ಪಗಡಲಬಂಡೆ ಬ್ಯಾರೇಜ್‌ಗೆ ಬಾಗಿನ ಅರ್ಪಿಸಿದ ಕಾರಜೋಳ

News Desk

ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ತಾಲ್ಲೂಕಿನ ಪಗಡಲಬಂಡೆ ಬ್ಯಾರೇಜ್ ತುಂಬಿದ್ದು ಈ ಭಾಗದ ಸುತ್ತಮುತ್ತಲ ಸಾವಿರಾರು ಎಕರೆ ಜಮೀನಿಗೆ ನೀರಾವರಿ ಸೌಲಭ್ಯ ದೊರಕಿ
, ಜನ, ಜಾನುವಾರುಗಳು ಸಮೃದ್ದಿಯಾಗಿದೆ ಎಂದು ಲೋಕಸಭಾ ಸದಸ್ಯ ಗೋವಿಂದ ಎಂ.ಕಾರಜೋಳ ತಿಳಿಸಿದರು.

ಅವರು ತಾಲ್ಲೂಕಿನ ಪಗಡಲಬಂಡೆ ಬ್ಯಾರೇಜ್‌ಗೆ ತೆರಳಿ ಬ್ಯಾರೇಜ್ ತುಂಬಿದ ಪರಿಣಾಮವಾಗಿ ಬಾಗಿನ ಅರ್ಪಿಸಿ ಮಾತನಾಡಿದರು.

- Advertisement - 

ರಾಜ್ಯದ ವಿವಿಧ ಭಾಗಗಳಲ್ಲಿ ಈ ಹಿಂದೆ ಬಾಗಿನ ಅರ್ಪಿಸುವ ಸಂದರ್ಭದಲ್ಲಿ ನಮ್ಮಲ್ಲೂ ಈ ಅವಕಾಶ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದೆ. ಈ ಭಾಗದ ಜನರ ಭಕ್ತಿ, ಭಾವನೆಗಳಿಗೆ ಭಗವಂತನ ಕೃಪೆ ದೊರಕಿದೆ. ವಿಶೇಷವಾಗಿ ಕಳೆದ ತಿಂಗಳು ಸುರಿದ ಮಳೆಗೆ ವಿವಿ ಸಾಗರ ತುಂಬಿ ಕೋಡಿಬಿದ್ದಿದ್ದೆ. ಹೆಚ್ಚಾದ ನೀರು ವೇದಾವತಿ ನದಿ ಮೂಲಕ ಆಂಧ್ರ ಪ್ರದೇಶದ ಬಿಟಿಪಿ ಡ್ಯಾಂಗೆ ಹರಿಸಲಾಗುತ್ತದೆ.

ಇದರಿಂದ ಪಗಡಲಬಂಡೆ ಬ್ಯಾರೇಜ್ ತುಂಬಿದ್ದು ಈ ಭಾಗದ ಸುತ್ತಮುತ್ತಲ ಸಾವಿರಾರು ಎಕರೆ ಜಮೀನಿಗೆ ನೀರಾವರಿ ಸೌಲಭ್ಯ ದೊರಕಿದೆ. ವಿಶೇಷವಾಗಿ ಎಲ್ಲಾ ಪಂಪ್‌ಸೆಟ್‌ಗಳಿಗೆ ಜೀವಕಳೆ ತುಂಬಿದೆ. ಪ್ರತಿವರ್ಷವೂ ಪಗಡಲಬಂಡೆ ಬ್ಯಾರೇಜ್ ತುಂಬಿ ಹರಿಯಲಿ, ಮತ್ತೆ ಎಲ್ಲರೊಂದಿಗೆ ಬಾಗಿನ ಅರ್ಪಿಸುವ ಸುದಿನ ನಿರಂತರವಾಗಿ ಎಲ್ಲರಿಗೂ ಸಿಗಲಿ ಎಂದು ದೇವರನ್ನು ಪ್ರಾರ್ಥಿಸುವುದಾಗಿ ತಿಳಿಸಿದರು.

- Advertisement - 

ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಟಿ.ಕುಮಾರಸ್ವಾಮಿ ಮಾತನಾಡಿ, ಚಳ್ಳಕೆರೆ ಕ್ಷೇತ್ರದಲ್ಲಿ ಚೆಕ್ ಡ್ಯಾಂಗಳ ನಿರ್ಮಾಣ ಕಾರ್ಯ ಬಹಳ ವರ್ಷಗಳ ಹಿಂದೆಯೇ ನೆರವೇರಿತು. ಪ್ರಾರಂಭದಲ್ಲಿ ಜಾಜೂರುನಲ್ಲಿ ಮೊದಲ ಚೆಕ್‌ಡ್ಯಾಂ ನಿರ್ಮಿಸಲಾಗಿತ್ತು. ಈಗ ಚೌಳೂರು, ಗೋಸಿಕೆರೆ, ಬೊಂಬೇರಹಳ್ಳಿ, ಪರಶುರಾಮಪುರ, ಕಲಮರಹಳ್ಳಿ ಮುಂತಾದವರ ಕಡೆ ಚೆಕ್ ಡ್ಯಾಂಗಳಿದ್ದು ಅಲ್ಲಿನ ನೀರು ಸಾವಿರಾರು ರೈತರಿಗೆ ವರದಾನವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಬಿಜೆಪಿ ಮಾಜಿ ಮಂಡಲಾಧ್ಯಕ್ಷ ಸೂರನಹಳ್ಳಿಶ್ರೀನಿವಾಸ್ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಬಾಳೆಮಂಡಿ ರಾಮದಾಸ್, ಮಾಜಿ ಅಧ್ಯಕ್ಷ  ಎ.ಮುರುಳಿ, ತಾಲ್ಲೂಕು ಮಂಡಲಾಧ್ಯಕ್ಷ ಬಿ.ಎಂ.ಸುರೇಶ್, ತಾಪಂ ಮಾಜಿ ಸದಸ್ಯ ನರಸಿಂಹಪ್ಪ, ಈಶ್ವರನಾಯಕ, ಕರೀಕೆರೆತಿಪ್ಪೇಸ್ವಾಮಿ, ಜಾಜೂರುರವಿ, ದಿನೇಶ್‌ರೆಡ್ಡಿ, ರುದ್ರಮುನಿ ಮುಂತಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

 

 

Share This Article
error: Content is protected !!
";