ಧರ್ಮದಂಗಲ್ ಮತ್ತು ಜಾತಿ ಸಂಘರ್ಷದಲ್ಲಿ ತತ್ತರಿಸಿ ಹೋದ ಕರ್ನಾಟಕ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸಿದ್ದರಾಮಯ್ಯ ತಾವು ಅಧಿಕಾರದಲ್ಲಿ ಮುಂದುವರೆಯುವ ಸಲುವಾಗಿ ಮುಸ್ಲಿಂ ತುಷ್ಟೀಕರಣ ವಿಷಯವನ್ನು  ಪದೇಪದೇ ಬಿಜೆಪಿಯತ್ತ ಒಗೀತಾರೆ.

ಅವರು ತಮ್ಮ ಎಲ್ಲ ಶಕ್ತಿಯನ್ನು ಅತ್ತ  ಕೇಂದ್ರೀಕರಿಸಿ ಕೊಂಡು, ಸಕಾರಾತ್ಮಕ ರಾಜಕಾರಣವನ್ನು ಮರೆಯುತ್ತಿದ್ದಾರೆ. ಪಕ್ಷ ಬಲಪಡಿಸುವ ಕೆಲಸದಿಂದಲೂ ದೂರ ಇದ್ದಾರೆ. ಇವರ ಒಳ ಜಗಳ ಬೀದಿ ರಂಪವಾಗಿದೆ. ಇದು ಸಿದ್ದರಾಮಯ್ಯ ಮತ್ತು  ಅವರ ಬಣಕ್ಕೆ ಅನುಕೂಲವಾಗಿ ಪರಿಣಮಿಸಿದೆ. 

- Advertisement - 

ಧರ್ಮಸ್ಥಳ, ಭಾನುಮುಷ್ತಾಕ್, ಗಣೇಶ ಉತ್ಸವಗಳಲ್ಲಿ ಕರ್ನಾಟಕದ ಜನತೆಯನ್ನು ಬಿಜಿಯಾಗಿ ಇಟ್ಟಿರುವ ಸಿದ್ದರಾಮಯ್ಯ ಸರ್ಕಾರ, ಸಾಮಾಜಿಕ ಸಮಾನತೆಯನ್ನು ಸಾಧಿಸುವ ನೆಪದಲ್ಲಿ ಆರ್ಥಿಕ ನಿರ್ವಹಣೆಯಲ್ಲಿ ಮುಗ್ಗುರುಸಿ  ಬಿದ್ದಿದೆ.  ಅಧಿಕಾರಿಗಳು ತಮಗೆ ಇಚ್ಛೆ ಬಂದಂತೆ ಆಡಳಿತ ನಡೆಸುತ್ತಿದ್ದಾರೆ. ಸಾಮಾನ್ಯ ಜನತೆ ಗ್ಯಾರಂಟಿಯ ಅಮಲಿದಲ್ಲಿದ್ದರೆ, ರೈತರು ವ್ಯಾಪಾರಸ್ಥರು, ನಿತ್ಯವೂ ತಳಮಳ ಅನುಭವಿಸುತ್ತಿದ್ದಾರೆ. ಅಧಿಕಾರಶಾಹಿ ಸಾಮಾನ್ಯ ಜನರನ್ನು ಪ್ರತಿ ನಿಮಿಷವು ಶೋಷಿಸುತ್ತಾ ಬರುತ್ತಿದೆ.

 ಇದಲ್ಲದೆ, ಒಳ ಮೀಸಲಾತಿಯ ತುಪ್ಪವನ್ನು ಸವರಿ ದಲಿತರು ಮತ್ತು ಹಿಂದುಳಿದವರನ್ನು ಬೇರೆ ಯಾವುದೇ ರೀತಿಯ ಯೋಚನೆ ಮಾಡದಂತೆ ಮಾಡಿದೆ.  

- Advertisement - 

 ಒಟ್ಟಾರೆಯಾಗಿ ಕರ್ನಾಟಕ ಈಗ ಧರ್ಮದಂಗಲ್ ಮತ್ತು ಜಾತಿ ಸಂಘರ್ಷದಲ್ಲಿ ತತ್ತರಿಸಿ ಹೋಗಿದೆ.  ಹೊಸ ರಾಜಕೀಯ ಶಕ್ತಿಯ ಅಗತ್ಯತೆ ಮುಂದಿನ ದಿನಗಳಲ್ಲಿ ಗೋಚರವಾಗುವ ಎಲ್ಲ ಸಾಧ್ಯತೆಗಳಿವೆ.
ಲೇಖನ-ಚಂದ್ರಶೇಖರ್ ಬೆಳಗೆರೆ, ರಾಮಜೋಗಿಹಳ್ಳಿ, ಹಿರಿಯೂರು.

 

 

Share This Article
error: Content is protected !!
";