ಕನ್ನಡಿಗರ ಅನ್ನ ಕಸಿಯುತ್ತಿರುವ ನಾರ್ತಿಗಳೇ ರಾಜ್ಯ ಬಿಟ್ಟು ತೊಲಗಿ-ಪುರುಷೋತ್ತಮ ಗೌಡ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ಕರ್ನಾಟಕದಲ್ಲಿ ಉತ್ತರ ಭಾರತೀಯರ ದಬ್ಬಾಳಿಕೆ ಹೆಚ್ಚಾಗಿದೆ
, ಉತ್ತರ ಭಾರತೀಯರ ವಲಸೆ ಪರಿಣಾಯ ಕನ್ನಡಿಗರ ಅನ್ನವನ್ನ ಕಿತ್ತುಕೊಳ್ಳುತ್ತಿದ್ದಾರೆ. ಕನ್ನಡಿಗರಿಗೆ ಉದ್ಯೋಗದಲ್ಲಿ ಸಿಂಹಪಾಲು ಸಿಗಬೇಕೆಂದು ಆಗ್ರಹಿಸುತ್ತಿರುವ ಕರವೇ ನಾರಾಯಣಗೌಡ ಬಣ ಫೆಬ್ರವರಿ 1 ರಂದು ಫ್ರೀಡಂ ಪಾರ್ಕ್ ಮಹಾ ಸಂಘರ್ಷ ಯಾತ್ರೆಗೆ ಚಾಲನೆ ನೀಡಲಿದೆ ಎಂದು ಬೆಂಗಳೂರು ಗ್ರಾಮಾಂತರ ಕರವೇ ಜಿಲ್ಲಾಧ್ಯಕ್ಷರಾದ ಪುರುಷೋತ್ತಮ್ ಗೌಡ ತಿಳಿಸಿದರು.

ಪ್ರವಾಸಿ ಮಂದಿರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಕರ್ನಾಟದ ರಾಜ್ಯದಲ್ಲಿ ಮಾರಾಟವಾಗುವ ಉತ್ಪನ್ನಗಳ ಎಜೆನ್ಸಿಗಳು ಕನ್ನಡಿಗರಿಗೆ ಸಿಗಬೇಕು, ಎಲ್ಲ ಉತ್ಪನ್ನಗಳ ಮೇಲೆ ಶೇಕಡಾ 60 ರಷ್ಟು ಕನ್ನಡ ಬರಹ ಇರಬೇಕು, ರಾಜ್ಯದಲ್ಲಿರುವ ಹಣಕಾಸು ಸಂಸ್ಥೆಗಳಲ್ಲಿ ಸಿ ಮತ್ತು ಡಿ ದರ್ಜೆ ಹುದ್ದೆಗಳು ಕನ್ನಡಿಗರಿಗೆ ಮಾತ್ರ ಸಿಗಬೇಕು ಎಂಬ ಮೂರು ಹಕ್ಕೊತ್ತಾಯಗಳನ್ನ ಸರ್ಕಾರದ ಮುಂದಿಡುತ್ತಿದ್ದೇವೇ, ನಾರಾಯಣಗೌಡರವರ ನೇತೃತ್ವದಲ್ಲಿ ಫೆಬ್ರವರಿ 1 ರಂದು ಫ್ರೀಡಂ ಪಾರ್ಕ್ ಮಹಾ ಸಂಘರ್ಷ ಯಾತ್ರೆ ಮಾಡುವ ಮೂಲಕ ಸರ್ಕಾರಕ್ಕೆ ಎಚ್ಚರಿಕೆಯನ್ನ ನೀಡಲಾಗುವುದು ಎಂದರು.

ತಾಲೂಕು ಅಧ್ಯಕ್ಷ ಮಂಜುನಾಥ್ ನಾಯ್ಕ್ ಮಾತನಾಡಿ, ರಾಜ್ಯದಲ್ಲಿ ಉತ್ತರ ಭಾರತೀಯರ ವಲಸೆ ಹೆಚ್ಚಾಗಿದೆ, ರಾಜ್ಯದಲ್ಲಿನ ಉದ್ಯೋಗಗಳು ಪರಭಾಷಿಕರ ಪಾಲಾಗುತ್ತಿವೆ, ಬ್ಯಾಂಕ್ ಗಳಲ್ಲಿ ಕನ್ನಡ ಮಾತನಾಡುವ ಸಿಬ್ಬಂದಿಗಳೇ ಇಲ್ಲದಂತ ಪರಿಸ್ಥಿತಿ ಇದೆ, ಇದರಿಂದ ಹಳ್ಳಿಯ ರೈತಾಪಿ ಜನರಿಗೆ ತೊಂದರೆಯಾಗುತ್ತಿದೆ,

ಚಿನ್ನಾಭರಣ ಅಂಗಡಿಗಳಿಂದ ಹಿಡಿದು ಕ್ಷೌರದ ಅಂಗಡಿಗಳು ಉತ್ತರ ಭಾರತೀಯರ ಪಾಲಾಗುತ್ತಿವೆ. ಜಿಲ್ಲಾ ಕೇಂದ್ರಗಳಿಂದ ಹೋಬಳಿ ಕೇಂದ್ರಗಳಿಗೆ ಲಗ್ಗೆ ಇಡುತ್ತಿದ್ದು ಕನ್ನಡಿಗರ ಅನ್ನ ಕಸಿಯುತ್ತಿದ್ದಾರೆ. ನಾರ್ತಿ ದುರಹಂಕಾರಿಗಳೇ ರಾಜ್ಯ ಬಿಟ್ಟು ತೊಲಗಿ ಎಂಬ ಘೋಷಣೆಯೊಂದಿಗೆ ಫೆಬ್ರವರಿ 1 ರಂದು ಮಹಾ ಸಂಘರ್ಷ ಯಾತ್ರೆ ಮಾಡಲಾಗುತ್ತಿದೆ ಎಂದರು.

ಈ ವೇಳೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಪಾಧ್ಯಕ್ಷ ಶ್ರೀನಿವಾಸ್ತಾಲೂಕು ಕಾರ್ಮಿಕ ಘಟಕದ ಅಧ್ಯಕ್ಷ ಶ್ರೀನಾಥ್, ನಗರ ಅಧ್ಯಕ್ಷ ಮುನಿರಾಜು ಸೇರಿದಂತೆ ಬುಲೆಟ್ ಬಾಬು(ಪೋಟೋಗ್ರಾಫಿ),ಮಧು, ಮನು ಇದ್ದರು.

 

- Advertisement -  - Advertisement - 
Share This Article
error: Content is protected !!
";