ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಟುಕರ ಪಾಲಿಗೆ ಸ್ವರ್ಗವಾದ ಕರ್ನಾಟಕ ! ಕರ್ನಾಟಕ ಕಾಂಗ್ರೆಸ್ ಸರ್ಕಾರದಲ್ಲಿ ಕಾಮಧೇನುವಿಗೆ, ಗೋರಕ್ಷಕರಿಗೆ ರಕ್ಷಣೆ ಎಂಬುದೇ ಇಲ್ಲ. ಕರಾವಳಿಯಲ್ಲಿ ನಡೆಯುತ್ತಿದ್ದ ಗೋರಕ್ಷಕರ ಮೇಲಿನ ಹಲ್ಲೆ, ಕೊಲೆಗಳು ಬೆಳಗಾವಿಗೂ ತಲುಪಿದೆ ಎಂದು ಬಿಜೆಪಿ ಕಿಡಿಕಾರಿದೆ.
ಅಕ್ರಮವಾಗಿ ಕಸಾಯಿಖಾನೆಗೆ ಕದ್ದೊಯ್ಯುತ್ತಿದ್ದ ಗೋವುಗಳನ್ನು ರಕ್ಷಿಸಿದ್ದ ಶ್ರೀರಾಮಸೇನಾ ಕಾರ್ಯಕರ್ತರನ್ನು ಮತಾಂಧ ಮುಸ್ಲಿಮ್ ಸಂಘಟನೆಯ ಯುವಕರು ಮರಕ್ಕೆ ಕಟ್ಟಿ ಥಳಿಸಿದ್ದಾರೆ.
ಅನೈತಿಕ ಪೊಲೀಸ್‌ಗಿರಿ ಕುರಿತು ಪುಂಖಾನುಪುಂಖವಾಗಿ ಮಾತಾನಾಡುವ ಸಿದ್ದರಾಮಯ್ಯ ಮತ್ತು ಮರಿ ಖರ್ಗೆ ಬೆಳಗಾವಿಯ ಮತಾಂಧರ ಕುರಿತು ಮೌನವಾಗಿದ್ದು, ವೋಟ್ ಬ್ಯಾಂಕ್‌ಗಾಗಿ ಆರೋಪಿಗಳ ರಕ್ಷಣೆಗೆ ನಿಂತಿದ್ದಾರೆ. ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ ಎಲ್ಲಾ ಮತಾಂಧರನ್ನು ಬಂಧಿಸಬೇಕು. ಇಲ್ಲದಿದ್ದರೆ ಮುಂದಾಗುವ ಘಟನೆಗಳಿಗೆ ಸರ್ಕಾರ ಬೆಲೆ ತೆರಬೇಕಾಗುತ್ತದೆ ಎಂದು ಬಿಜೆಪಿ ಆಗ್ರಹ ಮಾಡಿದೆ.