ಕರ್ನಾಟಕ ಸಂಘದ ವಾರ್ಷಿಕ ಪುಸ್ತಕ ಬಹುಮಾನದ ಫಲಿತಾಂಶ ಪ್ರಕಟ

khushihost

ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ : 2023 ರಲ್ಲಿ ಪ್ರಕಟವಾದ ಕನ್ನಡ ಸಾಹಿತ್ಯದ ವಿವಿಧ ಪ್ರಕಾರಗಳಿಗೆ ಶಿವಮೊಗ್ಗ ಕರ್ನಾಟಕ ಸಂಘದ ವತಿಯಿಂದ ನೀಡಲಾಗುವ ಪುಸ್ತಕ ಬಹುಮಾನವನ್ನು ಘೋಷಣೆ ಮಾಡಲಾಗಿದೆ.

ಪ್ರೆಸ್ ಟ್ರಸ್ಟಿನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ಘೋಷಣೆ ಮಾಡಿದ ಸಂಘದ ಅಧ್ಯಕ್ಷ ಎಂ. ಎನ್ ಸುಂದರರಾಜು, ಪ್ರಶಸ್ತಿ ಪ್ರದಾನವನ್ನು ಸೆ ೨೨ರಂದು ಕರ್ನಾಟಕ ಸಂಘದ ಹಸೂಡಿ ವೆಂಕಟಶಾಸ್ತ್ರಿ ಸಾಹಿತ್ಯ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ವಿಜೇತರಿಗೆ ತಲಾ ರೂ. ೧೦,೦೦೦ ನಗದು ಪುರಸ್ಕಾರ ಮತ್ತು ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದರು.

ಬಹುಮಾನದ ವಿವರ :

ಕುವೆಂಪು (ಕಾದಂಬರಿ) ಬಹುಮಾನ ಡಾ|| ಕೆ ಬಿ ಪವಾರ್ ಅವರ ಕೊಳ್ಳ ಕೃತಿಗೆ,

ಪ್ರೊ, ಎಸ್.ವಿ. ಪರಮೇಶ್ವರ ಭಟ್ಟ (ಅನುವಾದ) ಬಹುಮಾನ ಪ್ರೊ. ರಾಜಾರಾಮ್ ತಲ್ಲೂರು ಅವರ ಎಂ. ಡಾಕ್ಯುಮೆಂಟ್ ಕೃತಿಗೆ , ಎಂ.ಕೆ. ಇಂದಿರಾ (ಮಹಿಳಾ ಸಾಹಿತ್ಯ) ಬಹುಮಾನ ಪ್ರೊ. ಕಾತ್ಯಾಯಿನಿ ಕುಂಜಿಬೆಟ್ಟು ಅವರ ಇರವಿನ ಅರಿವು ಕೃತಿಗೆ,

ಪಿ. ಲಂಕೇಶ್ (ಮುಸ್ಲಿಂ ಬರಹಗಾರರು) ಬಹುಮಾನ ಅದೀಬ್ ಅಖ್ತರ್ ಅವರ ಸಂಪಿಗೆಯ ಪರಿಮಳ ಕೃತಿಗೆ,

ಜಿ. ಎಸ್. ಶಿವರುದ್ರಪ್ಪ (ಕವನ ಸಂಕಲನ) ಬಹುಮಾನ ಎನ್ ಎಸ್ ಚಾಂದ್ ಪಾಷಾ ಅವರ ಒದ್ದೆಗಣ್ಣಿನ ದೀಪ ಕೃತಿಗೆ,

ಹಾ. ಮಾ. ನಾಯಕ (ಅಂಕಣ ಬರಹಗಾರರು) ಬಹುಮಾನ ಗುರುರಾಜ್ ಎಸ್. ದಾವಣಗೆರೆ ಅವರ ಹಸಿರು ಮಂಥನ ಕೃತಿಗೆ,

