ದೊಡ್ಡ ತುಮಕೂರಿನಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ದೊಡ್ಡಬಳ್ಳಾಪುರ ತಾಲ್ಲಕು
,ದೊಡ್ಡ ತುಮಕೂರು ಗ್ರಾಮದಲ್ಲಿ.69 ನೇ ಕನ್ನಡ ರಾಜ್ಯೋತ್ಸವ ಹಾಗು ಉಚಿತ ಅರೋಗ್ಯ ತಪಾಸಣೆ  ಶಿಬಿರ ಹಾಗು ವ್ಯಾಸಂಗ ಮಾಡುತ್ತಿರುವ ಶಾಲಾ ಹಾಗೂ ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ ಆಯೋಜಿಸುವ ಮೂಲಕ ಕನ್ನಡ ರಾಜ್ಯೋತ್ಸವ ಆಚರಣೆಯನ್ನು ಮಾಡಲಾಯಿತು. 

 ಗ್ರಾಮದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ ಏರ್ಪಡಿಸುವ ಮೂಲಕ ಉತ್ತಮ ಆರೋಗ್ಯ ನಿರ್ವಹಣೆ ಕುರಿತು  ಅರಿವು ಮೂಡಿಸಲಾಯಿತು. 

 ಮುಖ್ಯ ಅತಿಥಿಯಾಗಿ ಬಾಗವಹಿಸಿದ್ದ ಖ್ಯಾತ ವೈದ್ಯ ಡಾ.ಅಂಜಿನಪ್ಪ ಮಾತನಾಡಿ ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ.ಭಾಷೆಯ ಜೀವಂತಿಕೆ ಕಾಪಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಕನ್ನಡ ಭಾಷೆಯನ್ನು ಹೆಚ್ಚಾಗಿ ಬಳಸುವ ಮೂಲಕ ಭಾಷೆ ವ್ಯಾಪ್ತಿಯನ್ನು ಮತ್ತಷ್ಟು ಹೆಚ್ಚಿಸ ಬೇಕಿದೆ.ವ್ಯವಹಾರಿಕ ಅನುಕೂಲಕ್ಕಾಗಿ ಪರಭಾಷೆಯ ಅವಶ್ಯಕತೆ ಇದೆ ಆದರೆ  ಸಾಧ್ಯವಾದಷ್ಟು ಹೆಚ್ಚಿನ ರೀತಿಯಲ್ಲಿ ಕನ್ನಡ ಭಾಷೆಯನ್ನು ಬಳಸುವ ಮೂಲಕ ಯುವ ಪೀಳಿಗೆಗೆ ಕನ್ನಡ ಭಾಷೆ ಕುರಿತು ವಿಶೇಷ ಅಭಿಮಾನ ಮೂಡಿಸಬೇಕಿದೆ ಎಂದರು .

 ಸ್ಥಳೀಯ ಮುಖಂಡ ಟಿ.ಜಿ.ಮಂಜುನಾಥ್ ಮಾತನಾಡಿ  ಕರುನಾಡಲ್ಲಿ ಹುಟ್ಟಿರುವುದು ನಮ್ಮೆಲ್ಲರ ಪುಣ್ಯ. ಕನ್ನಡ ಭಾಷೆ ಅನ್ಯ ಪರಿಭಾಷೆ ಗಳಿಗಿಂತ ಸುಂದರ ಹಾಗೂ ವಿಶೇಷತೆಗಳಿಂದ ಕೂಡಿದೆ‌‌. ಪ್ರಸ್ತುತ ದಿನಮಾನಗಳಲ್ಲಿ  ಕನ್ನಡ ಭಾಷೆ ಮಾತನಾಡುವವರ ಸಂಖ್ಯೆ ಕುಗ್ಗುತ್ತಿದೆ.ಭಾಷೆಯನ್ನು ಉಳಿಸುವ ಅವಶ್ಯಕತೆ ಇಲ್ಲ, ನಾವೆಲ್ಲರೂ ಭಾಷೆಯನ್ನು ಉತ್ತಮ ರೀತಿಯಲ್ಲಿ ಬಳಸಿದರೆ ಭಾಷೆ ತಾನಾಗಿಯೇ ಬೆಳೆಯುತ್ತದೆ , ಕನ್ನಡ ಭಾಷೆಯ ಬಳಕೆ ಹೆಚ್ಚಾಗ ಬೇಕಿದೆ, ಕನ್ನಡ ಭಾಷೆಯನ್ನು ಹೆಚ್ಚು ಹೆಚ್ಚಾಗಿ ಬಳಸುವ ಮೂಲಕ ಹಾಗೂ ಇತರರಿಗೆ ಕಲಿಸುವ ಮೂಲಕ  ಭಾಷೆಯ ಬೆಳವಣಿಗೆಗೆ ನಮ್ಮ ಸಣ್ಣ ಅಳಿಲು ಸೇವೆಯನ್ನು ನೀಡೋಣ ಎಂದರು.

 ಕಾರ್ಯಕ್ರಮದಲ್ಲಿ ಡಾ ನವೀನ್,ಡಾ ಆನಂದ್,ಟಿ ಜಿ ಮಂಜುನಾಥ್ (LIC), V ವೆಂಕಟೇಶ್,ಚೈತ್ರ ಭಾಸ್ಕರ್ಟಿ ಎಂ ಪ್ರಭಾಕರ್, ಟಿ ಏನ್ ನಾಗರಾಜು ( ಬಾಬು), ಟಿ ಹೆಚ್ ಶಿವಕುಮಾರ್ಚೈತ್ರ ಶ್ರೀಧರ್, ಮಂಜುನಾಥ್ (SST), ಮಹಾ ಲಕ್ಷ್ಮಮ್ಮ, ರಾಮಕೃಷ್ಣಪ್ಪ, ಗ್ರಾ ಪಂ ಸದಸ್ಯ ಪಿ ಲೋಕೇಶ್, ಮುನಿರಾಜು,ರಂಗಸ್ವಾಮಿಯ್ಯ, ಚನ್ನೇಗೌಡ,ಸ್ಥಳೀಯ ಮುಖಂಡರಾದ C ಚಿಕ್ಕಣ್ಣಪ್ಪ (ಮಾಸ್ಟರ್), ಮುನಿ ರಾಮಪ್ಪ (ಮಾಸ್ಟರ್), ಸಿ.ರಾಮಕೃಷ್ಣಪ್ಪ, ದೀಪು,ಸುಬ್ಬರಾಜು,ಭಾಸ್ಕರ್, ಪ್ರಕಾಶ್, ಅಂಜಿನಮೂರ್ತಿ,ಅಜಯ್, ವಸಂತ್,ನವೀನ್,ರಘು,ಮೋಹನ್,ಲಕ್ಷ್ಮಣ್  ಸೇರಿದಂತೆ ಹಲವು ಮುಖಂಡರು ಹಾಜರಿದ್ದರು.

 

 

- Advertisement -  - Advertisement - 
Share This Article
error: Content is protected !!
";