ದ್ವಿಭಾಷಾ ಶಿಕ್ಷಣ ನೀತಿಗೆ ಒತ್ತಾಯಿಸಿ ಕರವೇ ಪ್ರತಿಭಟನೆ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ದ್ವಿಭಾಷಾ ಶಿಕ್ಷಣ ನೀತಿ ಜಾರಿಗೆ ತರುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಕಛೇರಿ ಆವರಣದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ರಕ್ಷಣಾ ವೇದಿಕೆ ನಾರಾಯಣ ಗೌಡರ ಬಣದಿಂದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು.

- Advertisement - 

     ಪ್ರತಿಭಟನೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕರವೇ ಅಧ್ಯಕ್ಷ ಪುರುಷೋತ್ತಮ್ ಗೌಡ ಮಾತನಾಡಿ ಹಿಂದಿ ನಮ್ಮ ರಾಷ್ಟ್ರ ಭಾಷೆ ಅಲ್ಲ. ಆದರೂ ಹಿಂದಿ ಭಾಷೆಯನ್ನು ಕರ್ನಾಟಕದ ವಿದ್ಯಾರ್ಥಿಗಳಿಗೆ ಬಲವಂತವಾಗಿ ಹೇರಲಾಗುತ್ತಿದೆ. ಉತ್ತರಬಾರತದಲ್ಲಿ ಎರಡು ಭಾಷೆಯ ಶಿಕ್ಷಣ ನೀತಿಯನ್ನು ಅಳವಡಿಸಲಾಗಿದೆ. ಆದರೆ ನಮ್ಮ ರಾಜ್ಯದಲ್ಲಿ ಹಿಂದಿ ಸೇರಿತ್ರಿಭಾಷಾ ಸೂತ್ರ ಅಳವಡಿಸಲಾಗಿದೆ.

- Advertisement - 

ಹಿಂದಿ ನಮ್ಮ ರಾಜ್ಯಕ್ಕೆ ಅವಶ್ಯವಿಲ್ಲ. ನಮ್ಮ ಮಾತೃ ಭಾಷೆಗೆ ಪ್ರಥಮ ಆದ್ಯತೆ ನೀಡಲಾಗಿದ್ದು ವ್ಯವಹಾರಿಕವಾಗಿ ಇಂಗ್ಲಿಷ್ ಭಾಷೆಗೆ ದ್ವಿತೀಯ ಮಾನ್ಯತೆಯನ್ನು ನೀಡಲಾಗಿದೆ. ಮೂರನೇ ಭಾಷೆಯಾಗಿ ಹಿಂದಿಯನ್ನು ನಮ್ಮ ರಾಜ್ಯದ ವಿದ್ಯಾರ್ಥಿಗಳು ಕಲಿಯುವ ಅನಿವಾರ್ಯತೆ ಎದುರಾಗಿದೆ. ಪ್ರಸ್ತುತ ಹಿಂದಿ ಭಾಷೆ ಕಲಿಯುವ ಅವಶ್ಯಕತೆ ನಮ್ಮ ವಿದ್ಯಾರ್ಥಿಗಳಿಗೆ ಇಲ್ಲ. ದಕ್ಷಿಣದ ರಾಜ್ಯಗಳು ಹಿಂದಿ ಭಾಷೆಯನ್ನು ಕಡೆಗಣಿಸಿರುವಾಗ ನಮ್ಮ ರಾಜ್ಯದಲ್ಲಿ ಹಿಂದಿ ಹೇರಿಕೆ ಬೇಕಿಲ್ಲ.