ಯು. ಆರ್. ಅನಂತಮೂರ್ತಿ (ಸಣ್ಣ ಕಥಾ ಸಂಕಲನ) ಬಹುಮಾನ ಗೋವಿಂದರಾಜು ಎಂ. ಕಲ್ಲೂರು ಅವರ ನಕ್ಷತ್ರಕ್ಕಂಟಿದ ಮುಟ್ಟಿನ ನೆತ್ತರು ಕೃತಿಗೆ, ಕೆ. ವಿ. ಸುಬ್ಬಣ್ಣ (ನಾಟಕ) ಬಹುಮಾನ ಶಿವಕುಮಾರ್ ಮಾವಲಿ ಅವರ ಒಂದು ಕಾನೂನಾತ್ಮಕ ಕೊಲೆ ಕೃತಿಗೆ, ಕುಕ್ಕೆ ಸುಬ್ರಹ್ಮಣ್ಯ ಶಾಸ್ತ್ರಿ (ಪ್ರವಾಸ ಸಾಹಿತ್ಯ) ಬಹುಮಾನ ಪ್ರೊ. ರಹಮತ್ ತರಿಕೆರೆ ಅವರ ಜೆರುಸಲೆಂ ಕೃತಿಗೆ, ಹಸೂಡಿ ವೆಂಕಟಶಾಸ್ತ್ರಿ (ವಿಜ್ಞಾನ ಸಾಹಿತ್ಯ) ಬಹುಮಾನ ಡಾ|| ಎಸ್. ಎನ್ ಹೆಗಡೆ ಅವರ ಜೀವವೈವಿಧ, ವನ್ಯಜೀವಿಗಳು ಮತ್ತು ಸಂರಕ್ಷಣೆ ಕೃತಿಗೆ,

ನಾ. ಡಿಸೋಜ (ಮಕ್ಕಳ ಸಾಹಿತ್ಯ) ಬಹುಮಾನ ಲತಾ ಕೆ. ಹೊಸಪ್ಯಟಿ ಅವರ ಬ್ಯೂಟಿ ಬೆಳ್ಳ್ಳಕ್ಕಿ ಕೃತಿಗೆ,

ಡಾ|| ಹೆಚ್. ಡಿ. ಚಂದ್ರಪ್ಪಗೌಡ (ವೈದ್ಯ ಸಾಹಿತ್ಯ) ಬಹುಮಾನ ಡಾ|| ಶ್ರೀಲಕ್ಷ್ಮೀ ಶ್ರೀನಿವಾಸನ್ ಅವರ ಕಣ್ಣು ಬೆರಗು ಬವಣೆ ಕೃತಿಗೆ ದೊರೆತಿದೆ ಎಂದರು.

ಪತ್ರಿಕಾಗೋಷ್ಟಿಯಲ್ಲಿ ಕರ್ನಾಟಕ ಸಂಘದ ಪದಾಧಿಕಾರಿಗಳಾದ ಮೋಹನ್ ಶಾಸ್ತ್ರಿ, ವಿನಯ್, ಪ್ರೊ. ನಾಗವೇಣಿ, ಚೇತನ್ ಹಾಜರಿದ್ದರು.

ಕರ್ನಾಟಕ ಸಂಘ ಪ್ರತಿತಿಂಗಳು ನಡೆಸಿಕೊಂಡು ಬಂದಿರುವ ತಿಂಗಳ ಅತಿಥಿ ಕಾರ್ಯಕ್ರಮ ಈ ತಿಂಗಳು ೧೪ರಂದು ನಡೆಯಲಿದೆ. ಸಂಜೆ ೫:೩೦ಕ್ಕೆ ಸಂಘದ ಸಭಾಭವನದಲ್ಲಿ ನಡೆಯಲಿರುವ ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳು ಮತ್ತು ಭಾಷಣಕಾರರಾಗಿ ನಿವೃತ್ತ ಡಿಜಿಪಿ ಡಿ ವಿ ಗುರುಪ್ರಸಾದ್ ಆಗಮಿಸುವರು. ವೃತ್ತಿ ಜೀವನದ ರೋಚಕ ಘಟನೆಗಳು ಕುರಿತು ಅವರು ಮಾತನಾಡುವರು. ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಎಂ.ಎನ್ ಸುಂದರರಾಜು ವಹಿಸುವರು.

- Advertisement -  - Advertisement - 
Share This Article
error: Content is protected !!
";