ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ತಾಲ್ಲೂಕಿನ ಕೊನಘಟ್ಟ ಗ್ರಾಮದಲ್ಲಿ ಸಂಬ್ರಮದ 34 ನೇ ಕರಗ ಮಹೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು. ತಳಿರು ತೋರಣ ದೀಪಾಲಂಕಾರಗಳಿಂದ ಇಡಿ ಗ್ರಾಮವೇ ಸುಂದರವಾಗಿ ಕಂಗೊಳಿಸುತ್ತಿತ್ತು. ಇಡೀ ಗ್ರಾಮವೇ ತನ್ನ ದೀಪಾಲಂಕಾರಗಳಿಂದ ಕಂಗೊಳಿಸುತ್ತಾ ಎಲ್ಲರನ್ನೂ ತನ್ನಡೆಗೆ ಆಹ್ವಾನಿಸುತ್ತಿತ್ತು.
ಕರಗ ಉತ್ಸವವು ತಿಗಳ ಸಮುದಾಯವು ಆಚರಿಸುವ ಭವ್ಯ ಹಬ್ಬವಾಗಿದೆ. ಚೈತ್ರ ಮಾಸದ ಹುಣ್ಣಿಮೆಯಂದು ದ್ರೌಪದಿ ದೇವಿಯನ್ನು ಆರಾಧಿಸಲಾಗುತ್ತದೆ. ಹೂವಿನಿಂದ ಅಲಂಕೃತವಾದ ಕರಗವನ್ನು ಅರ್ಚಕರು ತಲೆಯ ಮೇಲೆ ಹೊತ್ತು ಧರ್ಮರಾಯ ಸ್ವಾಮಿ ದೇವಸ್ಥಾನದಿಂದ ಮೆರವಣಿಗೆ ಹೊರಡುತ್ತಾರೆ.
ಕೊನಘಟ್ಟ ಗ್ರಾಮವು ದೊಡ್ಡಬಳ್ಳಾಪುರದಲ್ಲೇ ಅತಿ ಹೆಚ್ಚು ದೇವಾಲಯಗಳಿರುವ ಗ್ರಾಮವಾಗಿದೆ. ದೊಡ್ಡಬಳ್ಳಾಪುರದ ಶಕ್ತಿ ದೇವತೆಗಳ ತವರೂರು ಎಂದು ಹೆಸರು ಪಡೆದಿದೆ. ಕರಗ ನಡೆಯುವ ದಿನದಂದು ಗ್ರಾಮದ ಎಲ್ಲಾ ದೇವರುಗಳನ್ನ ಹೂವಿನ ಪಲ್ಲಕ್ಕಿಯಲ್ಲಿ ಮೆರವಣಿಗೆ ಮಾಡಲಾಗುತ್ತದೆ. ಕೊನಘಟ್ಟ ಗ್ರಾಮದ ಎಲ್ಲಾ ಜಾತಿಯ ಪ್ರತಿಯೊಬ್ಬರೂ ಜಾತಿ ಭೇದ ಮರೆತು ಪ್ರತಿಯೊಬ್ಬರೂ ಸಹೋದರ ಭಾವನೆಯಿಂದ ಅಣ್ಣ ತಮ್ಮಂದಿರಂತೇ ಬೆರೆತು ಶ್ರೀಧರ್ಮರಾಯಸ್ವಾಮಿ ದ್ರೌಪದಮ್ಮನವರ ಕರಗ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಿದ್ದಾರೆ.
ಕೊನಘಟ್ಟದ ಕರಗಮಹೋತ್ಸವದಲ್ಲಿ ಶಿವನಾಪುರ ಮಠದ ಪರಮ ಜಗದ್ಗುರು ಶ್ರೀ ಶ್ರೀ ಶ್ರೀ ಪ್ರಣವಾನಂದಪುರಿ ಮಹಾಸ್ವಾಮಿಗಳ ದಿವ್ಯಸಾನಿಧ್ಯದಲ್ಲಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡ ಭಕ್ತರಿಗೆ ಶ್ರೀಗಳು ಆಶೀರ್ವಚನ ನೀಡಿದರು. ಹಾಗೂ ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಧೀರಜ್ ಮುನಿರಾಜು, ಮಾಜಿ ಶಾಸಕರಾದ ಟಿ.ವೆಂಕಟರಮಣಯ್ಯ, ಕರ್ನಾಟಕ ರಾಜ್ಯ ತಿಗಳ ಮಹಾಸಭಾ ರಾಜ್ಯಾಧ್ಯಕ್ಷರಾದ ಸುಬ್ಬಣ್ಣ(ಮಾಜಿ ಎಸಿಪಿ) ಕರ್ನಾಟಕ ರಾಜ್ಯ ತಿಗಳರ(ವಹ್ನಿಕುಲ ಕ್ಷತ್ರಿಯ)ರಾಜ್ಯಾಧ್ಯಕ್ಷರಾದ ಡಾ. ಮು.ಕೃಷ್ಣಮೂರ್ತಿ ಯವರು,
ಮಂಜುನಾಥ್ ರಾಜ್ಯ ವಹ್ನಿಕುಲ ಕ್ಷತ್ರಿಯ ಸಂಘದ ನಿರ್ದೇಶಕರು, ಕೆಪಿಸಿಸಿ ಮುಖಂಡರಾದ ಲಕ್ಷ್ಮೀಪತಿಯವರು, ಚೇತನ್ ಗೌಡರವರು, ಜಗದೀಶ್ ರವರು, ಡಾ.ವಿಜಯಕುಮಾರ್, ನಾರಾಯಣಗೌಡರು, ವಿಶ್ವಾಸ್ ರಮೇಶ್ ಮಂಜುನಾಥ್ ಸ್ವಾಮಿ ರಾಧಾ ರಾಮಚಂದ್ರ, ನಂಜಮರಿಯಪ್ಪ, ನಾರಾಯಣಸ್ವಾಮಿ, ವಿ.ರಾಮಚಂದ್ರಪ್ಪ, ಲಕ್ಷ್ಮಿ ನಾಗೇಶ್, ರವಿ ತೇಜಸ್ವಿನಿ, ಎಂಪಿಸಿಎಸ್ ಅಧ್ಯಕ್ಷರಾದ ಆರ್ ಮುನಿರಾಜು, ನಿರ್ದೇಶಕರಾದ ಜೋಗಿ ಆನಂದ್ ಸೇರಿದಂತೇ ಗ್ರಾಮದ ಎಲ್ಲಾ ಜನಾಂಗದ ಪ್ರತಿಯೊಬ್ಬರೂ ಭಾಗವಹಿಸಿ ಕಾರ್ಯಕ್ರಮವನ್ನ ಯಶಸ್ವಿಗೊಳಿಸಿದ್ದಾರೆ.

