ಕರ್ನಾಟಕ ಎಟಿಎಂ ಮಾಡಿಕೊಂಡಿರುವ ವಸೂಲಿವಾಲಾ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಹಲೋ ಮಿಸ್ಟರ್‌ ವಸೂಲಿವಾಲಾ
?@rssurjewala
ಕರ್ನಾಟಕವನ್ನು ಎಟಿಎಂ
ಮಾಡಿಕೊಂಡು ಲೂಟಿಹೊಡೆಯುತ್ತಿರುವ ಕರ್ನಾಟಕ ಕಾಂಗ್ರೆಸ್ ಪಕ್ಷದ MonthlyCollection ಏಜೆಂಟ್‌, ಕರ್ನಾಟಕದ ಹೆಮ್ಮೆಯ ಎಚ್‌ಎಂಟಿ ಸಂಸ್ಥೆಯ ಇತಿಹಾಸದ ಬಗ್ಗೆ ನಿಮಗೇನು ಗೊತ್ತು? ಎಂದು ಜೆಡಿಎಸ್ ತೀಕ್ಷ್ಣವಾಗಿ ಪ್ರಶ್ನಿಸಿದೆ.

ಬೆಂಗಳೂರಲ್ಲಿ ರಿಯಲ್‌ ಎಸ್ಟೇಟ್‌ ದಂಧೆ ಮಾಡುತ್ತಿರುವವರು ಯಾರು? ಈ ಪ್ರಶ್ನೆಯನ್ನು ಕಾಂಗ್ರೆಸ್‌ ನಾಯಕರನ್ನೇ ಕೇಳಿ ಮನದಟ್ಟು ಮಾಡಿಕೊಳ್ಳುವುದು ಒಳಿತು.

- Advertisement - 

ಕೇಂದ್ರ ಸಚಿವರಾದ ಹೆಚ್.ಡಿ ಕುಮಾರಸ್ವಾಮಿ ಅವರ ಬಗ್ಗೆ ಆಧಾರರಹಿತ, ಇಲ್ಲ ಸಲ್ಲದ ಸುಳ್ಳು ಆರೋಪ ಮಾಡುವುದನ್ನು ನಿಲ್ಲಿಸಿ ಎಂದು ಜೆಡಿಎಸ್ ತಾಕೀತು ಮಾಡಿದೆ. 

2006ರಲ್ಲಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ಹೆಚ್‌ಎಂಟಿ ವಶದಲ್ಲಿರುವ ಜಮೀನನ್ನು ಖಾಸಗಿಯವರಿಗೆ ಮಾರಾಟ ಮಾಡುವಂತಿಲ್ಲ ಎಂಬ ಆದೇಶ ಮಾಡಿದ್ದರು. ಇದು ಯಾಕೆ ಎಂದು ತಿಳಿದಿದೆಯೇ ?

- Advertisement - 

1999ರಿಂದ 2004ರ ವರೆಗೆ ಕರ್ನಾಟಕದಲ್ಲಿ ಯಾವ ಸರ್ಕಾರ ಇತ್ತು? ಆ ಅವಧಿಯಲ್ಲಿ ಹೆಚ್‌ಎಂಟಿ ಸಂಸ್ಥೆಗೆ ಸೇರಿದ್ದ ನೂರಾರು ಎಕರೆ ಜಮೀನನ್ನು ಅಕ್ರಮವಾಗಿ ರಿಯಲ್‌ ಎಸ್ಟೇಟ್‌ ಮಾಫಿಯಾಕ್ಕೆ ಮಾರಾಟ ಮಾಡಿ ದುಡ್ಡು ಮಾಡಿದ್ದು ಯಾರು?

1999ರಿಂದ 2004ರ ಅವಧಿಯಲ್ಲಿ ರಾಜ್ಯದ ನಗರಾಭಿವೃದ್ಧಿ ಸಚಿವ ಯಾರಾಗಿದ್ದರು ಗೊತ್ತಿದ್ಯಾ ಸುರ್ಜೇವಾಲಾ ಎಂದು ಜೆಡಿಎಸ್ ಹರಿಹಾಯ್ದಿದೆ.

ತಮ್ಮ ಕುಟುಂಬದ ರಿಯಲ್‌ ಎಸ್ಟೇಟ್‌ ಉದ್ಯಮ ವಿಸ್ತರಣೆಗಾಗಿ ರಾಮನಗರ ಜಿಲ್ಲೆಯನ್ನು “ಬೆಂಗಳೂರು ದಕ್ಷಿಣ” ಮಾಡಿದ್ದರ ಬಗ್ಗೆ ಯಾಕೆ ತುಟಿ ಬಿಚ್ಚುತ್ತಿಲ್ಲ ?

ಎಚ್‌ಎಂಟಿ ಸಂಸ್ಥೆ ಪುನಶ್ಚೇತನಕ್ಕೆ ಕೇಂದ್ರ ಸಚಿವರಾದ ಹೆಚ್‌.ಡಿ.ಕುಮಾರಸ್ವಾಮಿ ಅವರು ಶತಪ್ರಯತ್ನ ಪಡುತ್ತಿದ್ದಾರೆ. ಆದರೆ, ಅವರ ಅಭಿವೃದ್ಧಿ ಕೆಲಸಗಳನ್ನು ಸಹಿಸದ ಕಾಂಗ್ರೆಸ್‌ ಸರ್ಕಾರ, ಹೆಚ್‌ಎಂಟಿ ಸಂಸ್ಥೆಗೆ ಸೇರಿರುವ ಜಮೀನಿನ ಬಗ್ಗೆ ಅನವಶ್ಯವಾಗಿ ವಿವಾದ ಹುಟ್ಟುಹಾಕಿ, ದ್ವೇಷ ರಾಜಕಾರಣ ಮಾಡುತ್ತಿರುವುದು ರಾಜ್ಯದ ಜನರಿಗೆ ಗೊತ್ತಿರುವ ಸತ್ಯ ಎಂದು ಜೆಡಿಎಸ್ ಹೇಳಿದೆ.

1960ರ ಹಿಂದೆ ಕೊಟ್ಟಿರುವ ಎಷ್ಟು ಅರಣ್ಯ ಜಾಗಗಳನ್ನು ಇಲ್ಲಿಯವರೆಗೂ ವಾಪಸ್‌ ಪಡೆದಿದ್ದೀರಿ? ಕೇಂದ್ರ ಸರ್ಕಾರಿ ಸ್ವಾಮ್ಯದ HMTಗೆ ಅನ್ವಯವಾಗುವ ರಾಜ್ಯ ಸರ್ಕಾರದ ನಿಯಮಗಳು ಬೇರೆ ಕಾರ್ಖಾನೆಗಳಿಗೆ ಅನ್ವಯವಾಗುವುದಿಲ್ಲವೇ ? “ಜೈವಿಕ ಉದ್ಯಾನವನ”ದ ಬಗ್ಗೆ ಮಾತನಾಡುವ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರೇ ರಾಜ್ಯದ ಜನರಿಗೆ ಸ್ಪಷ್ಟಪಡಿಸಿ ಎಂದು ಜೆಡಿಎಸ್ ಆಗ್ರಹ ಮಾಡಿದೆ.

Share This Article
error: Content is protected !!
";