ಹೀಗಾಗಿ ನಮ್ಮ ಸರ್ಕಾರ ಹಿಂದಿ ಭಾಷೆ ಕಲಿಕೆಯನ್ನು ಕೈ ಬಿಡಬೇಕು ಎಂಬುದು ನಮ್ಮ ಆಗ್ರಹ. ಈ ವಿಚಾರವಾಗಿ ಕರವೇ ರಾಜ್ಯಾಧ್ಯಕ್ಷರಾದ ನಾರಾಯಣ ಗೌಡರು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ನವರನ್ನು ಬೇಟಿ ಮಾಡಿ ಅಹವಾಲು ಸಲ್ಲಿಸಿದ್ದಾರೆ. ಮುಖ್ಯಮಂತ್ರಿಗಳು ಸಹ ನಾರಾಯಣ ಗೌಡರ ಮನವಿಯನ್ನು ಪುರಸ್ಕರಿಸಿ ದ್ವಿಭಾಷಾ ನೀತಿಯನ್ನು ಕಡ್ಡಾಯವಾಗಿ ಪರಿಗಣಿಸುವ ಭರವಸೆ ನೀಡಿದ್ದಾರೆ.

- Advertisement - 

ಒಂದು ವೇಳೆ ರಾಜ್ಯ ಸರ್ಕಾರ ದ್ವಿಭಾಷಾ ಸೂತ್ರವನ್ನು ಕಡೆಗಣಿಸಿ ತ್ರಿಭಾಷಾ ಸೂತ್ರ ನೀತಿಗೆ ಮೊರೆ ಹೋದರೆ ಕರವೇ ವತಿಯಿಂದ ಮುಂದಿನ ದಿನಗಳಲ್ಲಿ ಉಗ್ರ ಹೋರಾಟವನ್ನು ರಾಜ್ಯದಾದ್ಯನ್ತ ಹಮ್ಮಿಕೊಳ್ಳಲಾಗುವುದು. ಯಾವುದೇ ಕಾರಣಕ್ಕೂ ಹಿಂದಿ ಭಾಷೆಯನ್ನು ನಮ್ಮ ರಾಜ್ಯದಲ್ಲಿ ಕಲಿಯಲು ಅವಕಾಶ ಕೊಡುವುದಿಲ್ಲ ಎಂದು ಪುರುಷೋತ್ತಮ್ ಗೌಡ ಹೇಳಿದರು.

    ಈ ಸಂದರ್ಭದಲ್ಲಿ ದ್ವಿಭಾಷಾ ಸೂತ್ರ ಒತ್ತಾಯದ ಮನವಿಯನ್ನು ಜಿಲ್ಲಾಧಿಕಾರಿ ಕಚೇರಿಯ ತಹಶೀಲ್ದಾರ್ ರಾಜೀವಲೋಚನ ನೀಡಲಾಯಿತು   

     ಪ್ರತಿಭಟನೆಯಲ್ಲಿ ದೇವನಹಳ್ಳಿ ತಾಲೂಕು ಅಧ್ಯಕ್ಷ ಬಿ. ಟಿ. ಅನಿಲ್ ಕುಮಾರ್, ನೆಲಮಂಗಲ ತಾಲೂಕು ಅಧ್ಯಕ್ಷ ಮಂಜೇಗೌಡ, ಕಲಾವಿದರ ಸಂಘದ ಮಂಜುನಾಥ್, ವೆಂಕಟೇಶ್ ಗೌಡ, ಹುರುಳು ಗುರ್ಕಿ ರಂಗಪ್ಪ, ಲಕ್ಷ್ಮೀನಾರಾಯಣ, ಅಶ್ವಥ್ ಗೌಡ, ವಿಜಯಪುರ ಮುನಿಂದ್ರ, ಮುತ್ತೂರ್ ಬಾಲರಾಜ್, ರೈಲ್ವೇ ಸ್ಟೇಷನ್ ವಿಜಯಕುಮಾರ್, ಶ್ರೀನಾಥ್, ಮಂಜುನಾಥ್, ಪ್ರೇಮಾ ದೇವರಾಜ್, ರವಿಕುಮಾರ್, ಪುಟ್ಟರಾಜ್, ಬೆಟ್ಟಕೋಟೆ ಮುನಿರಾಜ್, ಮೋಹನ್, ರಾಜಣ್ಣ, ಗೋಕ್ರೆ ಮಂಜು ಬಾಲರಾಜ್, ರಂಗಪ್ಪ ಸೇರಿದಂತೆ ಹಲವಾರು ಕರವೇ ಕಾರ್ಯಕರ್ತರು ಭಾಗವಹಿಸಿದ್ದರು.

 

Share This Article
error: Content is protected !!
";