿಯ ಬಗ್ಗೆ ತಿಳಿಸಿ ಕನ್ನಡ ಭಾಷೆ ಉಳಿವಿಗೆ ಯುವಕರು ಸಹಕಾರ ಬೇಕಾಗಿದೆ ಹಾಗು ಬಡಾವಣೆಯಲ್ಲಿನ ಕಲ್ಯಾಣಿ ಈಗಾಗಲೇ ಭಾಗಶಃ ಜೀರ್ಣೋದ್ಧಾರ ಕಾರ್ಯಮಾಡಲಾಗಿದೆ ಈ ಭಾಗದಲ್ಲಿ ಉದ್ಯಾನ ವನ ಹಾಗೂ ಗ್ರಂಥಾಲಯ ಪ್ರಾರಂಭಿಸಲು ಎಲ್ಲರೂ ಸಹಕಾರ ನೀಡಬೇಕು ಎಂದರು.
ನಂತರ ಬಡಾವಣೆ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಫನ್ನೂರ್ ಪ್ರಾಸ್ತಾವಿಕ ನುಡಿ ನುಡಿದರು. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದ ತಿಮ್ಮಯ್ಯ ಅವರು ಕನ್ನಡ ಭಾಷೆಯ ಪರಂಪರೆಯ ಬಗ್ಗೆ ಹಾಗೂ ವಿಶ್ವದಾದ್ಯಂತ ಕನ್ನಡ ಭಾಷೆಗೆ ಇರುವ ಸ್ಥಾನ ಮಾನದ ಬಗ್ಗೆ ಮಾತನಾಡಿದರು.
ಕಾರ್ಯಕ್ರಮದಲ್ಲಿ ಸಂಘದ ಪದಾಧಿಕಾರಿಗಳಾದ ಗೋಪಾಲ್ ನಾಯ್ಕ್, ಬಸವರಾಜು, ಗುಬ್ಬಿ ಪ್ರಸನ್ನ, ಮಂಜುನಾಥ್, ಭಾಸ್ಕರ್ ಸೇರಿದಂತೆ ವಾರ್ಡಿನ ಕನ್ನಡ ಅಭಿಮಾನಿಗಳು ಭಾಗವಹಿಸಿದ್ದರು.